Russia & Ukraine: ರಷ್ಯಾ ಗ್ಯಾಸ್ ಸಪ್ಲೈ ಬಂದ್ ಮಾಡಿದ ಉಕ್ರೇನ್, ಚಳಿಯ ಸಮಯದಲ್ಲಿ ಯುರೋಪ್ ವಿಲವಿಲ!

ಬೀದಿ, ಬೀದಿಯಲ್ಲಿ ಬಡಿದಾಡುತ್ತಾ ರಷ್ಯಾ & ಉಕ್ರೇನ್ ಸೇನೆಗಳು ಸರ್ವನಾಶಕ್ಕೆ ಸಜ್ಜಾಗಿವೆ. ರಷ್ಯಾ & ಉಕ್ರೇನ್ ನಡುವೆ ಹೀಗೆ ಯುದ್ಧ ನಡೆಯುತ್ತಿದ್ದರೆ, ಮತ್ತೊಂದು ಕಡೆ ಯುರೋಪ್ ವಿಲವಿಲ ಒದ್ದಾಡುತ್ತಿದೆ. ಅರೆರೆ ಅದು ಹೇಗೆ, ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆದರೆ ಯುರೋಪ್ ದೇಶಗಳಿಗೆ ಏನು ಕಷ್ಟ? ಅನ್ನೋ ಪ್ರಶ್ನೆ ನಿಮಗೆ ಕಾಡಬಹುದು. ಅಂದಹಾಗೆ ಈ ಪ್ರಶ್ನೆಗೆ ಸಿಂಪಲ್ ಉತ್ತರ ಅಂದ್ರೆ, ಪೆಟ್ರೋಲ್ & ಡೀಸೆಲ್ & ಗ್ಯಾಸ್!

ಹೌದು, ರಷ್ಯಾ ಇಡೀ ಜಗತ್ತಿನಲ್ಲೇ ಅತಿಹೆಚ್ಚು ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಮುಂಚೂಣಿಯಲ್ಲಿ ಇದೆ. ಅರಬ್ ದೇಶಗಳಿಗೆ ಪೈಪೋಟಿ ನೀಡುವಷ್ಟು ತೈಲ ಸಂಪತ್ತು ಈ ರಷ್ಯಾ ಬಳಿ ಇದೆ. ಹೀಗಿದ್ದಾಗ ರಷ್ಯಾ ಸಪ್ಲೈ ಮಾಡುತ್ತಿದ್ದ ಪೆಟ್ರೋಲ್, ಡೀಸೆಲ್ & ಗ್ಯಾಸ್ ಬಳಸಿಕೊಂಡು ಜೀವನ ಮಾಡುತ್ತಿದ್ದವು ಯುರೋಪ್ ದೇಶಗಳು. ಆದರೆ ಯಾವಾಗ ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾಗಿತ್ತೋ ಅದೇ ದಿನದಿಂದ ಅಲ್ಲೋಲ ಕಲ್ಲೋಲ ಶುರುವಾಗಿ ಹೋಗಿತ್ತು. ಇದು ಸಾಲದು ಎನ್ನುವಂತೆ ಚಳಿಗಾಲದ ಸಮಯದಲ್ಲಿ ಉಕ್ರೇನ್ ಸೇನೆಯಿಂದ ರಷ್ಯಾ ಸರಬರಾಜು ಮಾಡುತ್ತಿದ್ದ ಗ್ಯಾಸ್ ಸಪ್ಲೈಗೆ ಬ್ರೇಕ್ ಹಾಕಲಾಗಿದೆ!

Ukraine Seized Russian Gas Supply to Europe Risks and Implications

ನ್ಯೂಕ್ಲಿಯರ್ ವಾರ್ ನಡೆಯೋದು ಗ್ಯಾರಂಟಿ?

ಉಕ್ರೇನ್ & ರಷ್ಯಾ ಯುದ್ಧದ ವಾತಾವರಣ ನೋಡುತ್ತಿದ್ದರೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಯುದ್ಧದಲ್ಲಿ ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್ ಬಳಕೆ ಆಗಲಿದೆ ಎಂಬ ಭಯ ಕಾಡ್ತಾ ಇದೆ. ಯಾಕಂದ್ರೆ ಉಕ್ರೇನ್ ರೊಚ್ಚಿಗೆದ್ದು ರಷ್ಯಾ ಮೇಲೆ ದಾಳಿ ಮಾಡುತ್ತಿರುವ ರೀತಿ ನೋಡಿ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚಿಂತೆ ಮಾಡುವಂತೆ ಆಗಿದೆ.

ಹೀಗಂತಾ ರಷ್ಯಾ ಏನು ಸೋತು ಹೋಗಿಲ್ಲ, ರಷ್ಯಾ ತನ್ನ ಬಳಿ ಇರುವ ಅಪಾಯಕಾರಿ ಮಿಸೈಲ್ ಬಳಸಿದರೆ ಒಂದೇ ದಿನದಲ್ಲಿ ಉಕ್ರೇನ್ ಕಥೆ ಮುಗಿದು ಹೋಗಲಿದೆ. ಹೀಗಿದ್ದಾಗಲೇ, ಅತ್ತ ರಷ್ಯಾ ಕಂಪನಿಗಳು ಯುರೋಪ್ ದೇಶಗಳಿಗೆ ಸಪ್ಲೈ ಮಾಡುತ್ತಿರುವ ಗ್ಯಾಸ್ ಲೈನ್ ಬಂದ್ ಮಾಡಿದೆ ಉಕ್ರೇನ್. ಹಾಗೇ ಇದೇ ರೀತಿ ಮತ್ತಷ್ಟು ಸೇಡು ತೀರಿಸಿಕೊಳ್ಳುವ ಕೆಲಸಕ್ಕೂ ಮುಂದಾಗಿದೆಯಾ? ಎಂಬ ಅನುಮಾನ ಮೂಡಿದೆ.

ಚಳಿಯಲ್ಲಿ ನಡುಗುತ್ತಿರುವ ಯುರೋಪ್ ಜನ

ರಷ್ಯಾ ಮೂಲಕ ಬರುವ ಗ್ಯಾಸ್ & ಪೆಟ್ರೋಲ್ ನಂಬಿ ಜೀವನ ನಡೆಸುವ ಯುರೋಪ್ ಜನ ಈಗ ಚಳಿಯಲ್ಲಿ ನರಳಿ ಹೋಗುತ್ತಿದ್ದಾರೆ. ಯಾಕಂದ್ರೆ ರಷ್ಯಾ ಬಿಟ್ಟು ಬೇರೆ ದೇಶಗಳಿಂದ ಈ ರೀತಿಯಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಹೆಚ್ಚು ಗ್ಯಾಸ್ & ಪೆಟ್ರೋಲ್ ಸೇರಿ ತೈಲ ಆಮದು ಮಾಡಿಕೊಳ್ಳುವುದು ಕಷ್ಟದ ಕೆಲಸ. ಹೀಗಿದ್ದಾಗಲೇ ಉಕ್ರೇನ್ ಸೇನೆ ರಷ್ಯಾ ಮೂಲಕ ಯುರೋಪ್ ಖಂಡದ ಹಲವು ದೇಶಗಳಿಗೆ ಸರಬರಾಜು ಆಗುತ್ತಿದ್ದ ತೈಲ ಉತ್ಪನ್ನಗಳಿಗೆ ಕೊಕ್ಕೆ ಹಾಕಿ ಕೂತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+