Donald Trump: ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಆಘಾತ ನೀಡಿದ ಅಮೆರಿಕ ಕೋರ್ಟ್, ತೆರಿಗೆ ಯುದ್ಧಕ್ಕೆ ಬ್ರೇಕ್!

ಡೊನಾಲ್ಡ್ ಟ್ರಂಪ್ ಏನೇನೋ ಮಾಡೋಕೆ ಹೋಗಿ ಅಮೆರಿಕದ ಹೆಸರು ಕೆಡಿಸುತ್ತಿರುವ ಭಾರಿ ಗಂಭೀರ ಆರೋಪ ಇದೆ. ಈ ಪೈಕಿ ತೆರಿಗೆ ಯುದ್ಧ ಸಾರಿದ್ದ ಡೊನಾಲ್ಡ್ ಟ್ರಂಪ್ ಪ್ರಪಂಚದ ಮಟ್ಟದಲ್ಲಿ ಅಮೆರಿಕದ ಮಾನ ಹರಾಜು ಹಾಕುತ್ತಿದ್ದರು. ಅಮೆರಿಕದ ಸ್ನೇಹಿತ ದೇಶಗಳ ಜೊತೆ ಕೂಡ ತೆರಿಗೆ ವಾರ್ ಮಾಡುತ್ತಿದ್ದಾರೆ ಡೊನಾಲ್ಡ್ ಟ್ರಂಪ್ ಎಂಬ ಆರೋಪ ಇದೆ. ಹೀಗಿದ್ದಾಗ ದಿಢೀರ್ ಟ್ರಂಪ್ ಆಡಳಿತಕ್ಕೆ ಆಘಾತ ನೀಡಿದೆ ಅಮೆರಿಕದ ವಾಣಿಜ್ಯ ನ್ಯಾಯಾಲಯ.

ಅಂದಹಾಗೆ, ಅಧ್ಯಕ್ಷರು ಅಮೆರಿಕದ ವ್ಯಾಪಾರ ಪಾಲುದಾರರಿಂದ ಆಮದುಗಳ ಮೇಲೆ ವ್ಯಾಪಕ ಸುಂಕ ವಿಧಿಸುವ ಮೂಲಕ ತಮ್ಮ ಅಧಿಕಾರವನ್ನು ಮೀರಿದ್ದಾರೆ ಅಂತಾ ಇದೀಗ ಅಮೆರಿಕದ ವಾಣಿಜ್ಯ ನ್ಯಾಯಾಲಯ ಹೇಳಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತರಲು ಮುಂದಾಗಿದ್ದ ವ್ಯಾಪಕ ತೆರಿಗೆ ನೀತಿಗೆ ಬ್ರೇಕ್ ಹಾಕಿದೆ ಅಮೆರಿಕದ ವಾಣಿಜ್ಯ ನ್ಯಾಯಾಲಯ. ಅಲ್ಲದೆ ಅಮೆರಿಕ ಕಾಂಗ್ರೆಸ್‌ಗೆ ಮಾತ್ರ ವಾಣಿಜ್ಯ ನೀತಿ ನಿಯಮ ರೂಪಿಸುವ ಅಧಿಕಾರವನ್ನು ಅಮೆರಿಕ ಸಂವಿಧಾನ ನೀಡಿದೆ ಎಂಬುದನ್ನು ಕೂಡ ಇದೀಗ ಕೋರ್ಟ್ ಜ್ಞಾಪಿಸಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೈಲೆಂಟ್ ಆಗಿ ಇರುವ ಪರಿಸ್ಥಿತಿ ನಿರ್ಮಾಣ ಆಗಿದೆ.

US Court Overturns Most Trump Tariffs for Exceeding Authority

ಡೊನಾಲ್ಡ್ ಟ್ರಂಪ್ ಕಿರಿಕ್‌ಗೆ ಬ್ರೇಕ್!

ಹೌದು, ಭಾರತ & ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳ ಜೊತೆಗೆ ಡೊನಾಲ್ಡ್ ಟ್ರಂಪ್ ಕಿರಿಕ್ ಶುರು ಮಾಡಿದ್ದರು. ತೆರಿಗೆ ವಿಚಾರವನ್ನೇ ಮುಂದೆ ಇಟ್ಟುಕೊಂಡು, ಭಾರಿ ದೊಡ್ಡದಾದ ತಿಕ್ಕಾಟ ಶುರು ಮಾಡಿದ್ದರು. ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ಚರ್ಚೆ ಜೋರಾಗಿ ಚೀನಾ ಕೊನೆಗೆ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿತ್ತು. ಆದರೆ ಈಗ ಅಮೆರಿಕದ ವಾಣಿಜ್ಯ ನ್ಯಾಯಾಲಯ ಅದೆಲ್ಲದಕ್ಕೂ ಇದೀಗ ಬ್ರೇಕ್ ಹಾಕಿದೆ. ಅಲ್ಲದೆ ಡೊನಾಲ್ಡ್ ಟ್ರಂಪ್ ಕಿರಿಕ್‌ಗೆ ಈ ಮೂಲಕ ತಡೆ ಬಿದ್ದಂತೆ ಆಗಿದೆ.

ಕೊನೆಗೂ ಖುಷಿಯಾದ ಹಲವು ದೇಶಗಳು!

ಚೀನಾ ವಿರುದ್ಧ ಹೆಚ್ಚಿನ ತೆರಿಗೆ ಹಾಕುತ್ತಾ, ಟ್ಯಾಕ್ಸ್ ವಾರ್ ಮಾಡುತ್ತಿರುವುದು ಕೊನೆಗೆ ಅಮೆರಿಕ ಬುಡಕ್ಕೇ ಸಮಸ್ಯೆ ಉಂಟು ಮಾಡುವ ಭಯ ಇತ್ತು. ಯಾಕೆ ಅಂದರೆ ಚೀನಾ ರಫ್ತು ಮಾಡುವ ವಸ್ತುಗಳು ಇಲ್ಲದೆ ಅಮೆರಿಕ ಜೀವನ ನಡೆಸಲು ಆಗಲ್ಲ. ಅಷ್ಟು ಪ್ರಮಾಣದಲ್ಲಿ ಎರಡು ದೇಶಗಳ ನಡುವೆ ವ್ಯಾಪಾರ & ವಹಿವಾಟುಗಳು ನಡೆಯುತ್ತಾ ಬಂದಿವೆ. ಇಂತಹ ಸಮಯದಲ್ಲಿ ದಿಢೀರ್ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಚೀನಾ ವಿರುದ್ಧ ಭಾರಿ ತೆರಿಗೆ ಹಾಕುತ್ತಾ, ಚೀನಾ ಕೂಡ ಈ ನಿರ್ಧಾರಕ್ಕೆ ತಿರುಗೇಟು ನೀಡುತ್ತಾ ಭಯ ಹುಟ್ಟು ಹಾಕಿದ್ದವು. ಆದರೆ, ಇದೀಗ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು ವ್ಯಾಪಾರಿಗಳಿಗೆ ನೆಮ್ಮದಿ ಸಿಕ್ಕಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+