ಕಾಬೂಲ್‌ನಲ್ಲಿ ಉಗ್ರರಿಂದ ಉಕ್ರೇನ್ ವಿಮಾನ ಹೈಜಾಕ್
ಕಾಬೂಲ್, ಆಗಸ್ಟ್ 24: ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳು ಈಗಾಗಲೇ ತಾಲಿಬಾನ್ ವಶವಾಗಿದೆ. ಇದೀಗ ಕಾಬೂಲ್‌ನಲ್ಲಿ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Recommended Video
ತಾಲಿಬಾನ್ ಉಗ್ರರ ವಶವಾಗಿರುವ ಅಫ್ಘಾನಿಸ್ತಾನದ ಕಾಬೂಲ್‌ನಿಂದ ತನ್ನ ದೇಶದ ಪ್ರಜೆಗಳನ್ನು ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ವಿಮಾನ ಹೈಜಾಕ್ ಆಗಿದೆ.
ಯಾರೋ ಅಪರಿಚಿತರು ಉಕ್ರೇನಿಯನ್ ವಿಮಾನವನ್ನು ಹೈಜಾಕ್ ಮಾಡಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವ್ಗೆನಿಯೆನ್ ಹೇಳಿದ್ದಾರೆ.

ಆಗಸ್ಟ್ 22ರಂದು ನಮ್ಮ ದೇಶದ ಉಕ್ರೇನಿಯನ್ ವಿಮಾನ ಹೈಜಾಕ್ ಮಾಡಲಾಗಿದೆ, ಯಾರೋ ಅಪರಿಚಿತ ವ್ಯಕ್ತಿಗಳು ನಮ್ಮ ದೇಶದ ಜನರ ಬದಲಿಗೆ ಬೇರೆ ದೇಶದ ಪ್ರಜೆಗಳನ್ನು ತುಂಬಿ ಇರಾನ್ ಅತ್ತ ಹಾರಾಟ ನಡೆಸಿದ್ದಾರೆ.
ಹಾಗಾಗಿ ಮೂರು ಬಾರಿ ನಮ್ಮ ಸ್ಥಳಾಂತರ ಮಿಷನ್ ಸಕ್ಸಸ್ ಆಗಿಲ್ಲ, ಏಕೆಂದರೆ ನಮ್ಮ ದೇಶದ ಪ್ರಜೆಗಳನ್ನು ನಾವು ಕರೆದುಕೊಂಡು ಬರಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ, 31 ಉಕ್ರೇನಿಯನ್ನರು ಸೇರಿದಂತೆ 83 ಜನರೊಂದಿಗೆ ಮಿಲಿಟರಿ ಸಾರಿಗೆ ವಿಮಾನವು ಅಫ್ಘಾನಿಸ್ತಾನದಿಂದ ಕೀವ್‌ಗೆ ಬಂದಿತು. 12 ಉಕ್ರೇನಿಯನ್ ಸೇನಾ ಸಿಬ್ಬಂದಿ ಮನೆಗೆ ಮರಳಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ವರದಿ ಮಾಡಿದೆ. ಆದರೆ ವಿದೇಶಿ ವರದಿಗಾರರು ಮತ್ತು ಸಹಾಯ ಕೋರಿದ ಸಾರ್ವಜನಿಕ ವ್ಯಕ್ತಿಗಳನ್ನು ಸಹ ಸ್ಥಳಾಂತರಿಸಲಾಗಿದೆ. ಸುಮಾರು 100 ಉಕ್ರೇನಿಯನ್ನರು ಇನ್ನೂ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಕಚೇರಿಯು ತಿಳಿಸಿದೆ.
ಕಳೆದ ಭಾನುವಾರ, ನಮ್ಮ ವಿಮಾನವನ್ನು ಇತರ ಜನರು ಅಪಹರಿಸಿದರು. ಮಂಗಳವಾರ, ವಿಮಾನವು ಪ್ರಾಯೋಗಿಕವಾಗಿ ನಮ್ಮಿಂದ ಕದಿಯಲ್ಪಟ್ಟಿತು. ಇದು ಉಕ್ರೇನಿಯನ್ನರನ್ನು ಏರ್ ಲಿಫ್ಟಿಂಗ್ ಮಾಡುವ ಬದಲು ಅಪರಿಚಿತ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. ನಮ್ಮ ಮುಂದಿನ ಮೂರು ಸ್ಥಳಾಂತರಿಸುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಏಕೆಂದರೆ ನಮ್ಮ ಜನರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು
ಯೆವ್ಗೆನಿ ಯೆನಿನ್ ಪ್ರಕಾರ ಅಪಹರಣಕಾರರು ಶಸ್ತ್ರಸಜ್ಜಿತರಾಗಿದ್ದರು. ಆದಾಗ್ಯೂ, ಸಚಿವರು ವಿಮಾನಕ್ಕೆ ಏನಾಯಿತು ಅಥವಾ ಉಕ್ರೇನ್ ಅದನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆಯೇ ಅಥವಾ ಉಕ್ರೇನಿಯನ್ ನಾಗರಿಕರು ಕಾಬೂಲ್‌ನಿಂದ ಹೇಗೆ ಮರಳಿದರು ಎಂಬುದನ್ನು ಹೇಳಿಲ್ಲ.
ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ನೇತೃತ್ವದ ಇಡೀ ರಾಜತಾಂತ್ರಿಕ ಸೇವೆಯು ಇಡೀ ವಾರ ಕ್ರ್ಯಾಶ್ ಟೆಸ್ಟ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಯೆನಿನ್ ಹೇಳಿದರು.
ಅಪಹರಣಕಾರರು ಬಂದೂಕುಧಾರಿಗಳಾಗಿದ್ದರು ಎಂದು ವರದಿ ತಿಳಿಸಿದೆ, ವಿಮಾನವನ್ನು ಅಪಹರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ ವಿಮಾನ ಏನಾಗಿದೆ? ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಅಥವಾ ಕಾಬೂಲ್‌ನಲ್ಲಿನ ಉಕ್ರೇನ್ ಜನರನ್ನು ಮರಳಿ ಕರೆತರುವ ವ್ಯವಸ್ಥೆ ಏನಾಗಿದೆ ಎನ್ನುವ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ.
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲೀಬಾನಿಗಳ ಅಟ್ಟಹಾಸ ಮತ್ತಷ್ಟು ಜೋರಾಗಿದೆ. ಅಫ್ಘಾನ್ ನಾಗರಿಕರು ಕಾಬುಲ್ ವಿಮಾನ ನಿಲ್ದಾಣದ ಮೂಲಕ ಹೇಗೋ ತಪ್ಪಿಸಿಕೊಳ್ಳುತ್ತಿದ್ದರೆ ಈಗ ಅದಕ್ಕೂ ಬ್ರೇಕ್ ಬೀಳುವ ಸಾಧ್ಯತೆ ಇದೆ. ತಾಲೀಬಾನ್ ವಿಮಾನ ನಿಲ್ದಾಣ ವಶಕ್ಕೆ ಪಡೆಯುವ ತಂತ್ರದಲ್ಲಿದೆ. ಇಲ್ಲಿಯವರೆಗೂ ಅಮೆರಿಕ ಸೇನೆಯ ಸುಪರ್ದಿಯಲ್ಲಿದ್ದ ವಿಮಾನ ನಿಲ್ದಾಣದ ಒಳಗೆ ಈಗ ಮೃತದೇಹ ರಾಶಿ ಇದೆ. ನಿಲ್ದಾಣದಲ್ಲಿಯೂ ಗುಂಡಿನ ದಾಳಿಯಾಗುತ್ತಿದೆ.ಸೋಮವಾರ, ತಾಲಿಬಾನ್ ಆಡಳಿತದಿಂದ ಭೀತಿಗೊಳಗಾಗಿರುವ ಸಾವಿರಾರು ಮಂದಿ ಅಫ್ಘಾನ್ ನಾಗರಿಕರು ಮತ್ತು ವಿದೇಶಿಯರು ಅಫ್ಘಾನ್ ನಿಂದ ಪರಾರಿಯಾಗಲು ವಿಮಾನ ನಿಲ್ದಾಣ ಸೇರಿದ್ದಾರೆ.
ಈ ಸಂದರ್ಭದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅಫ್ಘಾನ್ ಸೈನಿಕನೊಬ್ಬ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಜರ್ಮನಿಯ ಮಿಲಿಟರಿ ಟ್ವೀಟ್ ಮಾಡಿದ್ದು, ಕಾಬೂಲ್ ವಿಮಾನ ನಿಲ್ದಾಣದ ಉತ್ತರ ಭಾಗದ ದ್ವಾರದಲ್ಲಿ ಸೋಮವಾರ ಬೆಳಿಗ್ಗೆ ಅಫ್ಗನ್ ಭದ್ರತಾ ಪಡೆಗಳು ಮತ್ತು 'ಅನಾಮಿಕ ದಾಳಿಕೋರರ' ನಡುವೆ ಗುಂಡಿನ ದಾಳಿ ನಡೆದಿದ್ದು, ಒಬ್ಬ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಬಳಿಕ ಅಮೆರಿಕ ಮತ್ತು ಜರ್ಮನಿಯ ಪಡೆಗಳೂ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಿದವು. ಜರ್ಮನಿಯ ಸೈನಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿಸಿದೆ.












Click it and Unblock the Notifications