ಅಮೆರಿಕ: ಅಲ್ ಖೈದಾಗೆ ನೆರವು ನೀಡಿದವನಿಗೆ 18ವರ್ಷ ಜೈಲು

ನ್ಯೂಯಾರ್ಕ್, ಅ.1: ಇತ್ತ ಭಾರತದಲ್ಲಿ ಬಂಧಿತ ಉಗ್ರರು ಒಬ್ಬೊಬ್ಬರಾಗಿ ಜೈಲುಗಳಿಂದ ಪರಾರಿಯಾಗುತ್ತಿರುವಾಗ ಅತ್ತ ಅಮೆರಿಕ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತಷ್ಟು ಖಡಕ್ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ ಖೈದಾಗೆ ನೆರವು ನೀಡಿದ ಸುಶಿಕ್ಷತನೊಬ್ಬನಿಗೆ ಎಂಥಾ ಶಿಕ್ಷೆ ನೀಡಿದೆಯೆಂದರೆ...

ಅಲ್ ಖೈದಾಗೆ ಹಣಕಾಸು ನೆರವು ನೀಡಿದ ಅಮೆರಿಕದ ಪ್ರಜೆಗೆ ನಿನ್ನೆ 18 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಬೇರೆ ಯಾರೂ ಸಹ ಹೀಗೆ ಭಯೋತ್ಪಾದನೆಗೆ ನೆರವು ನೀಡಬಾರದು ಎಂದು ಮಾದರೀಯ ರೀತಿಯಲ್ಲಿ ಈ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

ಅಮೆರಿಕ ಮತ್ತು ಆಸ್ಟ್ರೇಲಿಯಾದ ಪೌರತ್ವ ಹೊಂದಿರುವ ಶಬೀರಾನ್ ಹಸನಾಫ್ ಎಂಬ 37 ವರ್ಷದ ವ್ಯಕ್ತಿ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದೂ ನ್ಯಾಯಾಧೀಶರು ಹೇಳಿದ್ದಾರೆ. ಜತೆಗೆ ಶಬೀರಾನ್ ಗೆ ಸೇರಿದ 7- ಸಾವಿರ ಡಾಲರ್ ಹಣವನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಸೂಚಿಸಿದೆ.

ತನಿಖಾಧಿಕಾರಿಗಳು ಕೋರಿದ್ದಕ್ಕಿಂತ ಹೆಚ್ಚಿಗೆ ಶಿಕ್ಷೆ

ತನಿಖಾಧಿಕಾರಿಗಳು ಕೋರಿದ್ದಕ್ಕಿಂತ ಹೆಚ್ಚಿಗೆ ಶಿಕ್ಷೆ

ಇದು ಭಯೋತ್ಪಾದನೆ ವಿರುದ್ಧ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮ ಎಂದೇ ಹೇಳಬಹುದು. ಏಕೆಂದರೆ ತನಿಖಾಧಿಕಾರಿಗಳು ಕೋರಿದ್ದಕ್ಕಿಂತ 5 ವರ್ಷ ಹೆಚ್ಚಿಗೆ ತಪ್ಪಿತಸ್ಥನಿಗೆ ನ್ಯಾಯಾಧೀಶರು ಜೈಲುವಾಸ ಶಿಕ್ಷೆ ವಿಧಿಸಿದ್ದಾರೆ.

New York Stock Exchangeಗೇ ಗುನ್ನ ಸಂಚು

New York Stock Exchangeಗೇ ಗುನ್ನ ಸಂಚು

'ಶಬೀರಾನ್ 2007ರಿಂದ 2010ರವರೆಗೆ ದೀರ್ಘಕಾಲ ಅಲ್ ಖೈದಾಗೆ ಭಾರಿ ನೆರವು ನೀಡಿದ್ದಾನೆ. ಆರ್ಥಿಕ ನೆರವು ನೀಡುವುದರ ಜತೆಗೆ ಬಾಂಬ್ ಸ್ಫೋಟಗಳಿಗಾಗಿ ಅತ್ಯಾಧುನಿಕ ಉಪಕರಣಗಳ ಖರೀದಿಯೂ ಮಾಡಿದ್ದಾನೆ. ಅಷ್ಟೇ ಅಲ್ಲ New York Stock Exchange ಬಗ್ಗೆ ಮಾಹಿತಿ ಒದಗಿಸಿದ್ದಾನೆ. ಅಲ್ ಖೈದಾ ಜತೆ ಗುರುತಿಸಿಕೊಂಡವರಿಗೆ ಶಬೀರಾನ್ ನಿರಂತರವಾಗಿ ಹಣ ಸಂದಾಯವನ್ನೂ ಮಾಡಿದ್ದಾನೆ' ಎಂದು ಕೋರ್ಟಿಗೆ ಮನದಟ್ಟಾಗಿದೆ. (Pix courtesy:morganjones.co.uk)

ಬೇರೆಯವರು ಕುಕೃತ್ಯಗಳಿಗೆ ಕೈಹಾಕದಂತೆ ಉಗ್ರ ಶಿಕ್ಷೆ

ಬೇರೆಯವರು ಕುಕೃತ್ಯಗಳಿಗೆ ಕೈಹಾಕದಂತೆ ಉಗ್ರ ಶಿಕ್ಷೆ

ಹಾಗಾಗಿ ಬೇರೆಯವರು ಇಂತಹ ಕುಕೃತ್ಯಗಳಿಗೆ ಕೈಹಾಕದಂತೆ ಎಚ್ಚರಿಕೆಯ ರೂಪದಲ್ಲಿ ಶಬೀರಾನ್ ಗೆ ಉಗ್ರ ಶಿಕ್ಷೆ ವಿಧಿಸಲಾಗಿದೆ ಎಂದು ಜಡ್ಜ್ ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಶಬೀರಾನ್ Manhattan Baruch College ನಲ್ಲಿ ಪದವಿ ಪಡೆದ ಬಳಿಕ PricewaterhouseCoopersನಲ್ಲಿ ಮ್ಯಾನೇಜರ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಇವನಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. 2010ರಲ್ಲಿ ಇವನನ್ನು ದುಬೈನಲ್ಲಿ ಅಮೆರಿಕದ ಪೊಲೀಸರು ಬಂಧಿಸಿದಾಗ ಅಲ್ಲಿನ ದೊಡ್ಡ ಕಂಪನಿಯೊಂದರಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ.

ಅಲ್ ಖೈದಾ ಜತೆ ಸೇರಿ ಬರಬಾದ್ ಆದೆ:

ಅಲ್ ಖೈದಾ ಜತೆ ಸೇರಿ ಬರಬಾದ್ ಆದೆ:

'ಅಲ್ ಖೈದಾ ಸಂಪರ್ಕದಲ್ಲಿದ್ದಾಗ ಶಬೀರಾನ್ ಬಳಸುತ್ತಿದ್ದ ಒಂದೆರಡು ಸಂಕೇತಾಕ್ಷಗಳು ಹೀಗಿವೆ: jihadಗೆ safari ಎಂದೂ ಜೈಲು ಸೇರಿದರೆ hospitalized ಎಂದು ಇಂಟರ್ನೆಟ್ ಚಾಟ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದನಂತೆ. ತನ್ನ ಕುಕೃತ್ಯಗಳಿಗೆ ಕ್ಷಮೆಯಾಚಿಸಿರುವ ಶಬೀರಾನ್, ಸುಶಿಕ್ಷಿತನಾದ ತಾನು ಹೀಗೆ ಉಗ್ರರೊಂದಿಗೆ ಕೈಜೋಡಿಸಬಾರದಿತ್ತು. ನಾನು ನನ್ನ ಜೀವನ ನನ್ನ ಸಂಸಾರ ಎಲ್ಲವೂ ಸುಸ್ಥಿತಿಯಲ್ಲಿತ್ತು. ಆದರೆ ನಾನಿಂದು ಬರಬಾದ್ ಆದೆ' ಎಂದು ಶಬೀರಾನ್ ಕೋರ್ಟ್ ತೀರ್ಪು ಕೇಳಿ ಗೋಳಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+