ದೊಡ್ಡಣ್ಣನ ಕೈಯಲ್ಲಿ ಕಾಸು ಖಾಲಿ: ಉಕ್ರೇನ್‌ಗೆ ಸಹಾಯ ನಿಲ್ಲಿಸುತ್ತಾ ಅಮೆರಿಕ?

ಅಮೆರಿಕ ನಂಬಿ ಹೋದ್ರೆ ಉಳಿಗಾಲ ಇಲ್ಲ ಅನ್ನೋ ಆರೋಪ ಆಗಾಗ ಕೇಳಿಬರುತ್ತದೆ. ಈ ಮಾತು ಎಷ್ಟೋ ದೇಶದ ವಿಚಾರದಲ್ಲಿ ನಿಜ ಕೂಡ ಆಗಿದೆ, ಅನ್ನೋ ಗಂಭೀರ ಆರೋಪದ ನಡುವೆ ಈಗ ಉಕ್ರೇನ್‌ಗೆ ಭಯ ಶುರುವಾಗಿದೆ. ಬಲಶಾಲಿ ರಷ್ಯಾ ವಿರೋಧ ಕಟ್ಟಿಕೊಂಡು, ಅಮೆರಿಕದ ಸಹಾಯ ನಂಬಿಕೊಂಡು ಬದುಕುತ್ತಿರುವ ಉಕ್ರೇನ್‌ಗೆ ಆಘಾತದ ಮೇಳೆ ಆಘಾತ ಎದುರಾಗುತ್ತಿದೆ.

ಅಮೆರಿಕ ಮತ್ತು ರಷ್ಯಾ ಆಜನ್ಮ ವೈರಿಗಳು, ಹೀಗಾಗಿಯೇ ಇಬ್ಬರ ನಡುವೆ ಕಿತ್ತಾಟ ಕೂಡ ನಡೆಯುತ್ತಿದೆ. ಆದರೆ ಇಬ್ಬರೂ ನೇರವಾಗಿ ಒಬ್ಬರ ಮೇಲೆ ಮತ್ತೊಬ್ಬರು ಯುದ್ಧ ಸಾರಿಲ್ಲ. ಇದರ ಬದಲಾಗಿ ರಷ್ಯಾ ಮತ್ತು ಅಮೆರಿಕ ಪರೋಕ್ಷವಾಗಿ ಯುದ್ಧ ಮಾಡುತ್ತಿವೆ. ಒಂದೆಡೆ, ಅಮೆರಿಕದ ಶತ್ರುಗಳಿಗೆ ರಷ್ಯಾ ಬೆಂಬಲ ನೀಡುತ್ತಿದೆ.

Ukraine Is Waiting For USA Aid To Continue Fight Against Russia

ಹಾಗೇ ರಷ್ಯಾ ಶತ್ರುಗಳಿಗೆ ಅಮೆರಿಕದ ಸಹಾಯ ಸಿಗುತ್ತಿದೆ. ಇದೇ ರೀತಿ ಉಕ್ರೇನ್‌ಗೆ ಕೂಡ ಅಮೆರಿಕ ಬೆಂಬಲ ನೀಡುತ್ತಿದೆ. ರಷ್ಯಾ ವಿರುದ್ಧ ಈ ಮೂಲಕ ಅಮೆರಿಕವು ಪರೋಕ್ಷ ಯುದ್ಧ ಸಾರಿದೆ ಎಂಬ ಆರೋಪ ಇದೆ. ಈ ಬೆಳವಣಿಗೆ ನಡುವೆ ಈಗ ದಿಢೀರ್ ಉಕ್ರೇನ್‌ಗೆ ಆಘಾತ ಸಿಕ್ಕಿದೆ.

ಉಕ್ರೇನ್‌ಗೆ ಸಿಗುವ ನೆರವು ನಿಲ್ಲುತ್ತಾ?

ಹೌದು, ಉಕ್ರೇನ್‌ಗೆ ಸುಮಾರು 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವನ್ನು ಈವರೆಗೆ ಅಮೆರಿಕ ನೀಡಿದೆ. ಆದರೆ ಈಗ ನೆರವು ನೀಡಲು ಅಮೆರಿಕದ ಬಳಿ ಹಣ ಇಲ್ಲವಂತೆ. ಹೀಗೆ ಅಮೆರಿಕ ಕೈಯಲ್ಲಿ ಕಾಸು ಖಾಲಿ ಆಗಿದೆ ಎನ್ನುವ ವಿಚಾರನ ಸ್ವತಃ ಅಮೆರಿಕನ್ ಕಾಂಗ್ರೆಸ್ ಸದಸ್ಯರೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಒಂದು ಕಡೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮಾಡುವಾಗಲೇ, ಈ ಸುದ್ದಿ ಹೊರ ಬಿದ್ದಿರುವುದು ಶಾಕ್ ಮೇಲೆ ಶಾಕ್ ಕೊಟ್ಟಂತಾಗಿದೆ.

Ukraine Is Waiting For USA Aid To Continue Fight Against Russia

ಉಕ್ರೇನ್ ಜನರಿಗೆ ಚಿಂತೆ ಶುರು

ರಷ್ಯಾ ಶತ್ರು ಉಕ್ರೇನ್ ಸರ್ವನಾಶಕ್ಕೆ ತೊಡೆತಟ್ಟಿದೆ. ಸಂಧಾನ ನಡೆಯುವ ಲಕ್ಷಣ ಕಾಣುತ್ತಿಲ್ಲ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ಇನ್ನ ಉಕ್ರೇನ್ ತಲೆಬಗ್ಗಿಸಿ ಸೋಲು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಹೀಗೆ ಯಾರದ್ದೋ ಸ್ವಾರ್ಥ & ಕಿರಿಕಿರಿಯಲ್ಲಿ ಅಮಾಯಕರ ಜೀವ ಸಂಕಷ್ಟಕ್ಕೆ ಸಿಲುಕಿದೆ. ತುತ್ತು ಅನ್ನಕ್ಕೂ ಉಕ್ರೇನ್‌ನ ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಅಮೆರಿಕದ ನೆರವು ಕೂಡ ನಿಂತು ಹೋದರೆ, ನಮ್ಮ ಸ್ಥಿತಿ ಹೇಗಪ್ಪಾ? ಎಂಬ ಚಿಂತೆ ಉಕ್ರೇನ್ ಜನರಲ್ಲಿ ಶುರುವಾಗಿದೆ.

ಒಟ್ನಲ್ಲಿ 2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ಯುದ್ಧವು ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರ ಬಲಿ ತೆಗೆದುಕೊಂಡಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ ಶತ್ರುವಿನ ಮೇಲೆರಗುತ್ತಿದೆ. ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಕೂಡ ವಿಫಲವಾಗುತ್ತಿವೆ. ಇದೇ ಸಮಯದಲ್ಲಿ ಉಕ್ರೇನ್ ಸೇನೆಗೆ ಅಮೆರಿಕ ಕೈಕೊಡುವ ಎಲ್ಲಾ ಲಕ್ಷಣ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+