ಪುಟಿನ್ ಉಕ್ರೇನ್‌ನಲ್ಲಿ ಯಶಸ್ವಿಯಾದರೆ, ತೈವಾನ್ ಮುಂದಿನ ಟಾರ್ಗೆಟ್: ಕ್ಯಾಸ್ಪರೋವ್
ಮಾಸ್ಕೋ, ಫೆಬ್ರವರಿ 27: ಉಕ್ರೇನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಶಸ್ವಿಯಾದರೆ, ತೈವಾನ್ ನಂತರದ ಟಾರ್ಗೆಟ್ ಆಗಿದೆ ಎಂದು ರಷ್ಯಾದ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಖ್ಯಾತ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಇತ್ತೀಚೆಗೆ ಖಂಡನೆ ಮಾಡಿದ್ದರು.
ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್, "2007 ರಲ್ಲಿ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಅವರು [ಪುಟಿನ್] ಪ್ರಭಾವದ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದರು. ಸಣ್ಣ ದೇಶಗಳು ದೊಡ್ಡ ದೇಶಗಳು ಹೇಳಿದಂತೆ ವರ್ತಿಸಬೇಕು, ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಬಯಸಿದ್ದಾರೆ," ಎಂದು ತಿಳಿಸಿದ್ದಾರೆ.
58 ವರ್ಷದ ಮಾಜಿ ವಿಶ್ವ ಚೆಸ್ ಚಾಂಪಿಯನ್, "ಯೋಜನೆಯಂತೆ ಎರಡು ಅಥವಾ ಮೂರು ದಿನಗಳಲ್ಲಿ ಕೀವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ವಿಫಲವಾಗಿದೆ. ಉಕ್ರೇನಿಯನ್ನರ ವೀರರ ಕಾರ್ಯವು ಅಜೇಯ ನಾಯಕನಾಗಿ ಪುಟಿನ್‌ಗೆ ಇಮೇಜ್‌ಗೆ ಹಾನಿ ಉಂಟು ಮಾಡಿದೆ," ಎಂದು ಹೇಳಿದರು.

"ಇಂದಿನ ಯುರೋಪಿನ ಸಮಸ್ಯೆಯೆಂದರೆ ಜರ್ಮನಿ, ಯುಕೆ, ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿನ ಅನೇಕ ರಾಜಕಾರಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಪುಟಿನ್ ವ್ಯಾಪಾರ ಹಿತಾಸಕ್ತಿಗೆ ತಕ್ಕುದಾಗಿ ಇರುವುದು ಆಗಿದೆ. ಉಕ್ರೇನ್‌ಗಾಗಿ ಅವರ [ಪುಟಿನ್‌ರ] ಯೋಜನೆಗಳನ್ನು ಗುರುತಿಸದಿರುವುದು ಸಂಪೂರ್ಣವಾಗಿ ಮೂರ್ಖತನವಾಗಿದೆ. ಪುಟಿನ್ ಉಕ್ರೇನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಎಂದಿಗೂ ಗುರುತಿಸಲಿಲ್ಲ ಮತ್ತು ಹಲವು ವರ್ಷಗಳಿಂದ ರಷ್ಯಾವು ಉಕ್ರೇನ್ ಅಸ್ತಿತ್ವವನ್ನು ನಿರಾಕರಿಸುತ್ತಿದೆ," ಎಂದು ತಿಳಿಸಿದರು.
ಸುಳ್ಳು ಹೇಳುವ ದಾಖಲೆ ಹೊಂದಿರುವ ಪುಟಿನ್!
"ಪುಟಿನ್ ಅವರ ಪಾತ್ರದ ವಿಶಿಷ್ಟ ಲಕ್ಷಣವೆಂದರೆ ಸುಳ್ಳು. ಅವರು ಸುಳ್ಳು ಹೇಳುವ ಸುದೀರ್ಘ ದಾಖಲೆಯನ್ನು ಹೊಂದಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಹಿಂದಕ್ಕೆ ಮತ್ತು ಮುಂದಕ್ಕೆ ತಮ್ಮ ಅನುಕೂಲಕ್ಕೆ ತಿರುಗಿಸುತ್ತಾರೆ. ಇದು ಯುರೋಪಿನ ಸ್ವಂತ ಯುದ್ಧವಾಗಿದೆ. ಯುರೋಪ್ ಪುಟಿನ್ ಅವರು ಅಜೇಯ ಎಂದು ನಂಬುವ ಮಟ್ಟಕ್ಕೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಉಕ್ರೇನ್ ಮೇಲೆ ದಾಳಿ ಮಾಡಲು ಧೈರ್ಯ ತುಂಬಿದ್ದಾರೆ," ಎಂದು ಟೀಕೆ ಮಾಡಿದ್ದಾರೆ. . "ಇದು ಜಾಗತಿಕ ಭದ್ರತಾ ಮೂಲಸೌಕರ್ಯಕ್ಕೆ ಸಂಬಂಧಿಸಿದೆ. ಪುಟಿನ್ ಯಶಸ್ವಿಯಾದರೆ, ಮುಂದಿನ ಗುರಿ ಚೀನಾ-ತೈವಾನ್ ಆಗಲಿದೆ," ಎಂದಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್, "ನಾನು ಈ ಯುದ್ಧವನ್ನು ರಷ್ಯಾ ಮತ್ತು ಎಲ್ಲಾ ರಷ್ಯನ್ನರಿಗೆ ಅವಮಾನವೆಂದು ಪರಿಗಣಿಸುತ್ತೇನೆ. ಅಡಾಲ್ಫ್ ಹಿಟ್ಲರ್ ಅಥವಾ ಮುಸೊಲಿನಿ ಅಥವಾ ಸ್ಟಾಲಿನ್ ಆಯಾ ಹಿತಾಸಕ್ತಿಯಿಂದ ವರ್ತಿಸಿದರು. ಇದೂ ಕೂಡಾ ಅದೇ ರೀತಿಯಾಗಿದೆ," ಎಂದು ತಿಳಿಸಿದರು.
ರಷ್ಯಾದಲ್ಲಿ ಯುದ್ಧ ವಿರೋಧಿ ಕೂಗು
ಉಕ್ರೇನ್ ಮೇಲೆ ಮಾಡಿದ ಆಕ್ರಮಣಕ್ಕೆ ರಷ್ಯಾದ ಜನರ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೊವ್, "ಕಳೆದ 72 ಗಂಟೆಗಳಲ್ಲಿ ರಷ್ಯಾದಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನೆ ಮಾಡಿದ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪುಟಿನ್ ಆಳ್ವಿಕೆಯಲ್ಲಿ ರಷ್ಯಾದ ಬೀದಿಗಳಲ್ಲಿ ಪ್ರತಿಭಟನೆ ಮಾಡುವುದು ಹೆಚ್ಚಾಗಿದೆ. ಬಂಧಿಸಲ್ಪಟ್ಟವರಲ್ಲಿ ಅನೇಕರು ವರ್ಷಾನುಗಟ್ಟಲೆ ಜೈಲಿನಲ್ಲಿರಬಹುದು. ಆದರೆ ನೀವು ರಷ್ಯಾದಲ್ಲಿ ಯುದ್ಧ ವಿರೋಧ ಕೂಗು ಕಾಣಬಹುದು," ಎಂದಿದ್ದಾರೆ. ಈ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬೆಂಬಲಿಸಿದವರು ಸಹ ಈಗ ಅವರ ಕ್ರಮಗಳನ್ನು ವಿರೋಧಿಸಿ ಅರ್ಜಿಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಮಾಜಿ ವಿಶ್ವ ಚೆಸ್ ಚಾಂಪಿಯನ್ ಹೇಳಿದರು. (ಒನ್‌ಇಂಡಿಯಾ ಸುದ್ದಿ)
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications