ಯೋಗ ಕಲಿಕೆ ಹಿಂದು ಧರ್ಮದ ಪ್ರಸಾರವಲ್ಲ
ವಾಷಿಂಗ್ಟನ್, ಏ. 5: ಯೋಗ ಕಲಿಕೆ ಆರೋಗ್ಯಕ್ಕೆ ಪೂರಕ, ಇದು ಯಾವ ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವಾಗಲ್ಲ. ಶಾಲೆಗಳಲ್ಲಿ ಯೋಗ ಶಿಕ್ಷಣ ನೀಡುವುದು ಮಕ್ಕಳ ಮೇಲೆ ಹಿಂದು ಧರ್ಮವನ್ನು ಹೇರಿದಂತಾಗುವುದಿಲ್ಲ ಎಂದು ಕ್ಯಾಲಿಫೋರ್ನಿಯಾದ ಸ್ಯಾನ್‌ಡಿಯಾಗೊ ನ್ಯಾಯಾಲಯ ತೀರ್ಪು ನೀಡಿದೆ.
ಇತ್ತೀಚೆಗಷ್ಟೇ ಸ್ಯಾನ್ ಡಿಯಾಗೋದ ಪ್ರಾಥಮಿಕ ಶಾಲೆಯಲ್ಲಿ ಯೋಗ ಕಲಿಕೆ ಕಡ್ಡಾಯ ಮಾಡಲಾಗಿತ್ತು. ಆದರೆ ಯೋಗಾಭ್ಯಾಸ ಹಿಂದು ಧರ್ಮದ ಆಚರಣೆ. ಶಾಲೆಯಲ್ಲಿ ಯೋಗ ಕಲಿಕೆ ಕಡ್ಡಾಯ ಮಾಡುವ ಮೂಲಕ ಹಿಂದು ಧರ್ಮವನ್ನು ಹೇರಲಾಗುತ್ತಿದೆ. ಈ ಕಾರಣಕ್ಕಾಗಿ ಧರ್ಮ ವಿರೋಧಿ ಕೃತ್ಯ ನಿಲ್ಲಿಸಬೇಕು ಎಂದು ಪಾಲಕರೊಬ್ಬರು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಯೋಗ ಕಲಿಕೆಯನ್ನು ಎತ್ತಿ ಹಿಡಿದಿದೆ.[ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]

ಸ್ಟೀಫನ್ ಮತ್ತು ಸೆಟ್ ಲಾಕ್ ಎಂಬುವರು ಯೋಗ ಕಲಿಕೆ ಹಿಂದು ಧರ್ಮವನ್ನು ಬೋಧಿಸಲಿದ್ದು, ಕ್ರಿಶ್ಚಿಯನ್ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿ ದಾಖಲಿಸಿದ್ದರು. ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಲಯ ಯೋಗ ಕಲಿಕೆ ತಪ್ಪಲ್ಲ ಎಂದು ತೀರ್ಪು ನೀಡಿದೆ.[ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ]
ಅಮೆರಿಕದ ಎಲ್ಲ ಶಾಲೆಗಳಲ್ಲೂ ಯೋಗ ಶಿಕ್ಷಣವನ್ನು ಹೇಳಿಕೊಡಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಯೋಗಕ್ಕೆ ವಿಶ್ವ ಮನ್ನಣೆ ದೊರೆಯಬೇಕೆಂದು ಪ್ರತಿಪಾದಿಸಿದ್ದರು.












Click it and Unblock the Notifications