ತೈಲ ಪೂರೈಕೆ ನಿಲ್ಲಿಸೋಕೆ ಸಾಧ್ಯವಿಲ್ಲ: ಅಮೆರಿಕಕ್ಕೆ ಇರಾನ್ ತಿರುಗೇಟು

ಜಿನೀವಾ, ಡಿಸೆಂಬರ್ 4: ಇರಾನ್‌ ತನ್ನ ತೈಲ ರಫ್ತು ಮಾಡುವುದನ್ನು ತಡೆಯಲು ಅಮೆರಿಕಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಗಲ್ಫ್ ಮೂಲಕ ಇರಾನ್‌ ಕಚ್ಚಾ ತೈಲ ಸಾಗಾಟವಾಗುವುದನ್ನು ತಡೆಯಲು ಮುಂದಾದರೆ ಎಲ್ಲ ತೈಲ ರಫ್ತುದಾರರ ಜಲಮಾರ್ಗಗಳೂ ಬಂದ್ ಆಗಲಿವೆ ಎಂದು ಇರಾನ್ ಅಧ್ಯಕ್ಷರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಲ್ಲಿ ಅಮೆರಿಕ, ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿದೆ. ಭಾರತ ಸೇರಿದಂತೆ ಇರಾನ್‌ನಿಂದ ತೈಲ ಖರೀದಿ ಮಾಡುತ್ತಿರುವ ಎಲ್ಲ ದೇಶಗಳೂ ಹಂತ ಹಂತವಾಗಿ ತೈಲ ಆಮದು ಕಡಿತಗೊಳಿಸಿ ಸಂಪೂರ್ಣ ಸ್ಥಗಿತಗೊಳಿಸುವಂತೆ ಮಾಡುವುದು ಅಮೆರಿಕದ ಗುರಿಯಾಗಿದೆ.

ಇದಕ್ಕೆ ತಿರುಗೇಟು ನೀಡಿರುವ ಇರಾನ್, ನಾವು ನಮ್ಮ ತೈಲವನ್ನು ಮಾರಾಟ ಮಾಡುತ್ತಿದ್ದೇವೆ ಮತ್ತು ನಮ್ಮ ತೈಲವನ್ನು ಮಾರಾಟ ಮಾಡುವುದನ್ನು ಮುಂದುವರಿಸಲಿದ್ದೇವೆ ಹಾಗೂ ನಮ್ಮ ತೈಲ ರಫ್ತನ್ನು ಸ್ಥಗಿತಗೊಳಿಸಲು ಅವರಿಗೆ ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ತಿಳಿಯಬೇಕು ಎಂದು ಹೇಳಿದೆ.

united states america iran oil export president hassan rouhani sanctions

ಇರಾನ್ ತೈಲದ ರಫ್ತನ್ನು ತಡೆಯಲು ಒಮ್ಮೆ ಅವರು ಪ್ರಯತ್ನಿಸಿದರೆ, ಪರ್ಷಿಯನ್ ಗಲ್ಫ್‌ನಿಂದ ಯಾರೂ ತೈಲವನ್ನು ರಫ್ತು ಮಾಡುವುದಿಲ್ಲ ಎಂದು ಅಧ್ಯಕ್ಷ ಹಸನ್ ರೌಹಾನಿ ಹೇಳಿದರು.

ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ತನ್ನ ಆರ್ಥಿಕ ನಂಟನ್ನು ಕಡಿತಗೊಳಿಸುವಲ್ಲಿ ಅಮೆರಿಕ ಯಶಸ್ವಿಯಾಗುವುದಿಲ್ಲ ಎಂದು ರೌಹಾನಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+