ನ್ಯಾಟೋ ಪಡೆಗಳಿಂದ ಉಕ್ರೇನ್ ಸೇನೆಗೆ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ?

ರಷ್ಯಾ ಸೇನೆ ನಡೆಸುತ್ತಿರುವ ದಾಳಿ ಪರಿಣಾಮ ಈಗಾಗಲೇ ಬೆಚ್ಚಿ ಬಿದ್ದಿರುವ ಉಕ್ರೇನ್ ಸೇನೆ ಓಡಿ ಹೋಗುತ್ತಿದೆ. ಹಲವು ಪ್ರದೇಶಗಳ ಮೇಲೆ ರಷ್ಯಾ ಸುಲಭವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಭರ್ಜರಿಯಾಗಿ ನೂರಾರು ಹಳ್ಳಿಗಳನ್ನು ವಶಕ್ಕೆ ಪಡೆದಿದೆ. ಇಂತಹ ಸಮಯದಲ್ಲೇ ನೆರವು ಬೇಕು ಅಂತಾ ಕಾಯುತ್ತಿರುವ ಉಕ್ರೇನ್ ಮಿಲಿಟರಿಗೆ ಅಮೆರಿಕ ಆಘಾತ ನೀಡಿದೆ. ಆದರೆ ಮತ್ತೊಂದು ಕಡೆ ನ್ಯಾಟೋ ಒಕ್ಕೂಟದ ಕಡೆಯಿಂದ ಶೀಘ್ರದಲ್ಲೇ ಭರ್ಜರಿ ಸುದ್ದಿ ಸಿಗುವ ಬಗ್ಗೆ ಭರವಸೆ ಮೂಡಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವ ತನಕ ಒಂದು ಲೆಕ್ಕ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಮತ್ತೊಂದು ಲೆಕ್ಕ ಎನ್ನುವ ಪರಿಸ್ಥಿತಿ ಇದೆ. ಯಾಕಂದ್ರೆ ಟ್ರಂಪ್‌ಗೆ ಉಕ್ರೇನ್ ಸೇನೆಗೆ ನೆರವು ನೀಡುವುದು ಇಷ್ಟ ಇರಲಿಲ್ಲ, ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಇದ್ದ ಸಮಯದಲ್ಲಿ ಉಕ್ರೇನ್ ದೇಶಕ್ಕೆ ಭಾರಿ ದೊಡ್ಡ ನೆರವು ನೀಡಲಾಗಿತ್ತು. ಆದರೆ ನಂತರ ಡೊನಾಲ್ಡ್ ಟ್ರಂಪ್ ಗೆದ್ದು ಉಕ್ರೇನ್‌ಗೆ ಭಾರಿ ಆಘಾತ ನೀಡಿದ್ದಾರೆ. ಹೀಗಿದ್ದಾಗಲೇ, ನ್ಯಾಟೋ ಪಡೆಗಳಿಂದ ಉಕ್ರೇನ್ ಸೇನೆಗೆ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ?

Ukraine Military Is Waiting For The More Aid From Friends

ಉಕ್ರೇನ್ ಸೇನೆಗೆ ಭರ್ಜರಿ ಬೆಂಬಲ?

ನ್ಯಾಟೋ ಒಕ್ಕೂಟ ಪ್ರಮುಖವಾಗಿ ರಷ್ಯಾ ವಿರುದ್ಧವೇ ರಚನೆ ಆಗಿದ್ದು, ನ್ಯಾಟೋ ಮೂಲಕ ಉಕ್ರೇನ್ ದೊಡ್ಡ ಮಟ್ಟದಲ್ಲಿ ಸಹಾಯ ಪಡೆಯುತ್ತಿದೆ. ಹೀಗಿದ್ದರೂ, ಡೊನಾಲ್ಡ್ ಟ್ರಂಪ್‌ರ ಎಂಟ್ರಿ ನಂತರ ಉಕ್ರೇನ್‌ಗೆ ಸರಿಯಾಗಿ ಅನುದಾನ ಸಿಗುತ್ತಿರಲಿಲ್ಲ. ಆದರೆ ಇದೀಗ, ಅಮೆರಿಕ ಮಾಡಿದ ಕೊರತೆಯನ್ನು ನ್ಯಾಟೋ ಮೂಲಕ ಪೂರೈಸಿಕೊಳ್ಳಲು ಉಕ್ರೇನ್ ಪ್ಲಾನ್ ಮಾಡ್ತಿದೆ. ಇದೇ ಕಾರಣಕ್ಕೆ ನ್ಯಾಟೋ ಒಕ್ಕೂಟದ ಕಾಲು ಹಿಡಿಯಲು ಉಕ್ರೇನ್ ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+