ರಷ್ಯಾದ ಜನರನ್ನು ಗೌರವದಿಂದ ನೋಡಿಕೊಳ್ಳಿ: ಪುಟಿನ್ ಜೊತೆ ಫ್ರೆಂಚ್ ಅಧ್ಯಕ್ಷರ ಮುಕ್ತ ಸಂಪರ್ಕ
ಕೀವ್, ಮಾರ್ಚ್ 8: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಳಿಕ ಪ್ರಪಂಚದ ಹೆಚ್ಚಿನ ನಾಯಕರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ದೂರವಿಡುತ್ತಿದ್ದಾರೆ. ರಷ್ಯಾದ ಮೇಲೆ ನಿರ್ಬಂಧವನ್ನು ವಿಧಿಸುತ್ತಿದ್ದಾರೆ. ಈ ನಡುವೆ ರಷ್ಯಾ ಅಧ್ಯಕ್ಷರ ಜೊತೆ ಮುಕ್ತವಾಗಿ ಸಂಪರ್ಕವನ್ನು ಇಟ್ಟುಕೊಂಡಿರುವವರ ಕೆಲವೇ ನಾಯಕರುಗಳ ಪೈಕಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡಾ ಒಬ್ಬರಾಗಿದ್ದಾರೆ.
ಫ್ರಾನ್ಸ್ ಆಡಳಿತವು ಉಕ್ರೇನ್ ಯುದ್ಧವನ್ನು ತಡೆಯುವಲ್ಲಿ ಪ್ರಯತ್ನವನ್ನು ಮಾಡಿದೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸುಮಾರು ನಾಲ್ಕು ಬಾರಿ ಮಾತುಕತೆಯನ್ನು ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೇ ಕಳೆದ ಕೆಲವು ತಿಂಗಳುಗಳಲ್ಲಿ ಒಟ್ಟು ಹನ್ನೊಂದು ಬಾರಿ ಉಭಯ ದೇಶದ ನಾಯಕರುಗಳು ಮಾತನಾಡಿದ್ದಾರೆ.
ಎರಡನೆಯ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ಅತಿದೊಡ್ಡ ಮಿಲಿಟರಿ ಆಕ್ರಮಣದ ಸಮಯದಲ್ಲಿ ಪುಟಿನ್ ಮನಸ್ಥಿತಿಗೆ ತಕ್ಕುದಾದ ಮನಸ್ಥಿತಿಯನ್ನು ಹೊಂದಿರುವವರು ಕೆಲವು ನಾಯಕರುಗಳಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡಾ ಒಬ್ಬರು ಆಗಿದ್ದಾರೆ. ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಕೂಡ ಮಧ್ಯವರ್ತಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಶನಿವಾರ ಮಾಸ್ಕೋಗೆ ಹಠಾತ್ ಭೇಟಿ ನೀಡಿದ್ದಾರೆ, ಭಾನುವಾರ ಅವರ ಜೊತೆಯಲ್ಲಿ ಫೋನ್ ಮೂಲಕ ಮಾತನಾಡಿದ್ದಾರೆ.

ಇನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪಟ್ಟು ಬಿಡದೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಲ್ಲಿ ಮಾತನಾಡುವಂತೆ ಕಾಣುತ್ತಿದೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾತುಕತೆ ನಡೆಸುತ್ತಿದ್ದಾರೆ.
ಯುದ್ಧದ ಬದಲೂ ಬೇರೆ ಹಾದಿಗಾಗಿ ಮಾತುಕತೆಯೇ?
ಪ್ಯಾರಿಸ್‌ನ ಅಟ್ಲಾಂಟಿಕ್ ಕೌನ್ಸಿಲ್ ಹಾಗೂ ಮ್ಯಾಕ್ರನ್‌ರ ಪಕ್ಷದ ಸದಸ್ಯರಾರ ಬೆಂಜಮಿನ್ ಹಡ್ಡಾಡ್ ಮಾತನಾಡಿ, "ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಷ್ಯಾದ ಅಧ್ಯಕ್ಷರೊಂದಿಗೆ ಯುದ್ಧದ ಬದಲಾಗಿ ಬೇರೆ ಹಾದಿಯನ್ನು ಕಂಡು ಕೊಳ್ಳುವಂತೆ ಮಾತನಾಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.
ಉಭಯ ದೇಶದ ನಾಯಕರುಗಳು ಭಾಷಾಂತರಕಾರರ ಸಹಾಯದೊಂದಿಗೆ ಸಂವಾದ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಕ್ಸ್ನಿ ಪರವಾಗಿಯೂ ಪುಟಿನ್ ಜೊತೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.
ರಷ್ಯಾದವರನ್ನು ಜನರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದ ಮ್ಯಾಕ್ರನ್
ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ರಷ್ಯಾ ಮತ್ತು ಅದರ ಜನರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ರಷ್ಯಾದ ಭಾಗವಹಿಸುವಿಕೆ ಇಲ್ಲದೆ ದೀರ್ಘಕಾಲೀನ ಶಾಂತಿ ಸಾಧ್ಯವಿಲ್ಲ ಎಂದು ಕೂಡಾ ಪ್ರತಿಪಾದನೆ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಉಲ್ಬಣವಾಗಿ ಹದಿಮೂರು ದಿನವಾಗಿದೆ. ಈ ನಡುವೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿಕೆ ನೀಡಿದ್ದಾರೆ.
ಕಲಾವಿದರು, ಬುದ್ಧಿಜೀವಿಗಳು, ತಾಂತ್ರಿಕ ಸಹಕಾರ, ವ್ಯಾಪಾರ ಮತ್ತು ಎನ್‌ಜಿಒಗಳ ಮೂಲಕ ರಷ್ಯಾದ ಮತ್ತು ಬೆಲರೂಸಿಯನ್ ಜನರೊಂದಿಗೆ ಸಂವಹನವನ್ನು ಮುಂದುವರಿಸುವುದು ಸೇರಿದಂತೆ ಎಲ್ಲಾ ಸಂಭಾವ್ಯ ಮಾನವ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.
"ನಮಗೆ ಭಿನ್ನಾಭಿಪ್ರಾಯಗಳಿದ್ದರೂ ಸಹ ನಾಯಕರೊಂದಿಗೆ ಮಾತನಾಡುವುದನ್ನು ಮುಂದುವರಿಸುವುದು ನಮ್ಮ ಕಾರ್ಯವಾಗಿದೆ. ನಾವು ರಷ್ಯಾವನ್ನು ಒಂದು ದೇಶವಾಗಿ ಹಾಗೂ ರಷ್ಯಾದ ಜನರನ್ನು ಎಂದಿಗೂ ಗೌರವಿಸಬೇಕು," ಎಂದು ಮ್ಯಾಕ್ರನ್ ಪಾಯಿಸಿಯ ಕಮ್ಯೂನ್‌ನಲ್ಲಿ ನಡೆದ ಚುನಾವಣಾ ಪೂರ್ವ ಸಭೆಯಲ್ಲಿ ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications