ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಯುದ್ಧ: ರಷ್ಯಾದಲ್ಲಿ ಟಿಕ್‌ಟಾಕ್‌, ನೆಟ್‌ಫ್ಲಿಕ್ಸ್‌ ಸ್ಥಗಿತ

|
Google Oneindia Kannada News

ಮಾಸ್ಕೋ, ಮಾರ್ಚ್ 07: ಉಕ್ರೇನ್‌ ಮೇಲೆ ರಷ್ಯಾವು ದಾಳಿ ಮಾಡಿದ ಬಳಿಕ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರುತ್ತಿದೆ. ಹಲವಾರು ಸಂಸ್ಥೆಗಳು ಕೂಡಾ ರಷ್ಯಾದ ಮೇಲೆ ನಿರ್ಬಂಧವನ್ನು ಹೇರುತ್ತಿದೆ. ಈ ಮಧ್ಯೆ ನೆಟ್‌ಫ್ಲಿಕ್ಸ್‌ ಹಾಗೂ ಟಿಕ್‌ಟಾಕ್‌ ಸೇವೆಯನ್ನು ಸ್ಥಗಿತ ಮಾಡಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಈಗಾಗಲೇ ಹಲವಾರು ಹಾಲಿವುಡ್‌ ಸ್ಟುಡಿಯೋಗಳು ಹಾಗೂ ಮನರಂಜನಾ ಸಂಸ್ಥೆಗಳು ಉಕ್ರೇನ್‌ ಹಾಗೂ ರಷ್ಯಾ ಯುದ್ಧದ ಹಿನ್ನೆಲೆ ರಷ್ಯಾಕ್ಕೆ ನಿರ್ಬಂಧವನ್ನು ಹೇರಿದೆ. ಈಗ ಕಂಪನಿಗಳ ಜೊತೆ ನೆಟ್‌ಫ್ಲಿಕ್ಸ್‌ ಹಾಗೂ ಟಿಕ್‌ಟಾಕ್‌ ಕೂಡಾ ಜೊತೆಯಾಗಿದೆ.

ಭಾರತೀಯರ ಸ್ಥಳಾಂತರ: ಉಕ್ರೇನ್‌ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಧನ್ಯವಾದಭಾರತೀಯರ ಸ್ಥಳಾಂತರ: ಉಕ್ರೇನ್‌ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಧನ್ಯವಾದ

ರಷ್ಯಾದಲ್ಲಿ ಸೇವೆಯನ್ನು ಸ್ಥಗಿತ ಮಾಡಲಾಗುವುದು ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಇನ್ನು ಟಿಕ್‌ಟಾಕ್‌ನಲ್ಲಿ ರಷ್ಯಾದ ಜನರು ಯಾವುದೇ ವಿಡಿಯೋವನ್ನು ಪೋಸ್ಟ್‌ ಮಾಡಲು ಸಾಧ್ಯವಿಲ್ಲ ಹಾಗೂ ಹಾಗೆಯೇ ಬೇರೆ ಯಾವುದೇ ದೇಶದವರು ಪೋಸ್ಟ್‌ ಮಾಡಿದ ವಿಡಿಯೋವನ್ನು ನೋಡಲು ಸಾಧ್ಯವಿಲ್ಲ ಎಂದು ಟಿಕ್‌ಟಾಕ್‌ ಹೇಳಿದೆ.

Ukraine-Russia War: Netflix, TikTok Shut Down Operations In Russia

"ಉಕ್ರೇನ್‌ ಮೇಲೆ ರಷ್ಯಾದ ದಾಳಿ ಬೆನ್ನಲ್ಲೇ ನಾವು ಪರಿಸ್ಥಿತಿಯನ್ನು ಅವಲೋಕನ ಮಾಡಿ ರಷ್ಯಾದ ಮೇಲೆ ನಿರ್ಬಂಧ ಹೇರಲು ನಿರ್ಧಾರ ಮಾಡಿದ್ದೇವೆ," ಎಂದು ನೆಟ್‌ಫ್ಲಿಕ್ಸ್‌ ವಕ್ತಾರರು ಹೇಳಿದ್ದಾರೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಬಳಕೆದಾರರಿಗೂ ಕೂಡಾ ಅವಕಾಶ ಇರುವುದಿಲ್ಲ. ಆದರೆ ಈಗಾಗಲೇ ಸೇವೆ ಹೊಂದಿರುವ ಬಳಕೆದಾರರ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ಸಂಸ್ಥೆ ನೀಡಿಲ್ಲ.

ಪೆಟ್ರೋಲ್, ಡೀಸೆಲ್ ಬೆಲೆ 15 ರಿಂದ 22 ರು ಏರಿಕೆ ಸಾಧ್ಯತೆ! ಪೆಟ್ರೋಲ್, ಡೀಸೆಲ್ ಬೆಲೆ 15 ರಿಂದ 22 ರು ಏರಿಕೆ ಸಾಧ್ಯತೆ!

ಈಗಾಗಲೇ ಹಲವಾರು ಕಂಪನಿಗಳಿಂದ ರಷ್ಯಾಕ್ಕೆ ನಿರ್ಬಂಧ ಹೇರಿಕೆ

ಏರ್‌ಬಿಎನ್‌ಬಿ ಸಂಸ್ಥೆಯು ಈಗಾಗಲೇ ರಷ್ಯಾಕ್ಕೆ ನಿರ್ಬಂಧವನ್ನು ಹೇರಿದೆ. ಇದು ವಸತಿ ಸಂಸ್ಥೆಯಾಗಿದೆ. ಐಕಿಯಾ ಎಂಬ ಸ್ವೀಡಿಶ್‌ ಕಂಪನಿಯು ಕೂಡಾ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತ ಮಾಡಿದೆ. ಐಕಿಯಾ ರಷ್ಯಾದಲ್ಲಿ ಸುಮಾರು 17 ಮಳಿಗೆಗಳನ್ನು ಹೊಂದಿದೆ. ಇದರ ಸೇವೆ ಸ್ಥಗಿತ ಹಿನ್ನೆಲೆ ಸುಮಾರು 15,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಹೆರ್ಮೆಸ್‌ ತಾತ್ಕಾಲಿಕವಾಗಿ ರಷ್ಯಾದಲ್ಲಿ ಸೇವೆ ಸ್ಥಗಿತ ಮಾಡಿದೆ. ವೋಲ್ಕ್ಸ್‌‌ವಾಗೆನ್‌ ಗ್ರೂಪ್‌ ಕೂಡಾ ರಷ್ಯಾದಲ್ಲಿ ಸೇವೆಯನ್ನು ಸ್ಥಗಿತ ಮಾಡಿದೆ. ರಷ್ಯಾಕ್ಕೆ ರಫ್ತನ್ನು ಕೂಡಾ ನಿಲ್ಲಿಸಿದೆ. ಅಲ್‌ಕೋಅ ಎಂಬ ಯುಎಸ್‌ನ ಅಲ್ಯೂಮಿನಿಯಂ ಕಂಪನಿಯು ರಷ್ಯಾಕ್ಕೆ ಉತ್ಪನ್ನಗಳ ಮಾರಾಟವನ್ನು ಸ್ಥಗಿತ ಮಾಡಲಿದೆ ಎಂದು ಹೇಳಿದೆ. ಇನ್ನು ಎಚ್‌ ಆಂಡ್‌ ಎಮ್‌ ಸಂಸ್ಥೆ ತಾತ್ಕಾಲಿಕವಾಗಿ ರಷ್ಯಾದಲ್ಲಿ ತನ್ನ ಮಳಿಗೆಗಳನ್ನು ಮುಚ್ಚಿದೆ. ಈ ಸಂಸ್ಥೆಯು ರಷ್ಯಾದಲ್ಲಿ ಸುಮಾರು 150 ಉಡುಪು ಮಳಿಗೆಗಳನ್ನು ಹೊಂದಿದೆ. ಆಪಲ್‌ ಹಾಗೂ ಫೋರ್ಡ್ ಕೂಡಾ ರಷ್ಯಾದ ಮೇಲೆ ನಿರ್ಬಂಧ ಹೇರಿದೆ. ರಷ್ಯಾಕ್ಕೆ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಆಪಲ್‌ ಸ್ಥಗಿತ ಮಾಡಿದರೆ, ಫೋರ್ಡ್ ಕೂಡಾ ಇದೇ ಕಾರ್ಯವನ್ನು ಮಾಡಿದೆ.

ಟ್ವಿಟ್ಟರ್‌, ಫೇಸ್‌ಬುಕ್‌ ಮೇಲೆ ನಿರ್ಬಂಧ

ರಷ್ಯಾವು ಉಕ್ರೇನ್‌ ಮೇಲೆ ದಾಳಿಯನ್ನು ಮಾಡಿದ ಬಳಿಕ ಫೇಸ್‌ಬುಕ್‌ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಿದೆ. ಇನ್ನು ಟ್ವಿಟ್ಟರ್‌ ಕೂಡಾ ರಷ್ಯಾದಲ್ಲಿ ಸೇವೆಯನ್ನು ನಿರ್ಬಂಧಿಸಿದೆ. ರಷ್ಯಾದ ರಾಜ್ಯ ಸಂವಹನ ನಿಯಂತ್ರಕವು ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಸರ್ಕಾರಿ ಸ್ವಾಮ್ಯದ ರಿಯಾ ಸುದ್ದಿ ಸಂಸ್ಥೆ ತಿಳಿಸಿದೆ.

ಈ ನಡುವೆ ರಷ್ಯಾವು ಹಲವಾರು ಮಾಧ್ಯಮಗಳಿಗೆ ತಾನಾಗಿಯೇ ನಿರ್ಬಂಧ ಹೇರಿದೆ. ಫೇಸ್‌ಬುಕ್‌, ಬಿಬಿಸಿ ಸೇರಿದಂತೆ ಹಲವು ಸುದ್ದಿ ವೆಬ್‌ಸೈಟ್‌ಗಳನ್ನು ರಷ್ಯಾದಲ್ಲಿ ನಿರ್ಬಂಧ ಮಾಡಲಾಗಿದೆ ಎಂದು ಈ ಹಿಂದೆ ವರದಿಯಾಗಿದೆ. ಜರ್ಮನಿಯ ಮಾಧ್ಯಗಳಿಗೂ ನಿರ್ಬಂಧ ಹೇರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Netflix, TikTok Shut Down Operations In Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X