Ukraine War: ಉಕ್ರೇನ್‌ನ ಪ್ರಮುಖ ಪ್ರದೇಶ ರಷ್ಯಾ ವಶಕ್ಕೆ, ರಾಜಧಾನಿ ಕೂಡ ಉಡೀಸ್?
ರಷ್ಯಾ ರೊಚ್ಚಿಗೆದ್ದು ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚು ಮಾಡಿದ್ದು, ಉಕ್ರೇನ್ ದೇಶದ ಮತ್ತೊಂದು ಪ್ರಮುಖ ಪ್ರದೇಶ ರಷ್ಯಾ ಸೇನೆ ಹಿಡಿತಕ್ಕೆ ಸಿಕ್ಕಿದೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ದೊಡ್ಡ ತಿರುವು ಪಡೆದುಕೊಂಡಿದ್ದು, ಉಕ್ರೇನ್ ಪ್ರಜೆಗಳಿಗೆ ಹೊಸ ಚಿಂತೆ ಶುರುವಾಗಿದೆ. ಸಂಧಾನ ಮಾಡಿಕೊಳ್ಳಲು ಉಕ್ರೇನ್ ಹಿಂದೆ & ಮುಂದೆ ಚಿಂತೆ ಮಾಡುತ್ತಿರುವ ಸಮಯದಲ್ಲೇ ದಿನಕ್ಕೊಂದು ಆಘಾತ ನೀಡುತ್ತಿದೆ ರಷ್ಯಾ ಮಿಲಿಟರಿ.
ಉಕ್ರೇನ್ ದೇಶದ ಕುರ್ಸ್ಕ್ ಪ್ರದೇಶದ ಮೇಲೆ ಹಿಡಿತ ಸಾಧಿಸುವಲ್ಲಿ ರಷ್ಯಾ ಯೋಧರ ಪಡೆಗಳು ಯಶಸ್ವಿಯಾಗಿವೆ. ಈ ಮೂಲಕ ಉಕ್ರೇನ್ ಮೇಲೆ ಮತ್ತಷ್ಟು ಒತ್ತಡ ನಿರ್ಮಾಣ ಆಗುತ್ತಿದ್ದು, ಅಲ್ಲಿನ ಸೇನಾ ಮುಖ್ಯಸ್ಥರಿಗೆ ಹೊಸ ತಲೆನೋವು ಶುರುವಾಗಿದೆ. ಈ ಮಧ್ಯೆ ಉಕ್ರೇನ್ ದೇಶ ತನ್ನ ರಾಜಧಾನಿಯನ್ನೂ ಕಳೆದುಕೊಳ್ಳುವ ಆತಂಕ ಮನೆಮಾಡಿದೆ. ರಷ್ಯಾ ಸೈನಿಕರು ನೇರವಾಗೇ ಉಕ್ರೇನ್ ಒಳಗೆ ನುಗ್ಗುತ್ತಿದ್ದು, ಇದೀಗ ನಿಶಕ್ತವಾಗಿರುವ ಉಕ್ರೇನ್ ಸೇನೆಯನ್ನು ಸುಲಭವಾಗಿ ಸೋಲಿಸಿ ಒಳಗೆ ಬರುತ್ತಿದ್ದಾರೆ.

ಉಕ್ರೇನ್ ರಾಜಧಾನಿ ಕಥೆ ಏನು?
ಹೌದು, ಉಕ್ರೇನ್ ರಾಜಧಾನಿ ಕೀವ್ ಕಥೆ ಈಗ ಏನು? ಅನ್ನೋ ಚರ್ಚೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಉಕ್ರೇನ್ ಸೇನೆಯಿಂದ ರಾಜಧಾನಿ ಕೀವ್ ಸುತ್ತಮುತ್ತ ಬಿಗಿ ಭದ್ರತೆಯ ಕೈಗೊಳ್ಳಲಾಗಿದೆ. ಹಾಗೇ ರಷ್ಯಾ ಪಡೆಗಳು ಮತ್ತಷ್ಟು ಮುಂದೆ ಬರದಂತೆ ಇದೀಗ ಉಕ್ರೇನ್‌ನ ಸೇನೆ ಹೋರಾಡುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ, ಯಾಕಂದ್ರೆ ರಷ್ಯಾ ಕೂಡ ಎಲ್ಲಾ ಅತ್ಯಾಧುನಿಕ ಅಸ್ತ್ರಗಳನ್ನು ಬಳಕೆ ಮಾಡಿಕೊಂಡು ಉಕ್ರೇನ್ ದೇಶದ ಒಂದೊಂದೇ ಪ್ರದೇಶ ಕಬ್ಜಾ ಮಾಡುತ್ತಿದೆ.
ಸೌದಿ ಅರೇಬಿಯಾದಲ್ಲಿ ಇಬ್ಬರ ಭೇಟಿ?
ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಸೌದಿ ಅರೇಬಿಯಾದಲ್ಲಿ ಮಹತ್ವದ ಸಭೆ ಆಯೋಜನೆ ಮಾಡಲಾಗಿದೆ. ಹೀಗಾಗಿ ಈ ಸಭೆಗೆ ಪುಟಿನ್ & ಟ್ರಂಪ್ ಆಗಮಿಸಲಿದ್ದು, ಇಲ್ಲೇ ಇಬ್ಬರೂ ಭೇಟಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಪುಟಿನ್ & ಟ್ರಂಪ್ ಸಭೆಗೆ ಬೇಕಾದ ಸಿದ್ಧತೆಗಳನ್ನ ಕೂಡ ಈಗ ನಡೆಸಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇಬ್ಬರೂ ಭೇಟಿ ಮಾಡಿದರೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಹಾಗೇ ಆರ್ಥಿಕವಾಗಿ ಎರಡು ಬಲಶಾಲಿ ದೇಶಗಳ ಭೇಟಿ ಕುತೂಹಲ ಕೆರಳಿಸಿದೆ.












Click it and Unblock the Notifications