ಬಾಂಬ್.. ಬಾಂಬ್.. ಹಳ್ಳಿ ಬಿಟ್ಟು ಓಡಿದ ಜನರು..!
ರಷ್ಯಾ VS ಉಕ್ರೇನ್ ಯುದ್ಧ ಆರಂಭವಾಗಿ 800 ದಿನಗಳು ಮುಗಿದಿದ್ದು, ಯುದ್ಧ ನಿಲ್ಲಿಸುವ ಯಾವುದೇ ಸೂಚನೆ ಕಾಣುತ್ತಿಲ್ಲ. ಇದರ ಬದಲಾಗಿ ಇಬ್ಬರ ನಡುವೆ ಭಾರಿ ತಿಕ್ಕಾಟ ಇದೀಗ ನಡೆಯುತ್ತಿದೆ. ಅದ್ರಲ್ಲೂ ರಷ್ಯಾ ನಡೆಸುತ್ತಿರುವ ದಾಳಿಗೆ ಉಕ್ರೇನ್ ನೆಲ ಅಕ್ಷರಶಃ ನಲುಗಿದೆ. ಉಕ್ರೇನ್ ಪ್ರಜೆಗಳು ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದೀಗ ಹತ್ತಾರು ಹಳ್ಳಿಗಳ ಜನರು, ರಷ್ಯಾ ದಾಳಿಯಿಂದ ಬಚಾವ್ ಆಗಲು ತಾವು ಹುಟ್ಟಿ ಬೆಳೆದ ಊರು ಬಿಟ್ಟು ಓಡಿ ಹೋಗಿದ್ದಾರೆ.
ಕಳೆದ 3 ದಿನಗಳಿಂದ ರಷ್ಯಾ ತನ್ನ ವಾಯುಸೇನೆ ಮೂಲಕ ಮನಸ್ಸಿಗೆ ಬಂದ ರೀತಿ ಅಟ್ಯಾಕ್ ಮಾಡುತ್ತಿದೆ. ಇದರ ಪರಿಣಾಮ ಉಕ್ರೇನ್ ನಗರಗಳು ನಲುಗಿ ಹೋಗಿದ್ದು, ಉಕ್ರೇನ್ ಸರ್ಕಾರ ಕೂಡ ಜನರ ನೆರವಿಗೆ ಬರುತ್ತಿಲ್ಲ. ಹೀಗಾಗಿ, ತಮ್ಮ ಜೀವ ಉಳಿಸಿಕೊಳ್ಳಲು ಈಗ ಉಕ್ರೇನ್‌ನ ಜನರು ಓಡಿ ಹೋಗುತ್ತಿದ್ದಾರೆ. ರಷ್ಯಾ ಸೇನೆ ದಾಳಿ ಆರಂಭಿಸಿದ ತಕ್ಷಣ ಬೇರೆ ಕಡೆಗೆ ಹಳ್ಳಿ, ಹಳ್ಳಿಗಳ ಜನರು ಓಡಿ ಹೋಗುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮತ್ತೊಂದು ಕಡೆ ಲಕ್ಷಾಂತರ ಜನರ ಪರಿಸ್ಥಿತಿ ಇದೀಗ ಅತಂತ್ರವಾಗಿದೆ.

ಅಣುಬಾಂಬ್ ಹಾಕುತ್ತಾ ರಷ್ಯಾ?
ಉಕ್ರೇನ್ ರಾಜಧಾನಿ ಕೀವ್ ರೀತಿಯಲ್ಲೇ ಖಾರ್ಕಿವ್ ಕೂಡ ದೊಡ್ಡ ಪ್ರಾಂತ್ಯವೇ ಆಗಿದೆ. ಹೀಗಾಗಿ ರಷ್ಯಾ ಸೇನೆ ಇದೀಗ ಖಾರ್ಕಿವ್ ಪ್ರಾಂತ್ಯವನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ಈ ರೀತಿ ರಷ್ಯಾ ನಡೆಸುತ್ತಿರುವ ದಾಳಿಗೆ ಖಾರ್ಕಿವ್ ಪ್ರಾಂತ್ಯ ಮಾತ್ರವಲ್ಲ ಈ ಪ್ರಾಂತ್ಯದಲ್ಲಿ ಇರುವ ಹಳ್ಳಿ, ಹಳ್ಳಿಗಳು ಕೂಡ ನಲುಗಿ ಹೋಗಿವೆ. ರಷ್ಯಾ ದಾಳಿ ಹಿನ್ನೆಲೆ, ಖಾರ್ಕಿವ್ ಪ್ರಾಂತ್ಯದಿಂದ ಸುಮಾರು 1,700ಕ್ಕೂ ಹೆಚ್ಚು ಜನರನ್ನ ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದು ಈ ಸಮಯದಲ್ಲಿ ಭಯ ಹೆಚ್ಚುವಂತೆ ಮಾಡಿದೆ. ಯಾಕಂದ್ರೆ ಕೆಲವು ದಿನಗಳ ಹಿಂದಷ್ಟೇ ರಷ್ಯಾ ತನ್ನ ನ್ಯೂಕ್ಲಿಯರ್ ಬಾಂಬ್ ಅಂದ್ರೆ ಅಣುಬಾಂಬ್ ಹೊರಗೆ ತೆಗೆದು ಪ್ರದರ್ಶನ ಮಾಡಿದೆ.
30 ಹಳ್ಳಿಗಳ ಜನರು ಎಸ್ಕೇಪ್?
ಇದೀಗ ರಷ್ಯಾ ನಡೆಸುತ್ತಿರುವ ದಾಳಿಗೆ ಬೆಚ್ಚಿಬಿದ್ದಿರುವ ಖಾರ್ಕಿವ್ ಪ್ರಾಂತ್ಯದ ಸುಮಾರು 30 ಹಳ್ಳಿಗಳು ಮತ್ತು ಪಟ್ಟಣಗಳ ಜನರು ತಮ್ಮ ತಮ್ಮ ಮನೆಗಳನ್ನ ಬಿಟ್ಟು ಓಡಿದ್ದಾರೆ. ರಷ್ಯಾದ ದಾಳಿಯಿಂದ ಬಚಾವ್ ಆಗಲು ಈ ಜನರಿಗೆ ಈಗ ಉಳಿದಿರುವ ಒಂದೇ ಒಂದು ಮಾರ್ಗ ಇದೇ ಆಗಿದೆ. ಅಕಸ್ಮಾತ್ ಓಡಿ ಹೋಗದೆ ಇದ್ದರೆ ಮುಂದೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಭಯ ಕೂಡ ಜನರನ್ನು ಕಾಡುತ್ತಿದೆ. ಹಾಗೇ ರಷ್ಯಾ ಕೂಡ ತನ್ನ ಶತ್ರು ದೇಶವನ್ನು ಮಣಿಸಿ ಮೆರೆಯಲು ಭಯಾನಕ ಅಸ್ತ್ರಗಳನ್ನು ರೆಡಿ ಮಾಡಿಕೊಂಡು ಕಾಯುತ್ತಿದೆ. ರಷ್ಯಾ ತನ್ನಲ್ಲಿನ ಅತ್ಯಾಧುನಿಕ ಫಿರಂಗಿ ವ್ಯವಸ್ಥೆ ಮತ್ತು ಮಿಸೈಲ್ ಬಳಸಿ ಉಕ್ರೇನ್ ಮೇಲೆ ದಾಳಿ ಮಾಡುತ್ತಿದೆ.












Click it and Unblock the Notifications