ರಷ್ಯಾದ ದಾಳಿಗೆ ಮಾರಿಯುಪೋಲ್‌ನಲ್ಲಿ 5,000 ಮಂದಿ ಸಾವು: ಉಕ್ರೇನ್‌

ಕೀವ್, ಮಾರ್ಚ್ 29: ಉಕ್ರೇನ್‌ ಮೇಲೆ ರಷ್ಯಾದ ದಾಳಿಯು ಭಾರೀ ದುರಂತಕ್ಕೆ ಕಾರಣವಾಗುತ್ತಿದೆ. ಮಾರಿಯುಪೋಲ್‌ ಮೇಲೆ ರಷ್ಯಾವು ನಿರಂತರವಾಗಿ ದಾಳಿ ನಡೆಸಲಿದೆ. ಮಾರಿಯುಪೋಲ್ ಮೇಲೆ ರಷ್ಯಾದ ದಾಳಿಯ ದುರಂತದಲ್ಲಿ ಕನಿಷ್ಠ 5,000 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸೋಮವಾರ ಹೇಳಿದೆ.

ಮಂಗಳವಾರ ಟರ್ಕಿಯಲ್ಲಿ ಉಕ್ರೇನ್‌ ಹಾಗೂ ರಷ್ಯಾದ ನಡುವೆ ಶಾಂತಿ ಮಾತುಕತೆ ನಡೆಯಲಿದ್ದು, ಇದಕ್ಕೂ ಒಂದು ದಿನ ಮುನ್ನಾ ಉಕ್ರೇನ್‌ನಲ್ಲಿನ ಅನೇಕ ನಗರಗಳಲ್ಲಿ ರಷ್ಯಾವು ಬಾಂಬ್‌ ದಾಳಿಯನ್ನು ನಡೆಸಿದೆ. ರಷ್ಯಾ ದಾಳಿ ನಡೆಸಿದ ದಕ್ಷಿಣ ಬಂದರಿನ ಮಾರಿಯುಪೋಲ್‌ನಲ್ಲಿ ಕನಿಷ್ಠ 5,000 ಜನರನ್ನು ಈಗಾಗಲೇ ಸಮಾಧಿ ಮಾಡಲಾಗಿದೆ ಎಂದು ಉಕ್ರೇನಿಯನ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ಸುಮಾರು 10,000 ಜನರು ಸಾವನ್ನಪ್ಪಿದ್ದಾರೆ ಎಂದು ಕೂಡಾ ಉಕ್ರೇನಿಯನ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದುವರಿದ ಶೆಲ್ ದಾಳಿಯಿಂದಾಗಿ 10 ದಿನಗಳ ಹಿಂದೆ ಸಮಾಧಿ ಮಾಡುವುದನ್ನೇ ನಿಲ್ಲಿಸಲಾಗಿದೆ ಎಂದು ಮಾನವೀಯ ಕಾರಿಡಾರ್‌ಗಳ ಉಸ್ತುವಾರಿ ವಹಿಸಿರುವ ಅಧ್ಯಕ್ಷೀಯ ಸಲಹೆಗಾರ ಟೆಟ್ಯಾನಾ ಲೋಮಕಿನಾ ಸೋಮವಾರ ಫೋನ್ ಮೂಲಕ ಎಫ್‌ಪಿಗೆ ತಿಳಿಸಿದ್ದಾರೆ.

Ukraine-Russia War: 5,000 Dead In Catastrophic Mariupol Siege Says Ukraine

ಕೀವ್‌ ಬಳಿಯ ರಷ್ಯಾದ ದಾಳಿಗಳು 80,000 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತವಾಗಲು ಕಾರಣವಾಗಿದೆ. "ಕೀವ್‌ ಅನ್ನು ವಶಪಡಿಸಿಕೊಳ್ಳುವುದು ರಷ್ಯಾದ ಗುರಿಯಾಗಿದೆ," ಎಂದು ಉಕ್ರೇನ್‌ನ ಉಪ ರಕ್ಷಣಾ ಸಚಿವ ಗನ್ನಾ ಮಲ್ಯಾರ್ ಎಚ್ಚರಿಸಿದ್ದಾರೆ. ಹಾಗೆಯೇ ರಷ್ಯಾವು, ಕೀವ್‌ ಸುತ್ತಲಿನ ಮಾನವೀಯ ಕಾರಿಡಾರ್‌ ಮೂಲಕ ಜನರನ್ನು ಸ್ಥಳಾಂತರ ಮಾಡುವುದನ್ನು ಹಾಗೂ ಸಾರಿಗೆ ಮಾರ್ಗವನ್ನು ನಿರ್ಬಂಧ ಮಾಡುವ ಯತ್ನವನ್ನು ಮಾಡುತ್ತಿದೆ," ಎಂದು ಹೇಳಿದರು.

ಕೀವ್‌ನ ಉಪನಗರ ಇರ್ಪಿನ್‌ ಮತ್ತೆ ಉಕ್ರೇನ್‌ ವಶಕ್ಕೆ

ಉಕ್ರೇನ್‌ ಪಡೆಗಳು ದೇಶದ ಉತ್ತರ ಭಾಗದ ಕೆಲವು ಸಣ್ಣ ನಗರಗಳನ್ನು ಮರಳಿ ತಮ್ಮ ವಶಕ್ಕೆ ಪಡೆದಿವೆ. ಉಕ್ರೇನ್‌ನ ಆಂತರಿಕ ಸಚಿವ ಡೆನಿಸ್ ಮೊನಾಸ್ಟೈರ್ಸ್ಕಿ ಪ್ರಕಾರ, ಉಕ್ರೇನ್‌ ಮರುದಾಳಿ ನಡೆಸಿ ಕೀವ್‌ನ ಉಪನಗರವಾದ ಇರ್ಪಿನ್ ಅನ್ನು ರಷ್ಯಾದ ಸೈನ್ಯದಿಂದ ಪುನಃ ಪಡೆದುಕೊಂಡಿತು. ಎಎಫ್‌ಪಿ ಪತ್ರಕರ್ತರು ಇರ್ಪಿನ್‌ಗೆ ಹೋಗುವ ರಸ್ತೆಯಲ್ಲಿ ಭಾರೀ ಶೆಲ್‌ ದಾಳಿ ಕೇಳಿ ಬರುತ್ತಿದೆ ಎಂದು ವರದಿ ಮಾಡಿದ್ದಾರೆ.

ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಸೋಮವಾರ ವಿಶ್ವ ಸಂಸ್ಥೆಯು ಉಕ್ರೇನ್‌ನಲ್ಲಿ ಮಾನವೀಯ ಕದನ ವಿರಾಮವನ್ನು ಬಯಸುತ್ತಿದೆ ಎಂದು ಘೋಷಿಸಿದರು. ಒಂದು ತಿಂಗಳ ಹಿಂದೆ ಆಕ್ರಮಣದ ನಂತರ ಹತ್ತು ಮಿಲಿಯನ್ ಉಕ್ರೇನಿಯನ್ನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಮತ್ತು ರಾಷ್ಟ್ರವ್ಯಾಪಿ 20,000 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಇನ್ನು "ತಮ್ಮ ಸ್ನೇಹಿಯಲ್ಲದ ದೇಶಗಳ ನಾಗರಿಕರು ರಷ್ಯಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ" ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಈ ನಡುವೆ ರಷ್ಯಾದ ವಿರುದ್ಧ ಉಕ್ರೇನ್‌ಗೆ ಸಹಾಯ ಮಾಡುವುದಕ್ಕಾಗಿ ನ್ಯಾಟೋಗೆ ಶಕ್ತಿ ತುಂಬುವ ಉದ್ದೇಶದಿಂದ 6.9 ಶತಕೋಟಿ ಡಾಲರ್ ಹಣವನ್ನು ನೀಡುವ ಬಗ್ಗೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರಸ್ತಾಪಿಸಿದ್ದಾರೆ.

ಈ ಹಿಂದೆ ಉಕ್ರೇನ್‌ನ ಮರಿಯುಪೋಲ್ ಥಿಯೇಟರ್‌ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ 300ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ವರದಿ ಆಗಿದೆ. ಮರಿಯುಪೋಲ್ ನಗರದಲ್ಲಿ ರಷ್ಯಾ ಸೇನೆಯು ನಿರಂತರವಾಗಿ ವೈಮಾನಿಕ ದಾಳಿ ಹಾಗೂ ಶೆಲ್ ದಾಳಿ ನಡೆಸುತ್ತಿದೆ. ಅತ್ಯಾಪ್ತರು, ಸಂಬಂಧಿಕರನ್ನು ಕಳೆದುಕೊಂಡ ಸಾವಿರಾರು ಮಂದಿ ನಿರಾಶ್ರಿತರಾಗುತ್ತಿದ್ದಾರೆ.

ಕಳೆದ ಮಾರ್ಚ್ 16ರಂದು, ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯುಪೋಲ್‌ನಲ್ಲಿರುವ ಥಿಯೇಟರ್‌ನಲ್ಲಿ ಶಕ್ತಿಯುತ ಬಾಂಬ್ ದಾಳಿ ನಡೆಸಿದ್ದವು. ಅಂದಿನ ವೇಳೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಚಿತ್ರಮಂದಿರದಲ್ಲಿ ಆಶ್ರಯ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+