Ukraine War: ರಷ್ಯಾಗೆ ಭಯ ಹುಟ್ಟಿಸಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೊಸ ಪ್ಲಾನ್!

ರಷ್ಯಾ ಸೇನೆಯನ್ನು ಶಕ್ತಿಯಿಂದ ಗೆಲ್ಲಲು ಆಗದ ಉಕ್ರೇನ್ ಇದೀಗ ಹೊಸ ಪ್ಲಾನ್ ಮಾಡಿದ್ದು, ಹೇಗಾದರೂ ಮಾಡಿ ರಷ್ಯಾಗೆ ಪಾಠ ಕಲಿಸಬೇಕು ಅಂತಾ ತೊಡೆತಟ್ಟಿ ನಿಂತಿದೆ. ರಷ್ಯಾ ಸೇನೆ ವಿರುದ್ಧ ಸೋತು ಸುಣ್ಣವಾಗಿ ಓಡಿ ಹೋಗಿರುವ ಉಕ್ರೇನ್ ಮಿಲಿಟರಿ ಇದೀಗ ಟ್ರಂಪ್ ಬೆಂಬಲ ಪಡೆದು ರಷ್ಯಾಗೆ ಪಾಠ ಕಲಿಸಲು ಮುಂದಾಗಿದೆ. ಒಂದು ಕಡೆ ವ್ಲಾದಿಮಿರ್ ಪುಟಿನ್ ಆಡಳಿತ ಕದನ ವಿರಾಮಕ್ಕೆ ಮೀನಮೇಷ ಎಣಿಸುತ್ತಿರುವ ಸಮಯದಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.

ಉಕ್ರೇನ್ ಕೈಯಿಂದ ಈಗಾಗಲೇ ಎಲ್ಲವನ್ನೂ ಕಿತ್ತುಕೊಂಡಿರುವ ರಷ್ಯಾ ಸೇನೆ ಬಾಕಿ ಉಳಿದ ಪ್ರದೇಶಗಳ ಮೇಲೂ ಸ್ಕೆಚ್ ಹಾಕಿ ಕಾಯುತ್ತಿದೆ. ಉಕ್ರೇನ್‌ನ ಗಡಿ ಭಾಗದಲ್ಲಿ ಇರುವ ಎಲ್ಲಾ ಹಳ್ಳಿಗಳನ್ನು ಕಿತ್ತುಕೊಳ್ಳುತ್ತಿರುವ ರಷ್ಯಾ, ಇದೀಗ ಉಕ್ರೇನ್ ರಾಜಧಾನಿ ಕೀವ್‌ಗೆ ಕೂಡ ಗುರಿ ಇಟ್ಟಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬುದು ಉಕ್ರೇನ್‌ನ ಒತ್ತಾಯವೂ ಆಗಿತ್ತು. ಇದೇ ಕಾರಣಕ್ಕೆ ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹಾಕುತ್ತಿರುವ ಉಕ್ರೇನ್ ಅಧ್ಯಕ್ಷ, ಈ ವಿಚಾರದಲ್ಲಿ ಸಕ್ಸಸ್ ಕಾಣುತ್ತಿಲ್ಲ. ಈ ಮೂಲಕ ರಷ್ಯಾ ಯುದ್ಧ ಮುಂದುವರಿಸಿ ಆಘಾತ ನೀಡುತ್ತಿದೆ. ಇದೇ ಕಾರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿರುವ ಉಕ್ರೇನ್ ಹೊಸ ಬಾಂಬ್ ಸಿಡಿಸಿದೆ!

Ukraine President Volodymyr Zelenskyy Proposes Unconditional Ceasefire

ಟ್ರಂಪ್ ರೊಚ್ಚಿಗೆಬ್ಬಿಸಲು ಉಕ್ರೇನ್ ಪ್ಲಾನ್?

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಒಂದು ರೌಂಡ್ ವಾರ್ನಿಂಗ್ ಕೂಡ ಕೊಟ್ಟಿರುವ ಡೊನಾಲ್ಡ್ ಟ್ರಂಪ್ ಅವರು, ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಅಂತಾ ಹೇಳಿದ್ದಾರೆ. ಹೀಗಿದ್ದಾಗಲೇ ಉಕ್ರೇನ್ ವೊಲೊಡಿಮಿರ್ ಝೆಲೆನ್ಸ್ಕಿ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾಗಿದ್ದು, ನಾವು ಯಾವುದೇ ಷರತ್ತು ಹಾಕದೆ ಕದನ ವಿರಾಮಕ್ಕೆ ಸಿದ್ಧ ಎಂದಿದ್ದಾರೆ. ಅಲ್ಲದೆ ರಷ್ಯಾದ ವಿರುದ್ಧ ಈ ಮೂಲಕ ಅಮೆರಿಕ ನಿರ್ಬಂಧಗಳನ್ನು ಹೇರಬೇಕು ಎಂಬ ಒತ್ತಾಯ ಮಾಡಿದ್ದಾರೆ.

ಉಕ್ರೇನ್ ಐಡಿಯಾ ವರ್ಕೌಟ್ ಆಗುತ್ತಾ?

ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಬ್ಬರೂ ಸ್ನೇಹಿತರು. ಹೀಗಿದ್ದರೂ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಟ್ರಂಪ್ ಮಾತು ಕೇಳುತ್ತಿಲ್ಲ ಪುಟಿನ್. ಇದು ಟ್ರಂಪ್ ಅವರ ಆಕ್ರೋಶಕ್ಕೂ ಕಾರಣವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಳ್ಳಲು ಕಾಯ್ತಿದ್ದಾರೆ ಉಕ್ರೇನ್ ಅಧ್ಯಕ್ಷ. ಅಲ್ಲದೆ ಈ ನೆಪದಲ್ಲಾದರೂ ಅಮೆರಿಕ ಕಡೆಯಿಂದ ಒಂದಷ್ಟು ಅನುದಾನ ಪಡೆದು ರಿಲ್ಯಾಕ್ಸ್ ಆಗಲು ಉಕ್ರೇನ್ ಪ್ಲಾನ್ ಮಾಡಿದೆ. ಆದರೆ ಅದು ವರ್ಕೌಟ್ ಆಗುವುದೇ ಅನುಮಾನ ಅಂತಿದ್ದಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+