ಹಿಲರಿ ಬೆಂಬಲಿಗರಿಗೆ ಶಸ್ತ್ರಾಸ್ತ್ರ ಮಾರಾಟ ಇಲ್ಲ!

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 1: ಮುಸಲ್ಮಾನರಿಗೆ ಮತ್ತು ಹಿಲರಿ ಕ್ಲಿಂಟನ್ ಬೆಂಬಲಿಗರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಮೆರಿಕದ ಶಸ್ತ್ರಾಸ್ತ್ರ ಮಾರಾಟ ಅಂಗಡಿ ಮಾಲೀಕರೊಬ್ಬರು ಪ್ರಕಟಿಸಿದ್ದು, ಈ ಬಗ್ಗೆ ದಿನಪತ್ರಿಕೆಯಲ್ಲೂ ಜಾಹೀರಾತು ಪ್ರಕಟಿಸಿದ್ದಾರೆ.

ಪೆನ್ಸಿಲ್ವೇನಿಯಾದ ಜಾಕ್ಸನ್ ಸೆಂಟರ್ ನಲ್ಲಿರುವ 'ಅಲ್ಟ್ರಾ ಫೈರ್ ಆರ್ಮ್ಸ್ ಎಂಬ ಶಸ್ತ್ರಾಸ್ತ್ರ ಮಾರಾಟ ಅಂಗಡಿ ಮಾಲೀಕ ಪೌಲ್ ಚಾಂದ್ಲೆರ್ ಎನ್ನುವವರು ಈ ರೀತಿಯ ವಿವಾದ ಸೃಷ್ಟಿಸಿದ್ದಾರೆ.

US gun store's owner says won't sell Clinton backers

ಅಂಗಡಿ ಮುಂದೆ ಶಸ್ತ್ರಾಸ್ತ್ರಗಳ ಖರೀದಿಗೆ ರೂಪಿಸಿರುವ ನಿಯಮಾವಳಿಗಳ ಪಟ್ಟಿಯನ್ನು ಪೌಲ್ ಪ್ರಕಟಿಸಿದ್ದು, 'ಉಗ್ರರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದರಿಂದ ನಾವು ಸರುಕ್ಷಿತವಾಗಿರಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಶಸ್ತ್ರಾಸ್ತ್ರ ಖರೀದಿಗೆ ಬರುವ ಹಿಲರಿ ಬೆಂಬಲಿಗರು ಮತ್ತು ಮುಸಲ್ಮಾನರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಗಡಿ ಮಾಲೀಕ ಪೌಲ್ "ಹಿಲರಿ ಅವರು ಅಮೆರಿಕನ್ನರಿಗೆ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ ಎಂದು ಹೇಳಿದ್ದರು, ಅಷ್ಟೇ ಅಲ್ಲದೇ ಜನರ ಬಳಿಯಿರುವ ಆಯುಧಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಅವರ ಬೆಂಬಳಿಗರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಇನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಬೆಂಬಲಿಗರಿಗೂ ನರಕಕ್ಕೆ ಹೋಗಿ ಎಂದು ಪೌಲ್ ಅಂಗಡಿ ಮುಂದೆ ಫಲಕ ಬರೆಸಿದ್ದು, ಮುಸಲ್ಮಾನರಿಗೆ ಶಸ್ತ್ರಾಸ್ತ್ರಗಳನ್ನು ಮಾರುವುದು ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.

ಅಮೆರಿಕ ನಾಶಕ್ಕೆ ಮತ್ತು ಅಮೆರಿಕ ಜೀವನ ಶೈಲಿ ನಾಶಗೊಳಿಸಲು ಮುಸಲ್ಮಾನರು ಸಜ್ಜಾಗಿದ್ದಾರೆ. ಆದ್ದರಿಂದ ಅವರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡದೇ ಇರುವುದರಿಂದ ನಾವು ಸುರಕ್ಷಿತವಾಗಿರುತ್ತೇವೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A US gun store owner has put up a controversial sign and published an advertisement in a daily refusing to sell arms to Muslims and Hillary Clinton backers, saying "we do not feel safe selling to terrorists".
Please Wait while comments are loading...