ಧಗಧಗ ಅಲ್ಲ, ಭಗಭಗ: ಅಮೆರಿಕದ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಜ್ವಾಲೆ!
ಅಮೆರಿಕ ಇದೀಗ ಹೊತ್ತಿ ಉರಿಯುತ್ತಿದೆ, ಇದಕ್ಕೆ ಕಾರಣ ಬೇಸಿಗೆಯೂ ಅಲ್ಲ. ಯಾವುದೋ ಕಾಡ್ಗಿಚ್ಚು ಕೂಡ ಹೊತ್ತಿಕೊಂಡಿಲ್ಲ. ಆದರೆ ಇಸ್ರೇಲ್ ವಿರುದ್ಧ ಅಮೆರಿಕದ ಜನ ತಿರುಗಿಬಿದ್ದ ಕಾರಣಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ. ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಾ, ಜನರು ಪ್ರತಿಭಟನೆ ಮಾಡುತ್ತಿದ್ದು. ಜೋ ಬೈಡನ್ ಸರ್ಕಾರವು ಪರಿಸ್ಥಿತಿ ನಿಯಂತ್ರಿಸಲು ವಿಲವಿಲನೆ ಒದ್ದಾಡುತ್ತಿದೆ.
ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾಗಿ, 7 ತಿಂಗಳು ಕಳೆದಿದ್ದರೂ ಯುದ್ಧ ನಿಲ್ಲುತ್ತಿಲ್ಲ. ಆದರೆ ಉಗ್ರರ ನೆಪ ಹೇಳಿ ಇಸ್ರೇಲ್ ಸೇನೆ ಅಮಾಯಕ ಜನರ ರಕ್ತವನ್ನು ಹರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಇಸ್ರೇಲ್ ಯುದ್ಧ ನಿಲ್ಲಿಸಲಿ ಅಂತಾ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೋರಾಟ ಶುರುವಾಗಿದೆ. ಹೀಗಿದ್ದರೂ ಇಸ್ರೇಲ್ ಮಾತ್ರ ಇದಕ್ಕೆ ಕೇರ್ ಮಾಡುತ್ತಿಲ್ಲ. ಇದರ ಪರಿಣಾಮ ಕಾಡ್ಗಿಚ್ಚು ಹೊತ್ತಿಕೊಂಡು, ಫೈಟ್ ಬಲು ಜೋರಾಗಿದೆ. ಈ ಸಮಯದಲ್ಲಿ ಅಮೆರಿಕ ಕೂಡ ದೊಡ್ಡ ಎಡವಟ್ಟು ಮಾಡಿಕೊಂಡು ಇಸ್ರೇಲ್ ಪರ ನಿಂತಿದೆ. ಇದು ಅಮೆರಿಕದ ಜನರನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ.

ಕಾಲೇಜು ವಿದ್ಯಾರ್ಥಿಗಳು ಫುಲ್ ಗರಂ!
ಹೀಗೆ ತಮ್ಮ ದೇಶದ ಸರ್ಕಾರ ಅಂದ್ರೆ ಅಮೆರಿಕದ ಬೈಡನ್ ಸರ್ಕಾರ, ಇಸ್ರೇಲ್ ಪರವಾಗಿದೆ ಎಂಬ ಸುದ್ದಿ ಅಮೆರಿಕದ ಜನರನ್ನು ಕೆರಳಿಸುತ್ತಿದೆ. ಇಸ್ರೇಲ್ ಎಷ್ಟೇ ತಪ್ಪು ಮಾಡಿದ್ದರೂ, ಅದನ್ನ ಸಮರ್ಥನೆ ಮಾಡಿಕೊಳ್ಳುತ್ತಿದೆ ಅಮೆರಿಕ ಎಂಬ ಆರೋಪ ಕೂಡ ಇದೆ. ಈ ಕಾರಣಕ್ಕೆ ಅಮೆರಿಕದ ಕಾಲೇಜು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದ ಹತ್ತಾರು ವಿಶ್ವವಿದ್ಯಾಲಯಗಳಲ್ಲಿ ಬೆಂಕಿ ಹೊತ್ತಿದ್ದು, ವಿದ್ಯಾರ್ಥಿಗಳು ಹಿಂಸಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಈಗ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸೇರಿದಂತೆ ಲಾಸ್ ಏಂಜಲೀಸ್ ಕ್ಯಾಂಪಸ್‌ನಲ್ಲಿ ಪ್ಯಾಲೆಸ್ತೀನ್ ಪರ & ಇಸ್ರೇಲ್ ವಿರುದ್ಧ ಹೋರಾಟ ಮಾಡುವಾಗ ಬೆಂಕಿಯೇ ಹೊತ್ತಿಕೊಂಡಿದೆ.
💔🇵🇸 ARMED ZIONISTS BRUTALIZED pro-Palestine student protesters at the University of California Los Angeles last night. pic.twitter.com/4JIaB0kLtx
— Jackson Hinkle 🇺🇸 (@jacksonhinklle) May 1, 2024
ಕಾಲೇಜ್ ಕ್ಯಾಂಪಸ್ ವಾರ್ ಜೋರು!
ಹೋರಾಟ ನಡೆಯುವ ಸಮಯದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸುವ ಹೋರಾಟಗಾರರು ಮತ್ತು ಇಸ್ರೇಲ್ ಪರ ಇರುವ ಜನರ ನಡುವೆ ದೊಡ್ಡ ಘರ್ಷಣೆ ಶುರುವಾಗಿದೆ. ಹೀಗಾಗಿ ಹಿಂಸಾತ್ಮಕ ಪ್ರತಿಭಟನೆ ಆರಂಭ ಆಗಿದ್ದು ನೂರಾರು ಜನ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗೆ ಪ್ರತಿಭಟನೆ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಇಸ್ರೇಲ್ & ಪ್ಯಾಲೆಸ್ತೀನ್ ಬೆಂಬಲಿಗರು ದೊಣ್ಣೆ & ಕಲ್ಲುಗಳಿಂದ ಬಡಿದಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅಲ್ಲದೆ ಪಟಾಕಿ ರೀತಿಯ ಸ್ಫೋಟಕ ವಸ್ತುಗಳನ್ನು ಕೂಡ ಒಬ್ಬರ ಮೇಲೆ ಮತ್ತೊಬ್ಬರು ಎಸೆದಾಡಿದ್ದಾರೆ.
ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ತೀನ್ ಜನ ನಲುಗಿದ್ದು ಗಾಜಾಪಟ್ಟಿ ಭೂಮಿ ಮೇಲಿನ ನರಕವಾಗಿ ಬದಲಾಗಿ ಹೋಗಿದೆ. ಹೀಗಿದ್ದಾಗ ಅಮೆರಿಕ ಸರ್ಕಾರ ಇಸ್ರೇಲ್ ಪರವಾಗಿ ನಿಲ್ಲುತ್ತಿದೆ, ಅಂತ ಅಮೆರಿಕದಲ್ಲಿ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿ ಕೆಲ ವಾರಗಳಿಂದ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಇದು ಅಮೆರಿಕದ ಶಾಂತಿಗೂ ಭಂಗ ತರುತ್ತಿದ್ದು, ಇದೀಗ ಹಿಂಸೆ ಭುಗಿಲೆದ್ದಿದೆ.












Click it and Unblock the Notifications