ರಷ್ಯಾ ಅಧ್ಯಕ್ಷ ಪುಟಿನ್ ಅವರ ಮುಂದಿನ ಗುರಿ ಈ ದೇಶವಂತೆ!

ಉಕ್ರೇನ್ ಅಧ್ಯಕ್ಷರಿಗೆ ಅದೆಷ್ಟೇ ಹೇಳಿದರೂ ಬುದ್ಧಿ ಬರುವ ಲಕ್ಷಣ ಕಾಣ್ತಿಲ್ಲ. ಹೀಗಾಗಿಯೇ, ಪದೇ ಪದೇ ರಷ್ಯಾ ವಿರೋಧಿ ಹೇಳಿಕೆ ನೀಡಿ ಪರಿಸ್ಥಿತಿಯನ್ನ ಮತ್ತಷ್ಟು ಹಾಳು ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗ ಮತ್ತೊಮ್ಮೆ ಪುಟಿನ್ ವಿರುದ್ಧ ಮಾತನಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ.

ಹೌದು 2022ರ ಫೆಬ್ರವರಿ ತಿಂಗಳಲ್ಲಿ ಶುರುವಾದ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಕೆಲವೇ, ಕೆಲ ದಿನದಲ್ಲಿ 2 ವರ್ಷ ಪೂರೈಸಲಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡ ಈ ಯುದ್ಧ ತಣ್ಣಗಾಗುತ್ತಿಲ್ಲ. ಇದೇ ವೇಳೆ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ ಶತ್ರುವಿನ ಮೇಲೆರಗುತ್ತಿದೆ. ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಕೂಡ, ಉಕ್ರೇನ್ ಅಧ್ಯಕ್ಷರ ಎಡವಟ್ಟಿನಿಂದ ವಿಫಲವಾಗುತ್ತಿವೆ. ಇಂತಹ ಕಠಿಣವಾದ ಸಂದರ್ಭದಲ್ಲಿ, ಉಕ್ರೇನ್ ಅಧ್ಯಕ್ಷ ಮತ್ತೊಮ್ಮೆ ಪುಟಿನ್ ವಿರುದ್ಧ ಗಂಭೀರ ಆರೋಪ ಮಾಡಿ ಅಲ್ಲೋಲ & ಕಲ್ಲೋಲ ಸೃಷ್ಟಿಸಿದ್ದಾರೆ.

Ukraine President Alleged That Russia Will Target These Countries After Ukraine

ಪುಟಿನ್ ವಿರುದ್ಧ ಹೊಸ ಬಾಂಬ್!

ಅಂದಹಾಗೆ ಉಕ್ರೇನ್ ಕೈಯಲ್ಲಿ ಈಗ ಯುದ್ಧ ಮಾಡಲು ಕಾಸು ಇಲ್ಲ. ಹೀಗಾಗಿ ಪರದಾಟ ಮುಂದುವರಿದಿದೆ. ಇನ್ನೊಂದು ಕಡೆ ಅಮೆರಿಕ ನೀಡುತ್ತಿದ್ದ ಹಣ ಕೂಡ ನಿಂತು ಹೋಗಿ, ಸಂಕಷ್ಟ ಹೆಚ್ಚಾಗಿದೆ. ಹೀಗಿದ್ದಾಗ ಹೇಗಾದರೂ ಮಾಡಿ ಕಾಸು ಜೋಡಿಸಿ ರಷ್ಯಾದ ವಿರುದ್ಧ ಹೋರಾಡುವ ಅನಿವಾರ್ಯತೆಗೆ ಉಕ್ರೇನ್ ಸಿಲುಕಿದೆ. ಪರಿಸ್ಥಿತಿ ಹೀಗೆಲ್ಲಾ ಸಮಸ್ಯೆ ಮಾಡಿದೆ & ಉಕ್ರೇನ್ ಜನರಿಗೆ ತಿನ್ನಲು ಒಂದು ತುತ್ತು ಅನ್ನವೂ ಇಲ್ಲವಾಗಿದೆ. ಇಷ್ಟೆಲ್ಲಾ ನಡೆದರೂ ಉಕ್ರೇನ್ ಅಧ್ಯಕ್ಷ ಮಾತ್ರ, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ ಈ ಪುಟಿನ್ ಮುಂದೆ ಇನ್ನೂ ಹಲವು ದೇಶಗಳ ವಿರುದ್ಧ ಯುದ್ಧ ಮಾಡ್ತಾರೆ ಅಂತಾ ಆರೋಪ ಮಾಡಿದ್ದಾರೆ.

ಈ ದೇಶಗಳ ವಿರುದ್ಧ ಪುಟಿನ್ ಯುದ್ಧ?

ಮೊದಲೇ ಹೇಳಿದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ರಷ್ಯಾ ವಿರುದ್ಧ ಈಗ ಯುದ್ಧ ಮುಂದುವರಿಸಲು ಹಣ ಕೂಡಿಸುತ್ತಿದ್ದಾರೆ. ಅಮೆರಿಕ ಕೈಕೊಟ್ಟ ಕಾರಣಕ್ಕೆ ಉಕ್ರೇನ್ ಕೈಕಾಲು ಆಡುತ್ತಿಲ್ಲ. ಹೀಗಾಗಿ ಬಾಲ್ಟಿಕ್‌ ದೇಶಗಳಿಗೆ ಭೇಟಿ ಕೈಗೊಂಡಿರುವ ವೊಲೊಡಿಮಿರ್‌ ಝೆಲೆನ್‌ಸ್ಕಿ ಬೆಂಬಲ ಕೋರುತ್ತಿದ್ದು. ಈ ವೇಳೆ ಲಿಥುವೇನಿಯಾ, ಲಾತ್ವಿಯಾ, ಎಸ್ಟೋನಿಯಾ ಮತ್ತು ಮಾಲ್ಡೊವಾ ವಿರುದ್ಧವೂ ಪುಟಿನ್ ಯುದ್ಧ ಸಾರಬಹುದು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

Ukraine President Alleged That Russia Will Target These Countries After Ukraine

ಪುಟಿನ್ ಬಗ್ಗೆ ಝೆಲೆನ್‌ಸ್ಕಿ ಮಾತು

ಹಾಗೇ ಇದೇ ಸಮಯದಲ್ಲಿ 'ನಾವು ವ್ಲಾಡಿಮಿರ್‌ ಪುಟಿನ್‌ನ ಮುಗಿಸದೇ ರಷ್ಯಾ ಈ ಯುದ್ಧವ ನಿಲ್ಲಿಸದು. ಉಕ್ರೇನ್‌ ರೀತಿಯೆ ನೆರೆಹೊರೆ ದೇಶದ ಮೇಲೂ ದಾಳಿ ಮಾಡುವುದು ನಿಲ್ಲುವುದಿಲ್ಲ. ಈಗ ಉಕ್ರೇನ್ ವಿರುದ್ಧ ಯುದ್ಧ ನಡೆಯುತ್ತದೆ, ಇದಾದ ನಂತರ ಪುಟಿನ್‌ಗೆ ಮುಂದಿನ ಗುರಿ ಲಿಥುವೇನಿಯಾ, ಲಾತ್ವಿಯಾ, ಎಸ್ಟೋನಿಯಾ & ಮಾಲ್ಡೊವಾ ಆಗುತ್ತೆ' ಎಂದಿದ್ದಾರೆ ಇದೇ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ. ಹೀಗಾಗಿ ರಷ್ಯಾ ಮತ್ತಷ್ಟು ರೊಚ್ಚಿಗೇಳುವ ಮುನ್ಸೂಚನೆಯು ಈ ಮೂಲಕ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+