ರಷ್ಯಾಗೆ ಚೀನಾ ಮಾರಕ ಶಸ್ತ್ರಾಸ್ತ್ರ ಕಳುಹಿಸುತ್ತಿದೆಯಾ?
ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಈಗ ಒಬ್ಬಂಟಿ ಆಗಿದೆ. ಹೀಗಿದ್ದಾಗ ರಷ್ಯಾ ಬೆನ್ನಿಗೆ ನಿಲ್ಲಲು ಯಾವುದೇ ದೇಶಗಳು ಮುಂದೆ ಬರುತ್ತಿಲ್ಲ. ಅದರಲ್ಲೂ ಅಮೆರಿಕಗೆ ಹೆದರಿ, ರಷ್ಯಾ ಜೊತೆಗಿನ ಸ್ನೇಹ ಮುರಿಯುತ್ತಿವೆ ಕೆಲವು ದೇಶಗಳು. ಹೀಗಿದ್ದಾಗ ಚೀನಾ ಮಾತ್ರ ತನ್ನ ಹಳೇ ಸ್ನೇಹಿತ ರಷ್ಯಾಗೆ ಭಾರಿ ಪ್ರಮಾಣದಲ್ಲಿ ವಿನಾಶಕಾರಿ ಅಸ್ತ್ರಗಳನ್ನು ಸಪ್ಲೈ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಷ್ಯಾ ಜೊತೆಗೆ ಯಾವುದೇ ರೀತಿಯ ವ್ಯವಹಾರ ನಡೆಸಬಾರದು. ಅದರಲ್ಲೂ, ಶಸ್ತ್ರಾಸ್ತ್ರಗಳ ಖರೀದಿ ಅಥವಾ ಮಾರಾಟದ ಒಪ್ಪಂದ ಮಾಡಿಕೊಳ್ಳಬಾರದು ಎಂದು ಈಗಾಗಲೇ ಅಮೆರಿಕ & ನ್ಯಾಟೋ ದೇಶಗಳು ಕಟ್ಟಪ್ಪಣೆ ಹೊರಡಿಸಿವೆ. ಆದರೂ ಈ ಆದೇಶಕ್ಕೆ ರಷ್ಯಾ ಕೇರ್ ಮಾಡಿಲ್ಲ, ಹಾಗೇ ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳು ಗುಟ್ಟಾಗಿ ರಷ್ಯಾ ಸೇನೆಗೆ ಬಲ ತುಂಬುತ್ತಿವೆ ಎಂಬ ಆರೋಪ ಇದೆ. ಈಗ ಈ ಆರೋಪವು ಚೀನಾ ತಲೆಗೆ ಸುತ್ತಿಕೊಂಡಿದ್ದು, ರಷ್ಯಾ ವಿರುದ್ಧ ಬ್ರಿಟನ್ ಗಂಭೀರ ಆರೋಪ ಮಾಡಿದೆ.

ರಷ್ಯಾಗೆ ಚೀನಾದಿಂದ ಶಸ್ತ್ರಾಸ್ತ್ರ?
ಅಂದಹಾಗೆ 2022 ರಲ್ಲಿ ಯುದ್ಧ ಶುರುವಾದ ನಂತರ ರಷ್ಯಾ & ಉಕ್ರೇನ್ ಕದಾಡುತ್ತಿವೆ. ಈ ಯುದ್ಧದಲ್ಲಿ ಉಕ್ರೇನ್ ಪರವಾಗಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನಿಂತಿವೆ. ಆದರೆ ರಷ್ಯಾ ಪರ ನಿಂತಿರುವುದು ಚೀನಾ ಮತ್ತು ಉತ್ತರ ಕೊರಿಯಾ ಮಾತ್ರ. ಹೀಗಾಗಿ ರಷ್ಯಾ ಕೂಡ ಚೀನಾ ಸಹಾಯ ನಂಬಿ ಕೂತಿದೆ. ಚೀನಾದಿಂದ ಸಾಕಷ್ಟು ಸರಕು ಆಮದು ಮಾಡಿಕೊಳ್ಳುತ್ತಿದೆ ರಷ್ಯಾ. ಅದರಲ್ಲೂ ಶಸ್ತ್ರಾಸ್ತ್ರ ಕೂಡ ಸಿಗುತ್ತಿದೆ ಎಂಬ ಆರೋಪ ಇದೆ.
ಈಗ ಮತ್ತೊಂದು ಸ್ಫೋಟಕ ಆರೋಪ ಚೀನಾದ ವಿರುದ್ಧ ಕೇಳಿಬಂದಿದೆ. ಅದು ಏನೆಂದರೆ ರಷ್ಯಾಗೆ ಈಗ ಚೀನಾ ಪರೋಕ್ಷವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದು, ಈ ಪೈಕಿ ಬಾಂಬ್ & ಬುಲೆಟ್ ತಯಾರಿಕೆಗೆ ಬೇಕಾಗಿರುವ ಮೂಲ ವಸ್ತುಗಳನ್ನು ಚೀನಾ ಇದೀಗ ರಷ್ಯಾಗೆ ಸಪ್ಲೈ ಮಾಡುತ್ತಿದೆಯಂತೆ. ಈ ಬಗ್ಗೆ ಬ್ರಿಟನ್ ವಿದೇಶಾಂಗ ಸಚಿವರು ಆರೋಪ ಮಾಡಿದ್ದಾರೆ. ಈ ವಿಚಾರ ಮತ್ತೊಮ್ಮೆ ಜಾಗತಿಕವಾಗಿ ಕಿಚ್ಚು ಹೊತ್ತಿಸಿದೆ.
ಮಹಾಯುದ್ಧದ ಭಯ ಕೂಡ ಕಾಡುತ್ತಿದೆ
ಉಕ್ರೇನ್ & ರಷ್ಯಾ ನಡುವೆ ಘೋರ ಯುದ್ಧ ನಡೆಯುವ ಸಮಯದಲ್ಲೇ ಯುರೋಪ್ ದೇಶಗಳು ಭಯದಲ್ಲಿ ನಲುಗಿವೆ. ಯಾವ ಸಮಯದಲ್ಲಿ ಯುದ್ಧ ಮತ್ತೊಂದು ಮಹಾಯುದ್ಧ ಆಗುತ್ತೋ? ಎಂಬ ಅತಂಕ ಕಾಡ್ತಿದೆ. ಯಾಕಂದ್ರೆ ಹಿಂದೆ 1ನೇ ಹಾಗೂ 2ನೇ ಮಹಾಯುದ್ಧ ಆರಂಭ ಆಗಿದ್ದು ಇದೇ ಯುರೋಪ್ ಖಂಡದಲ್ಲಿ. ಈ ನಡುವೆ ಯುದ್ಧ ನಿಲ್ಲಿಸಲು ಪ್ರಯತ್ನವು ಆಗಾಗ ನಡೆದರೂ ಪ್ರಯೋಜನ ಆಗುತ್ತಿಲ್ಲ. ಇಷ್ಟೆಲ್ಲದರ ನಡುವೆ ಇದೀಗ ಚೀನಾ ವಿರುದ್ಧ, ನ್ಯಾಟೋ ಒಕ್ಕೂಟದ ಪ್ರಮುಖ ದೇಶ ಬ್ರಿಟನ್ ಕೂಡ ಗಂಭೀರ ಆರೋಪ ಮಾಡಿದೆ. ಇದು ಹೊಸ ಬೆಂಕಿ ಹೊತ್ತಿಸಿದೆ.












Click it and Unblock the Notifications