ಉಕ್ರೇನ್ ಮೇಲೆ ರಷ್ಯಾ ದಾಳಿ: 8 ಮಂದಿ ಸಾವು, 9 ಮಂದಿಗೆ ಗಾಯ

ಕೀವ್, ಫೆಬ್ರವರಿ 24: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ.

ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಉಕ್ರೇನ್ ಗಡಿ ದಾಟಿ ಜೆರ್ನಿಹಿಮ್, ಖರ್ಕೈವ್ ಮತ್ತು ಲುಹಾನ್ಸ್ಕ್‌ ಪ್ರಾಂತ್ಯವನ್ನು ಪ್ರವೇಶಿಸಿವೆ ಎಂದು ಗಡಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಗುರುವಾರ ಘೋಷಿಸಿದ್ದಾರೆ, ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುತ್ತಿವೆ.

Ukraine Says At Least 8 People Killed By Russian Shelling, 9 Wounded

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆಯ ನಂತರ ಪರಸ್ಪರ ಬಾಂಬ್ ದಾಳಿ ಆರಂಭವಾಗಿವೆ. ರಷ್ಯಾ ಕೆಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಿದ್ದು, ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್‌ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

'ಉಕ್ರೇನ್ ವಾಯುನೆಲೆ ಮೇಲೆ ರಷ್ಯಾ ದಾಳಿ': ಉಕ್ರೇನ್ ಪಡೆಗಳ ಕಮಾಂಡ್ ಪ್ರಕಾರ, ಫೆಬ್ರವರಿ 24ರಂದು ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಸೇನಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹೇಳಿಕೆಯನ್ನು ಸಾರಾಸಾಗಟಾಗಿ ನಿರಾಕರಿಸಿರುವ ರಷ್ಯಾ, ಉಕ್ರೇನಿಯನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

Russia-Ukraine crisis: Ukraine envoy to India Dr Igor Polikha seeks PM Modis intervention

ಉಕ್ರೇನ್​​ನ ಇವಾನೊ-ಫ್ರಾಂಕಿವ್ಸ್ಕ್ ವಿಮಾನ ನಿಲ್ದಾಣ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವ ವಿಡಿಯೋವನ್ನು ಅಮೆರಿಕ ಮೂಲದ ಬಿಎನ್​ಒ ನ್ಯೂಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್​ನಲ್ಲಿ ಮಾರ್ಷಲ್ ಕಾನೂನು ಜಾರಿಗೆ ತಂದಿದ್ದು, ನಾಗರಿಕರು ಶಾಂತವಾಗಿರಬೇಕೆಂದು ಮನವಿ ಮಾಡಿದ್ದಾರೆ. ರಷ್ಯಾ ವಿಶೇಷ ಕಾರ್ಯಾಚರಣೆಯನ್ನು ಘೋಷಿಸಿದಂತೆಯೇ ಡಾನ್ಬಾಸ್ ಪ್ರದೇಶದಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಉಕ್ರೇನ್ ಘೋಷಿಸಿದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರಷ್ಯಾದ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ಉಕ್ರೇನಿಯನ್ ರಾಜ್ಯವನ್ನು ನಾಶಪಡಿಸುವುದಾಗಿದೆ. ಬಲವಂತವಾಗಿ ಉಕ್ರೇನ್ ಪ್ರದೇಶವನ್ನು ವಶಪಡಿಸಿಕೊಳ್ಳುವ ರಷ್ಯಾ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ್ದರಿಂದ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಸಹಾಯವಾಣಿ​ ಆರಂಭಿಸಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಭಾರತದ ದೂತಾವಾಸ ಮತ್ತು ಸರ್ಕಾರದ ಜೊತೆ ಸಂಪರ್ಕದಲ್ಲಿರಲು ವಿದೇಶಾಂಗ ಇಲಾಖೆಯ 1800118797 (Toll free), +91-11-23012113, +91-11-23014104, +91-11-23017905 ಸಂಪರ್ಕ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೇ Fax: +91-11-23088124, Email: [email protected] ಮೂಲಕವೂ ಮಾಹಿತಿ ನೀಡಲು ಸರ್ಕಾರ ಸೂಚಿಸಿದೆ.

ಉಕ್ರೇನ್ ಮೇಲೆ ರಷ್ಯಾ ಈಗಾಗಲೇ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ಬೆನ್ನಲ್ಲೇ ಉಕ್ರೇನ್‌ ಸರ್ಕಾರಿ ಮತ್ತು ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಮೇಲೆ ಸೈಬರ್​ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಸೈಬರ್‌ ಸೆಕ್ಯುರಿಟಿ ಸಂಶೋಧಕರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಉಕ್ರೇನ್ ಸರ್ಕಾರಿ ಏಜೆನ್ಸಿಗಳು ಮತ್ತು ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ಉಕ್ರೇನಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ತಿಳಿದುಬಂದಿದೆ.

ಉಕ್ರೇನ್ ಗುರಿಯಾಗಿಸಿಕೊಂಡು ಹಲವಾರು ಹ್ಯಾಕಿಂಗ್ ಕಾರ್ಯಾಚರಣೆಗಳು ನಡೆದಿದ್ದು, ಸರ್ಕಾರಿ ಬ್ಯಾಂಕ್​ಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮೇಲೆ ಸೈಬರ್ ದಾಳಿ ಮಾಡಲಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ, ಸಂಸ್ಕೃತಿ ಸಚಿವಾಲಯ ವೆಬ್‌ಸೈಟ್‌ ಮೇಲೆ ದಾಳಿ ಮಾಡಿದ್ದರಿಂದ ಸೈಟ್‌ಗಳು ಲೋಡ್ ಆಗಲಿಲ್ಲ. ಮಾಹಿತಿ ಸೋರಿಕೆಯಾದ ಕಂಪ್ಯೂಟರ್‌ಗಳನ್ನ ನೆರೆಯ ಲಾಟ್ವಿಯಾ ಮತ್ತು ಲಿಥುವೇನಿಯಾದಲ್ಲಿವೆ ಎಂದು ಉಕ್ರೇನ್ ಸೈಬರ್‌ ಸೆಕ್ಯುರಿಟಿ ಅಧಿಕಾರಿಗಳು ಹೇಳಿದ್ದಾರೆ.

'ರಷ್ಯಾ ಕಳೆದ ಹಲವು ತಿಂಗಳಿನಿಂದ ಸೈಬರ್​ ದಾಳಿ ಕುರಿತು ಯೋಜಿಸಿದೆ. ಆದ್ದರಿಂದ ಈ ದಾಳಿಯ ಹಿಂದೆ ಎಷ್ಟು ಸಂಸ್ಥೆಗಳು ಅಥವಾ ಏಜೆನ್ಸಿಗಳು ಇವೆ ಎಂದು ಹೇಳುವುದು ಕಷ್ಟ' ಎಂದು ಸೋಫೋಸ್‌ ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಪ್ರಧಾನ ಸಂಶೋಧನಾ ವಿಜ್ಞಾನಿ ಚೆಸ್ಟರ್ ಹೇಳಿದ್ದಾರೆ.

Recommended Video

      ಉಕ್ರೇನ್ ನಲ್ಲಿ ಸಿಲುಕಿಕೊಂಡು ತವರಿಗೆ ಮರಳಲು ವಿಮಾನ ಸಿಗದೆ ಭಾರತೀಯರ ಪರದಾಟ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+