ಥೂ ನಾಲಾಯಕ್.. ತನ್ನದೇ ದೇಶದ ಅಧ್ಯಕ್ಷನ ವಿರುದ್ಧ ಸೈನಿಕರ ಕೋಪ!

ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಈಗಾಗಲೇ ಲಕ್ಷಾಂತರ ಜನ ಜೀವ ಕಳೆದುಕೊಂಡು, ಕೋಟ್ಯಂತರ ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದರೂ ಯುದ್ಧ ಮಾತ್ರ ಸೈಲೆಂಟ್ ಆಗ್ತಿಲ್ಲ. ಒಂದು ಕಡೆ ರಷ್ಯಾ ರೊಚ್ಚಿಗೆದ್ದು ತನ್ನ ಶತ್ರು ಉಕ್ರೇನ್ ವಿರುದ್ಧ ಮನಸ್ಸಿಗೆ ಬಂದಂತೆ ಈಗ ದಾಳಿ ಮಾಡುತ್ತಿದೆ. ಮತ್ತೊಂದು ಕಡೆ ಉಕ್ರೇನ್ ಈಗ ತನ್ನದೇ ಭಾಗವಾದ ಒಂದೊಂದೇ ಜಾಗ ಕಳೆದುಕೊಳ್ಳುತ್ತಿದ್ದು, ಈ ಕೋಪದಲ್ಲಿ ಸ್ವತಃ ಉಕ್ರೇನ್ ಸೈನಿಕರು ತಮ್ಮ ಅಧ್ಯಕ್ಷನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಉಕ್ರೇನ್‌ನ ದೊಡ್ಡ ಪ್ರಾಂತ್ಯ ಮತ್ತು ರಷ್ಯಾ ಗಡಿಗೆ ಹತ್ತಿರದಲ್ಲೇ ಇರುವ ಖಾರ್ಕೀವ್ ಮೇಲೆ ರಷ್ಯಾ ಸೈನಿಕರು ಬಹುತೇಕ ಹಿಡಿತ ಸಾಧಿಸಿದ್ದಾರೆ. ಕಳೆದ 2 ದಿನದಲ್ಲಿ ಭರ್ಜರಿ 10 ಹಳ್ಳಿ, ಹಾಗೂ ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಹೀಗಿದ್ದರೂ ಉಕ್ರೇನ್ ಸೈನಿಕರು ಹೋರಾಟ ಮಾಡಲು ಅಗತ್ಯ ಶಸ್ತ್ರಾಸ್ತ್ರ ಸಿಗುತ್ತಿಲ್ಲ ಎಂದು ಉಕ್ರೇನ್ ಸೈನಿಕರು ರೊಚ್ಚಿಗೆದ್ದು ತಮ್ಮದೇ ದೇಶದ ಅಧ್ಯಕ್ಷ ಝೆಲೆನ್ಸ್‌ಕಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇಷ್ಟು ಸುಲಭ & ಸರಳ ವಿಧಾನದಲ್ಲಿ, ಯಾವುದೇ ವಿರೋಧವು ಇಲ್ಲದೆ ರಷ್ಯಾ ಈಗ ಖಾರ್ಕೀವ್ ನಗರವನ್ನು ವಶಕ್ಕೆ ಪಡೆಯುತ್ತಿದೆ. ಇದು ಉಕ್ರೇನ್ ಜನರ ಚಿಂತೆ ಹೆಚ್ಚಿಸಿದೆ.

Ukraine Soldiers Angry Against Their President After Russia Claimed Grip On Kharkiv

ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ

ಉಕ್ರೇನ್ ಸೈನಿಕರ ಕಥೆ ಹೇಗಾಗಿದೆ ಅಂದ್ರೆ ಅತ್ತ ಬಿಸಿ ತುಪ್ಪ ನುಂಗಲು ಆಗದೆ, ಉಗುಳಲೂ ಆಗದೆ ಪರದಾಡುವಂತಾಗಿದೆ. ಯಾರದ್ದೋ ತಪ್ಪಿಗೆ ಶುರುವಾಗಿದ್ದ ಯುದ್ಧ ಕೈಮೀರುತ್ತಿದೆ. ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪವೇ ಯುದ್ಧ ಆರಂಭವಾಗಲು ಕಾರಣವಾಗಿತ್ತು. ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಎರಡು ದೇಶಗಳ ಮಧ್ಯೆ ಭೀಕರ ಕದನ ಶುರುವಾಗಿತ್ತು.

Ukraine Soldiers Angry Against Their President After Russia Claimed Grip On Kharkiv

ಉಕ್ರೇನ್ ಪೂರ್ತಿ ರಷ್ಯಾ ವಶಕ್ಕೆ?

ರಷ್ಯಾ & ಉಕ್ರೇನ್ ಮಧ್ಯೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನರು ಕೂಡ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ರಷ್ಯಾ ಸೇನೆ ಅಬ್ಬರದ ಎದುರು ಈಗ ಉಕ್ರೇನ್ ಸೈನಿಕರು ಓಡಿ ಹೋಗ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಉಕ್ರೇನ್ ಮೇಲೆ ರಷ್ಯಾದ ಸೈನಿಕರು ಹಿಡಿತ ಸಾಧಿಸಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಉಕ್ರೇನ್ ಜನ ಕೂಡ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ. ಅಲ್ಲದೆ ಅಮೆರಿಕ ಮಾತು ಕೇಳಿ ಉಕ್ರೇನ್ ತಪ್ಪು ಮಾಡಿದೆಯಾ? ಎಂಬ ಚರ್ಚೆ ಕೂಡ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+