ಜೀವಕ್ಕೆ ಬೆಲೆಯೇ ಇಲ್ಲ.. ಮಕ್ಕಳ ನರಳಾಟಕ್ಕೆ ಕೊನೆ ಯಾವಾಗ?

ಅಬ್ಬಬ್ಬಾ... ಒಂದು ಯುದ್ಧ ಇಷ್ಟೆಲ್ಲಾ ಭೀಕರವಾಗಿ ಇರುತ್ತೆ ಅನ್ನೋದನ್ನ ಈ ಆಧುನಿಕ ಜಗತ್ತಿನಲ್ಲಿ ನಮ್ಮೆಲ್ಲರಿಗೂ ತೋರಿಸಿಕೊಟ್ಟಿದ್ದು ರಷ್ಯಾ & ಉಕ್ರೇನ್ ವಾರ್. ಹೀಗೆ ಇಬ್ಬರೂ, ತಮ್ಮ ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ಅಂತಾ ಯುದ್ಧ ಶುರು ಮಾಡಿ ಈಗ ಇಡೀ ಜಗತ್ತಿನ ಬುಡಕ್ಕೆ ಬತ್ತಿ ಇಡುತ್ತಿದ್ದಾರೆ. ಅದರಲ್ಲೂ ರಷ್ಯಾ ಪಡೆಗಳು ಉಕ್ರೇನ್ ದೇಶದ ಮಕ್ಕಳ ಆಸ್ಪತ್ರೆ ಮೇಲೆ ನಡೆಸಿವೆ ಎನ್ನಲಾದ ಭೀಕರ ದಾಳಿ ಭಯ ಹುಟ್ಟಿಸುತ್ತಿದೆ.

ಅಂದಹಾಗೆ ಉಕ್ರೇನ್ ವಿರುದ್ಧ ಇದೀಗ ರಷ್ಯಾ ರಣಭೀಕರ ದಾಳಿ ಆರಂಭ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಒಂದು ಕಡೆ ಉಕ್ರೇನ್ ರಾಜಧಾನಿ ಕೀವ್‌ನ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ್ದ ಭೀಕರ ಕ್ಷಿಪಣಿ ದಾಳಿಯಿಂದ ಅವಶೇಷಗಳ ಅಡಿಯಲ್ಲಿ ನೂರಾರು ಮಂದಿ ಸಿಲುಕಿ ಒದ್ದಾಡುತ್ತಿದ್ದಾರೆ. ಈ ದಾಳಿಯಲ್ಲಿ 38 ಜನರು ಜೀವ ಬಿಟ್ಟಿದ್ದಾರೆ. ಇದು ಸಾಲದು ಎನ್ನುವಂತೆ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಪರಿಸ್ಥಿತಿ ಭೀಕರ ಸ್ವರೂಪ ಪಡೆದುಕೊಂಡಿದೆ. ಹಾಗೇ ಸೇಡು ತೀರಿಸಿಕೊಳ್ಳಲು ಈಗ ಉಕ್ರೇನ್ ಕೂಡ ಅಲರ್ಟ್ ಆಗಿದೆ.

Ukraine Residents Are In Fear After Russian Forces Attack On Hospital

ಭಾರತದ ಪ್ರಧಾನಿ ರಷ್ಯಾದಲ್ಲಿ!

ಪ್ರಧಾನಿ ಮೋದಿ ಅವರು ಇದೀಗ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಹೀಗಿದ್ದಾಗ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುತ್ತಿದೆ. ಹೀಗಾಗಿ ಪರಿಸ್ಥಿತಿ ಕೂಡ ವ್ಯತಿರಿಕ್ತ ರೂಪಕ್ಕೆ ತಿರುಗುತ್ತಿದೆ. ಮತ್ತೊಂದು ಕಡೆ ರಷ್ಯಾ ಸೇನೆ ದಾಳಿಯನ್ನ ಪಾಶ್ಚಿಮಾತ್ಯ ದೇಶಗಳು ಬಲವಾಗಿ ಖಂಡಿಸಿವೆ. ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳು ಈ ವಿಚಾರವಾಗಿ ರಷ್ಯಾ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ. ಹಾಗೇ, ಇನ್ನೊಂದು ಕಡೆ ಉಕ್ರೇನ್‌ಗೆ ಮತ್ತಷ್ಟು ಸಹಾಯ ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಇಬ್ಬರ ಮಧ್ಯೆ ತೀವ್ರ ತಿಕ್ಕಾಟ

ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು 2.5 ವರ್ಷ ಮುಗಿಯಲಿದ್ದು, ಕೆಲವೇ ತಿಂಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ರು ಇಬ್ಬರ ನಡುವಿನ ತಿಕ್ಕಾಟ ಶಾಂತವಾಗಿಲ್ಲ. ಇಬ್ಬರೂ ಹಾವು & ಮುಂಗಿಸಿ ರೀತಿ ತಿಕ್ಕಾಟ ನಡೆಸುತ್ತಿದ್ದು ಇದೀಗ ರಷ್ಯಾ ಸೇನೆ ಉಕ್ರೇನ್‌ನ ಆಸ್ಪತ್ರೆಗಳ ಮೇಲೆಯೇ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗೆ, ಎರಡೂ ದೇಶಗಳ ನಡುವೆ ಭಾರಿ ದೊಡ್ಡ ತಿಕ್ಕಾಟ ಆರಂಭ ಆಗಿರುವ ಸೂಚನೆ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+