US Election 2024: ಅಮೆರಿಕ ಚುನಾವಣೆ ಅಖಾಡದಲ್ಲಿ ‘ಕಸ’ ಕಿತ್ತಾಟ!
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಅಖಾಡದಲ್ಲಿ ಈಗ 'ಕಸ' ಗಲಾಟೆ ಜೋರಾಗಿದೆ. ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಇದೇ ಕಾರಣಕ್ಕೆ ಅಮೆರಿಕದಲ್ಲಿ ಭಾರತದ ರೀತಿಯಲ್ಲೇ ಚುನಾವಣೆ ನಡೆಸಲಾಗುತ್ತದೆ. ಇದೀಗ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಬೇಡದ ವಿಚಾರಕ್ಕೆ ದೊಡ್ಡ ಗಲಾಟೆ ಆರಂಭವಾಗಿದೆ. ಅದ್ರಲ್ಲೂ 'ಕಸ' ಎಂಬ ಪದ, ದೊಡ್ಡ ತಿಕ್ಕಾಟಕ್ಕೆ ದಾರಿ ಮಾಡಿ ಕೊಟ್ಟಿದೆ. ಹಾಗಾದ್ರೆ ಭಾರತ ಮೂಲದ ಅಮೆರಿಕದ ರಾಜಕಾರಣಿ ಇದೀಗ ಟ್ರಂಪ್ ಪರವಾಗಿ ಹೇಳಿದ್ದೇನು?
ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ? ಜಗತ್ತಿನ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಪಟ್ಟ ಯಾರಿಗೆ? ಎಂಬ ಪ್ರಶ್ನೆಗಳು ಕಾಡುವ ಸಮಯದಲ್ಲೇ ಸಿಲ್ಲಿ ಸಿಲ್ಲಿ ವಿಚಾರಕ್ಕೂ ಫೈಟಿಂಗ್ ಜೋರಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಕಳೆದ ಕೆಲವು ದಿನಗಳಿಂದ 'ಕಸ' ಪದದ ಬಳಕೆ ಬಲು ಜೋರಾಗಿದೆ. ಜೋ ಬೈಡನ್ & ಕಮಲಾ ವಿರುದ್ಧ ಡೊನಾಲ್ಡ್ ಟ್ರಂಪ್ & ಬೆಂಬಲಿಗರು ತಿರುಗಿಬಿದ್ದಿದ್ದಾರೆ. ಇದೇ ಸಮಯದಲ್ಲಿ ಭಾರತ ಮೂಲದ ಅಮೆರಿಕ ರಾಜಕಾರಣಿ ಜೋ ಬೈಡನ್‌ಗೆ ಯಾವ ರೀತಿ ಉತ್ತರ ನೀಡಿದ್ದಾರೆ ಗೊತ್ತೆ?

'ಕಸ' ಹೇಳಿಕೆ VS ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರನ್ನು 'ಕಸ' ಎಂದು ಕಸಕ್ಕೆ ಹೋಲಿಕೆ ಮಾಡಿದ್ದ ಹಿನ್ನೆಲೆ ಈಗ ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಸಖತ್ ಆಗಿ ಉತ್ತರ ಸಿಗುತ್ತಿದೆ. ಒಂದು ದಿನದ ಹಿಂದಷ್ಟೇ ಡೊನಾಲ್ಡ್ ಟ್ರಂಪ್ ಅವರು ಕಸದ ಲಾರಿ ಓಡಿಸಿ ಬೈಡನ್‌ಗೆ ಬೆವರು ಇಳಿಸಿದ್ದರು, ಅಲ್ಲದೆ ತಮ್ಮ ಬೆಂಬಲಿಗರ ಬಗ್ಗೆ ಮಾತನಾಡಿದ್ದ ಬೈಡನ್‌ಗೆ ಉತ್ತರ ನೀಡಿದ್ದರು ಡೊನಾಲ್ಡ್ ಟ್ರಂಪ್.
ಟ್ರಂಪ್ ಬೆಂಬಲಿಗರನ್ನು 'ಕಸ' ಎಂದು ಕಸಕ್ಕೆ ಹೋಲಿಕೆ ಮಾಡಿದ್ದ ಕಾರಣಕ್ಕೆ, ಡೊನಾಲ್ಡ್ ಟ್ರಂಪ್ ಕಸದ ಗಾಡಿ ಓಡಿಸಿ ತಕ್ಕ ಉತ್ತರ ನೀಡಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಈ ಮಧ್ಯೆ ಭಾರತ ಮೂಲದ ಅಮೆರಿಕದ ರಾಜಕಾರಣಿ ಕೂಡ ಜೋ ಬೈಡನ್‌ಗೆ ಸರಿಯಾದ ಉತ್ತರವನ್ನೇ ಈಗ ಕೊಟ್ಟಿದ್ದಾರೆ. ಹಾಗಾದ್ರೆ ಯಾರದು ಭಾರತ ಮೂಲದ ಅಮೆರಿಕದ ರಾಜಕಾರಣಿ? ಮುಂದೆ ಓದಿ.
ನಾವು ಕಸ ಅಲ್ಲ, ಕಸ ಕ್ಲೀನ್...
ಡೊನಾಲ್ಡ್ ಟ್ರಂಪ್ ಪರವಾಗಿ ನಿಂತಿರುವ ರಿಪಬ್ಲಿಕನ್ ಪಕ್ಷದ ನಾಯಕ ವಿವೇಕ್ ರಾಮಸ್ವಾಮಿ ಅವರು, ನಾವು ಕಸ ಅಲ್ಲ. ಆದರೆ ನಾವು ಕಸವನ್ನು ಕ್ಲೀನ್ ಮಾಡಲು ಬಂದಿದ್ದೀವಿ ಎಂದು ಹೇಳಿದ್ದಾರೆ. ಈ ಮೂಲಕ ಉತ್ತರ ಕರೋಲಿನಾ ಪ್ರದೇಶದಲ್ಲಿ ಕಸ ಸ್ವಚ್ಛಗೊಳಿಸಿದ ಭಾರತ ಮೂಲದ ಅಮೆರಿಕದ ರಾಜಕಾರಣಿ ವಿವೇಕ್ ರಾಮಸ್ವಾಮಿ ಅವರು, ಜೋ ಬೈಡನ್‌ಗೆ ಈ ಸಮಯದಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ಹಾಗೇ ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಕೂಡ ಭಾರತ ಮೂಲದ ಅಮೆರಿಕದ ರಾಜಕಾರಣಿ ಆತ್ಮವಿಶ್ವಾಸದ ಮಾತುಗಳನ್ನ ಆಡಿದ್ದಾರೆ.












Click it and Unblock the Notifications