US Election: ಟ್ರಂಪ್ ಗೆದ್ದರೆ ಒಬಾಮಕೇರ್ ನಿಲ್ಲಿಸಬಹುದು; ಕಮಲಾ ಹ್ಯಾರಿಸ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಹಂತಕ್ಕೆ ತಲುಪಿದೆ. ನವೆಂಬರ್ 5ರಂದು ಚುನಾವಣೆ ನಡೆಯಲಿದ್ದು ಅಖಾಡ ರಂಗೇರಿದೆ. ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಚುನಾವಣಾ ದಿನ ಹತ್ತಿರವಾದಂತೆ ಇಬ್ಬರ ನಡುವೆ ತೀವ್ರ ವಾಗ್ದಾಳಿ ನಡೆಯುತ್ತಿದೆ.
ಕಮಲಾ ಹ್ಯಾರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದಿದ್ದು ಟ್ರಂಪ್ ಅಧಿಕಾರಕ್ಕೆ ಬಂದರೆ ಒಬಾಮಾಕೇರ್ ಆರೋಗ್ಯ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ ಎಂದು ಮತದಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಪ್ರಚಾರ ರ್‍ಯಾಲಿಯಲ್ಲಿ ಮಹಿಳೆಯರ ಮೇಲೆ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ ಎಂದು ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.

ಪತರಿಕಾಗೋಷ್ಠಿ ನಡೆಸಿದ ಕಮಲಾ ಹ್ಯಾರಿಸ್ ಅವರು ಬರಾಕ್ ಒಬಾಮಾ ಅವರ ಅವಧಿಯಲ್ಲಿ ಜಾರಿಗೆ ತಂದಿದ್ದ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಕೇರ್ ಆಕ್ಟ್ (ಒಬಾಮಾಕೇರ್) ಅನ್ನು ರದ್ದುಗೊಳಿಸುವ ಸಾಧ್ಯತೆ ಇದೆ, 2017 ರಿಂದ 2021 ರವರೆಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಇಂತಹ ಪ್ರಯತ್ನ ಮಾಡಿದ್ದರು ಎಂದು ಹೇಳಿದ್ದಾರೆ.
ಒಬಾಮಕೇರ್ ಕಾರ್ಯಕ್ರಮವನ್ನು ನಿಲ್ಲಿಸುತ್ತಾರೆ ಎನ್ನುವ ಆರೋಪಗಳಿಗೆ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಆರೋಗ್ಯ ಕಾರ್ಯಕ್ರಮ ನಿಲ್ಲಿಸುವ ಉದ್ದೇಶವನ್ನು ತಾವು ಹೊಂದಿಲ್ಲ, ಅಂತಹ ಯೋಚನೆಯನ್ನೇ ಮಾಡಿಲ್ಲ ಎಂದು ಹೇಳಿದ್ದಾರೆ. ಕಮಲಾ ಹ್ಯಾರಿಸ್ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ.
ಹಾರ್ವರ್ಡ್ ವಿವಿಯಲ್ಲಿ ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್ ತನ್ನ ಅಲ್ಮಾ ಮೇಟರ್, ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಚುನಾವಣಾ ರಾತ್ರಿಯನ್ನು ಕಳೆಯಲು ನಿರ್ಧರಿಸಿದ್ದಾರೆ. 1986 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿಯಲ್ಲಿರುವ ಕಾಲೇಜಿನಿಂದ ಪದವಿ ಪಡೆದರು.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ಚುನಾವಣಾ ರಾತ್ರಿ ವೀಕ್ಷಣೆ ಪಾರ್ಟಿಯನ್ನು ಆಯೋಜಿಸಲಿದ್ದಾರೆ.
ಅಂತರರಾಷ್ಟ್ರೀಯ ಸೂಪರ್‌ಸ್ಟಾರ್ ಮತ್ತು ರಾಪರ್ ಕಾರ್ಡಿ ಬಿ ಅವರು ಶುಕ್ರವಾರ ಹ್ಯಾರಿಸ್‌ಗಾಗಿ ಪ್ರಮುಖ ಯುದ್ಧಭೂಮಿ ರಾಜ್ಯ ವಿಸ್ಕಾನ್ಸಿನ್‌ನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಮಿಲ್ವಾಕೀಯಲ್ಲಿ "ವೆನ್ ವಿ ವೋಟ್ ವಿ ವಿನ್" ಎನ್ನುವ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಾರ್ಡಿ ಬಿ ಮತ್ತು ಫ್ಲೋ ಮಿಲ್ಲಿ, ಗ್ಲೋರಿಲ್ಲಾ, ಎಂಸಿ ಲೈಟ್, ಡಿಜೆ ಜೆಮಿನಿ ಗಿಲ್ಲಿ ಮತ್ತು ಇಸ್ಲೇ ಬ್ರದರ್ಸ್ ಸೇರಿದಂತೆ ಇತರ ಹೆಸರಾಂತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ಹ್ಯಾರಿಸ್ ಮತ್ತು ಟ್ರಂಪ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಫಲಿತಾಂಶಗಳು ಅನಿಶ್ಚಿತವಾಗಿದೆ. ಯುಎಸ್ ಚುನಾವಣಾ ಇತಿಹಾಸದಲ್ಲೇ ರೋಚಕ ಫಲಿತಾಂಶ ಬರಬಹುದು ಎಂದು ರಾಜಕಿಯ ವಿಶ್ಲೇಷಕರು ಅಂದಾಜಿಸಿದ್ದಾರೆ.












Click it and Unblock the Notifications