Us Electoin Updates: ಗಾಜಾ ಸಮಸ್ಯೆಯಿಂದ ಕೈತಪ್ಪುತ್ತಿದೆ ಮುಸ್ಲಿಂ ಮತ!
ಅಮೆರಿಕ ಚುನಾವಣೆಯು ಕೊನೆಯ ಹಾಗೂ ನಿರ್ಣಾಯಕ ಹಂತವನ್ನು ತಲುಪಿದೆ. ಅಮೆರಿಕ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ಪ್ರಮುಖ್ಯತೆ ಪಡೆದುಕೊಂಡಿದೆ. ಅಮೆರಿಕದ ಚುನಾವಣೆಯಲ್ಲಿ ಈ ಬಾರಿ ಗಾಜಾದ ಬಿಕ್ಕಟ್ಟು ಚುನಾವಣೆ ವಿಷಯವಾಗುತ್ತಿದ್ದು, ಎರಡೂ ಪ್ರಮುಖ ಪಕ್ಷಗಳಿಗೂ ಮುಸ್ಲಿಂ ಮತಗಳು ತಪ್ಪುವ ಆತಂಕ ಎದುರಾಗಿದೆ.
ಅಮೆರಿಕ ಚುನಾವಣೆಗೆ ಇನ್ನು ಒಂದೇ ಒಂದು ದಿನ ಬಾಕಿ ಉಳಿದಿದ್ದು, ಡೆಮಾಕ್ರಟಿಕ್ ಹಾಗೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಾಗೂ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ. ಅಮೆರಿಕದ ಇತಿಹಾಸದಲ್ಲೇ ಇಷ್ಟೊಂದು ಜಿದ್ದಾಜಿದ್ದಿನ ಚುನಾವಣೆ ನಡೆದಿಲ್ಲ ಎಂದೇ ಹೇಳಲಾಗುತ್ತಿದೆ.

ವಿಶ್ವದ ದೊಡ್ಡಣ್ಣ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದಲ್ಲಿ ಮುಸ್ಲಿಂ ಸಮುದಾಯವು ಈ ಬಾರಿ ಗಾಜಾ ವಿಷಯವನ್ನು ಪ್ರಧಾನವಾಗಿ ಇರಿಸಿಕೊಂಡಿವೆ. ಗಾಜಾ ಸಮಸ್ಯೆಗೆ ಅಥವಾ ಬಿಕ್ಕಟ್ಟನ್ನು ಯಾರು ಪರಿಹರಿಸುತ್ತಾರೋ ಇಲ್ಲ. ಸಹಾನುಭೂತಿ ಹೊಂದಿದ್ದಾರೋ ಅವರಿಗೆ ಮತ ನೀಡಲು ಮುಸ್ಲಿಂ ಸಮುದಾಯ ನಿರ್ಧರಿಸಿದೆ ಎನ್ನಲಾಗಿದೆ.
ಅಮೆರಿಕದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮಧ್ಯಪ್ರಾಚ್ಯದ ಯುದ್ಧೋನ್ಮದದ ರಾಷ್ಟ್ರಗಳಲ್ಲಿ ಅಮೆರಿಕದ ಅಧ್ಯಕ್ಷ ಯಾರಾಗುತ್ತಾರೆ ಎನ್ನುವುದು ಅತ್ಯಂತ ನಿರ್ಣಾಯಕವಾಗುತ್ತದೆ. ಇನ್ನು ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿದ್ದ ಯುದ್ಧ ವಿಚಾರದಲ್ಲಿ ಮೂಗು ತೂರಿಸುತ್ತಿರಲಿಲ್ಲ.

ಆದರೆ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಉಕ್ರೇನ್ - ರಷ್ಯ, ಇರಾನ್ ಹಾಗೂ ಇಸ್ರೇಲ್ ಸೇರಿದಂತೆ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ತೀವ್ರಗೊಂಡ ಉದಾಹರಣೆ ಇದೆ. ಕೆಲವು ರಾಷ್ಟ್ರಗಳಿಗೆ ಅಮೆರಿಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದೆ. ಉಕ್ರೇನ್‌ನಂತಹ ಸಣ್ಣ ದೇಶ ರಷ್ಯದಂತಹ ದೈತ್ಯ ರಾಷ್ಟ್ರದ ಮುಂದೆ ಸೆಣಸಿತ್ತು. ಇದಕ್ಕೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈ ಸಂದರ್ಭದಲ್ಲಿ ಉಕ್ರೇನ್‌ಗೆ ನೆರವಿನ ಹಸ್ತ ಚಾಚಿದ್ದವು.
ಗಾಜಾ ಬಿಕ್ಕಟ್ಟು: ಗಾಜಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಇದರಿಂದ ಸಣ್ಣ ಮಕ್ಕಳು ಸೇರಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಈ ಭಾಗದ ಮನೆಗಳು ನಾಮಾವಶೇಷವಾಗಿದೆ. ಇಡೀ ಊರಿಗೆ ಊರಲ್ಲೇ ಸ್ಮಶಾನ ಮೌನ ಆವರಿಸಿದೆ. ಇದೀಗ ಅಮೆರಿಕ ಚುನಾವಣೆ ನಡೆಯುತ್ತಿದ್ದು, ಅಮೆರಿಕದ ಮುಸ್ಲಿಂ ಸಮುದಾಯ ಗಾಜಾ ಹಾಗೂ ಅಲ್ಲಿನ ಜನರಿಗಾಗಿ ಮಿಡಿಯುತ್ತಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಇರುವ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರ ಬಗ್ಗೆ ಹಾಗೂ ಅವರ ಮಾತಿನ ಬಗ್ಗೆ ಮುಸ್ಲಿಂ ಸಮುದಾಯ ಇಲ್ಲಿ ಆಶಾದಾಯಕವಾಗಿ ಇಲ್ಲ. ಅಲ್ಲದೇ, ಡೆಮಾಕ್ರಟಿಕ್ ಪಕ್ಷವು ಗಾಜಾ ಸಮಸ್ಯೆಯ ಬಗ್ಗೆ ಮೃಧುಧೋರಣೆ ಅನುಸರಿಸುತ್ತಿಲ್ಲ ಎನ್ನುವ ಅಭಿಪ್ರಾಯ ಇಲ್ಲಿನ ಹಲವು ಮುಸ್ಲಿಂ ಸಮುದಾಯ ಹೊಂದಿದೆ.
ಚುನಾವಣೆ ಪ್ರಚಾರ ಅಸಮಾಧಾನ: ಇನ್ನು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಬಗ್ಗೆ ಅಮೆರಿಕನ್ನರು ಅಸಮಾಧಾನ ಹೊಂದಿದ್ದಾರೆ. ಆರೋಪ - ಪ್ರತ್ಯಾರೋಪ ಹಾಗೂ ಜನಾಂಗೀಯ ನಿಂದನೆ ಹಾಗೂ ಬೈಗುಳವೇ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿದೆ.












Click it and Unblock the Notifications