ರಷ್ಯಾ-ಉಕ್ರೇನ್ ಯುದ್ಧ ದಿನ 32: ಪ್ರಮುಖ ಬೆಳವಣಿಗೆಗಳ ರೌಂಡ್‌ಅಪ್
ಕೀವ್, ಮಾರ್ಚ್ 27: ಉಕ್ರೇನ್ ಯುದ್ಧ ಆರಂಭವಾಗಿ 32 ದಿನಗಳು ಆಗಿದೆ. ಈ ನಡುವೆ ರಷ್ಯಾ ಕ್ಷಿಪಣಿ ದಾಳಿಯನ್ನು ಮುಂದುವರೆಸಿದೆ. ಕೀವ್‌ನಲ್ಲಿ ಯುದ್ಧದ ಹಾನಿಯು ಹೆಚ್ಚಾಗುತ್ತಲೇ ಇದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಪೋಲಿಷ್ ಗಡಿಯ ಬಳಿಯ ಪಶ್ಚಿಮ ನಗರ ಲೈವ್ ಮೇಲೆ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿದೆ.
ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ, ವರದಿಯು ಮಿಲಿಟರಿ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ನಾಗರಿಕರನ್ನು ಗುರಿಯಾಗಿಸಿದ ನಂತರ, ಮಾಸ್ಕೋ ಈಗ ಇಂಧನ ಮತ್ತು ಆಹಾರ ಸಂಗ್ರಹಣೆ ಡಿಪೋಗಳನ್ನು ಗುರಿಯಾಗಿಸಲು ಪ್ರಾರಂಭಿಸಿದೆ ಎಂದು ಉಕ್ರೇನಿಯನ್ ಆಂತರಿಕ ಸಚಿವಾಲಯದ ಸಲಹೆಗಾರ ವಾಡಿಮ್ ಡೆನಿಸೆಂಕೊ ಹೇಳಿದ್ದಾರೆ.
ಕೀವ್ ಮೇಯರ್ ರಷ್ಯಾ 20 ರಿಂದ 30,000 ನಿವಾಸಿಗಳನ್ನು ಬಲವಂತವಾಗಿ ಮಾರಿಯುಪೋಲ್‌ನಿಂದ ರಷ್ಯಾಕ್ಕೆ ಸ್ಥಳಾಂತರ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ನ್ಯಾಟೋ ದೇಶಗಳ ಮೇಲಿನ ಚೀನಾದ ಸೈಬರ್ ದಾಳಿ ಶೇ 116ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಈ 32ನೇ ದಿನದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಪಟ್ಟಿ ಇಲ್ಲಿದೆ ಮುಂದೆ ಓದಿ....

ಉಕ್ರೇನ್ ಯುದ್ಧದ 32 ನೇ ದಿನದ ಪ್ರಮುಖ ಬೆಳವಣಿಗೆಗಳು
* ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಮಾಸ್ಕೋಗೆ ರಷ್ಯಾದ ವಿರುದ್ಧ ತನ್ನ ಜನರಲ್ಲಿ ಆಳವಾದ ದ್ವೇಷವನ್ನು ಬಿತ್ತುವ ಎಚ್ಚರಿಕೆ ನೀಡಿದರು. "ನೀವು ಎಲ್ಲವನ್ನೂ ಮಾಡುತ್ತಿದ್ದೀರಿ ಆದ್ದರಿಂದ ನಮ್ಮ ಜನರು ಸ್ವತಃ ರಷ್ಯನ್ ಭಾಷೆಯನ್ನು ತೊರೆಯುತ್ತಾರೆ. ಏಕೆಂದರೆ ರಷ್ಯಾದ ಭಾಷೆ ಈಗ ನಿಮ್ಮಗೆ ಮಾತ್ರ ಸಂಬಂಧಿಸಿದೆ, ನಿಮ್ಮ ಸ್ಫೋಟಗಳು ಮತ್ತು ಕೊಲೆಗಳು, ನಿಮ್ಮ ಅಪರಾಧಗಳಿಗೆ ಸಂಬಂಧಿಸಿದೆ," ಎಂದು ತಮ್ಮ ದೈನಂದಿನ ಭಾಷಣದಲ್ಲಿ ಹೇಳಿದರು.
* ಶಕ್ತಿ-ಉತ್ಪಾದಿಸುವ ರಾಷ್ಟ್ರಗಳನ್ನು ಉತ್ಪಾದನೆಯನ್ನು ಹೆಚ್ಚಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದರು. ಇದರಿಂದಾಗಿ ರಷ್ಯಾ ಇತರ ರಾಷ್ಟ್ರಗಳನ್ನು ಬ್ಲ್ಯಾಕ್‌ಮೇಲ್ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಹೇಳಿದರು.
* ಸುದ್ದಿ ಸಂಸ್ಥೆ ಎಪಿ ಪ್ರಕಾರ, ಖಾರ್ಕಿವ್‌ನಲ್ಲಿರುವ ಪರಮಾಣು ಸಂಶೋಧನಾ ಸೌಲಭ್ಯವು ಮತ್ತೊಮ್ಮೆ ರಷ್ಯಾದ ಶೆಲ್ ದಾಳಿಗೆ ಒಳಪಟ್ಟಿದೆ. ಹಾನಿಯನ್ನು ಅಂದಾಜು ಮಾಡುವುದು ಅಸಾಧ್ಯವಾಗಿದೆ ಎಂದು ಉಕ್ರೇನ್ ಉಲ್ಲೇಖಿಸಿದೆ.
* ಯುನೈಟೆಡ್ ಕಿಂಗ್‌ಡಮ್‌ನ ರಕ್ಷಣಾ ಸಚಿವಾಲಯವು ರಷ್ಯಾದ ಪಡೆಗಳು ಖಾರ್ಕಿವ್‌ನ ದಿಕ್ಕಿನಿಂದ ನೇರವಾಗಿ ದೇಶದ ಪೂರ್ವದಲ್ಲಿ ಪ್ರತ್ಯೇಕತಾವಾದಿ ಪ್ರದೇಶಗಳನ್ನು ಎದುರಿಸುತ್ತಿರುವ ಉಕ್ರೇನಿಯನ್ ಪಡೆಗಳನ್ನು ಸುತ್ತುವರಿಯಲು ಪ್ರಯತ್ನಿಸುವಂತೆ ಕಾಣುತ್ತಿದೆ ಎಮದು ಹೇಳಿದೆ.
* ಉತ್ತರ ಉಕ್ರೇನ್‌ನಾದ್ಯಂತ ಉಕ್ರೇನ್ ಪಡೆಗಳು ರಷ್ಯಾದ ದಾಳಿಗೆ ಪ್ರತಿದಾಳಿಗಳು ನಡೆಸುತ್ತಿದೆ. ರಷ್ಯಾದ ಯಾವುದೇ ದಾಳಿ ಪ್ರಯತ್ನಕ್ಕೂ ಉಕ್ರೇನ್ ಪಡೆ ಅಡ್ಡಿಪಡಿಸುತ್ತಿದೆ ಹಾಗಾಗಿ ಪರಿಸ್ಥಿತಿ ಸ್ಥಿರವಾಗಿದೆ.
* ಯುಎಸ್ ಅಧ್ಯಕ್ಷ ಜೋ ಬಿಡೆನ್ ಶನಿವಾರ ಪೋಲೆಂಡ್‌ನಲ್ಲಿ ಉಕ್ರೇನಿಯನ್ ನಿರಾಶ್ರಿತರನ್ನು ಭೇಟಿ ಮಾಡಿದರು ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು ಉಲ್ಲೇಖಿಸಿ, "ಈ ವ್ಯಕ್ತಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ." ಎಂದು ಹೇಳಿದರು.
* ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾದ ಆಡಳಿತದಲ್ಲಿ ಬದಲಾವಣೆ ಬಯಸುವುದಿಲ್ಲ ಎಂದು ಶ್ವೇತಭವನ ಹೇಳಿದೆ.
* ಉಕ್ರೇನ್‌ನಲ್ಲಿ 3.7 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಿಂಗಳ ಕಾಲ ನಡೆದ ಯುದ್ಧದಲ್ಲಿ ತಮ್ಮ ಊರಿನಿಂದ ಬಲವಂತವಾಗಿ ಬೇರೆ ದೇಶಕ್ಕೆ ತೆರಳಿದ್ದಾರೆ ಎಂದು ವರದಿ ಹೇಳಿದೆ.
* ಉಕ್ರೇನ್ ಪ್ರಕಾರ, ಇದುವರೆಗೆ 16,000 ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ.
* ಮಾಸ್ಕೋ ಅನೇಕ ಯುದ್ಧ ಅಪರಾಧಗಳ ಆರೋಪವನ್ನು ಸಹ ಹೊಂದಿದೆ.












Click it and Unblock the Notifications