ಒಳಗೊಳಗೆ ಹೊತ್ತಿದ ಬೆಂಕಿ? ಉಕ್ರೇನ್ & ಅಮೆರಿಕ ನಡುವೆ ಕಿರಿಕ್?

ತಲೆ ಗಟ್ಟಿ ಇದೆ ಅಂತಾ ಹೋಗಿ ಬಂಡೆಗೆ ಚಚ್ಚಿಕೊಳ್ಳೋದು ಅಂತಾರೆ ಅಲ್ವಾ? ಆ ಮಾತಿಗೆ ಈ ಉಕ್ರೇನ್ ತಾಜಾ ತಾಜಾ ಉದಾಹರಣೆ ಕಣ್ರೀ. ಯಾಕಂದ್ರೆ ಉಕ್ರೇನ್ ಸುಮ್ಮನೆ ಇಲ್ಲದೇ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನ ಕೆಣಕುವ ಕೆಲಸ ಮಾಡಿತ್ತು ಎಂಬ ಆರೋಪ ಇದೆ. ಹೀಗೆ ಈ ಆರೋಪಗಳ ನಡುವೆಯೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿ ಇದೀಗ ಭರ್ಜರಿ 2 ವರ್ಷ ಕೂಡ ಕಂಪ್ಲೀಟ್ ಆಗಿದೆ. ಈ ಸಮಯದಲ್ಲೇ ಉಕ್ರೇನ್ & ಅಮೆರಿಕ ನಡುವೆ ಕಿರಿಕ್? ಶುರುವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ.

ಮೊದಲೇ ಹೇಳಿದಂತೆ ಉಕ್ರೇನ್ ದೇಶವು ಯುದ್ಧದ ಬೆಂಕಿಯಲ್ಲಿ ಬೆಂದು ಹೋಗಿದೆ. ರಷ್ಯಾ ವಿರುದ್ಧ ಹೋರಾಡಲು ಕೈಯಲ್ಲಿ ಕಾಸು ಇಲ್ಲದೆ, ಸೈನಿಕರ ಬಲವೂ ಇಲ್ಲದೆ ಒದ್ದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ಸೇನೆಗೆ ಮತ್ತು ಉಕ್ರೇನ್ ಅಧ್ಯಕ್ಷರಿಗೆ ಆಧಾರ ಆಗಿರುವುದು ಪಾಶ್ಚಿಮಾತ್ಯ ದೇಶಗಳು. ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಹೀಗೆ ಅಮೆರಿಕ ಜತೆ ಕೈಜೋಡಿಸಿರುವ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುತ್ತಿವೆ. ಆದರೆ ಯುದ್ಧ ಆರಂಭದ ದಿನಗಳಲ್ಲಿ ಹೆಚ್ಚಿನ ಹಣ ನೀಡಿದ ಈ ದೇಶಗಳು ಈಗ ದುಡ್ಡು ಕೊಡಲು ಆಗುತ್ತಿಲ್ಲ. ಹೀಗಾಗಿ ಉಕ್ರೇನ್ ಆಕ್ರೋಶಗೊಂಡಿದೆ ಎಂಬ ಸುದ್ದಿ ಹಬ್ಬಿದೆ.

Ukraine Is Waiting For More Package & Help From The Western Countries

ಉಕ್ರೇನ್ & ಅಮೆರಿಕ ನಡುವೆ ಕಿರಿಕ್?

ಜಗತ್ತು ಇನ್ನೆಂದು ಮಹಾಯುದ್ಧ ನೋಡುವುದಿಲ್ಲ ಎಂಬ ಮಾತು ಚಾಲ್ತಿಯಲ್ಲಿ ಇರುವಾಗ ಶುರುವಾಗಿತ್ತು ರಷ್ಯಾ & ಉಕ್ರೇನ್ ಯುದ್ಧ. ಹೀಗೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನ ಸಾರಿ 2 ವರ್ಷ ಕಳೆದಿದೆ. 2 ವರ್ಷದಲ್ಲಿ ಅಮೆರಿಕದಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯ ಪಡೆದಿದೆ ಉಕ್ರೇನ್. ಆದ್ರೆ ಈಗ ಮತ್ತೆ ಉಕ್ರೇನ್ ಸೇನೆಗೆ ಸಹಾಯ ಮಾಡೋಕೆ ಅಮೆರಿಕದ ಬಳಿ ಹಣದ ಕೊರತೆ ಕಾಡುತ್ತಿದೆ. ಹೀಗಾಗಿ ಇಬ್ಬರ ನಡುವೆ ಮುನಿಸು ಶುರುವಾಗಿ ಕಿತ್ತಾಟ ಎದುರಾಯ್ತಾ? ಅನ್ನೋ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಕಾಡುತ್ತಿದೆ.

ಬ್ರಿಟನ್ ಕೊಟ್ಟಿತ್ತು 26 ಸಾವಿರ ಕೋಟಿ

ಇತ್ತೀಚೆಗೆ ಬ್ರಿಟನ್ ಕೂಡ ಉಕ್ರೇನ್‌ಗೆ ದೊಡ್ಡ ಮೊತ್ತದ ಸಹಾಯ ಮಾಡುವ ಭರವಸೆಯನ್ನ ನೀಡಿತ್ತು. ಅದರಲ್ಲೂ ಬ್ರಿಟನ್ ಸುಮಾರು 26 ಸಾವಿರ ಕೋಟಿ ರೂಪಾಯಿ ಸೇನಾ ನೆರವು, ನೀಡುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಖುದ್ದು ಬ್ರಿಟನ್ ಪ್ರಧಾನಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿ ಸಹಾಯ ಮಾಡಲು ಮುಂದಾಗಿದ್ದರು. ಈ ಬೆಳವಣಿಗೆ ನಡುವೆ ಇದೀಗ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಉಕ್ರೇನ್ ಕೋಪಗೊಂಡಿದೆ ಎನ್ನಲಾಗ್ತಿದೆ. ಆದರೆ ಇದಕ್ಕೆ ಯಾವುದೇ ಆಧಾರ ಸಿಗುತ್ತಿಲ್ಲ. ಹೀಗಾಗಿ ಇದು ವದಂತಿ ಅಥವಾ ಸುಳ್ಳು ಸುದ್ದಿ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

Ukraine Is Waiting For More Package & Help From The Western Countries

ಮನುಷ್ಯತ್ವಕ್ಕೆ ಯಾವುದೇ ಬೆಲೆ ಇಲ್ಲ

ಯುದ್ಧ ಅಂದ್ರೆ ಹೀಗೆ, ಅಲ್ಲಿ ಮನುಷ್ಯರು & ಮನುಷ್ಯತ್ವಕ್ಕೆ ಯಾವುದೇ ಬೆಲೆ ಇರೋದಿಲ್ಲ. ಈ ಮಾತನ್ನ ನಿಜ ಮಾಡಲು ರಷ್ಯಾ & ಉಕ್ರೇನ್ ದೇಶಗಳು ಬಡಿದಾಡುತ್ತಿವೆ. ಇದು ಬಿಡಿ, ಅತ್ತ ಹಮಾಸ್ ಉಗ್ರರು VS ಇಸ್ರೇಲ್ ನಡುವೆ ನಡೆಯುತ್ತಿರುವ ಕಿತ್ತಾಟ ಕೂಡ ಭಾರಿ ಭಯ ಹುಟ್ಟುಹಾಕಿದೆ. ಹೀಗಾಗಿ ಎರಡೂ ಯುದ್ಧಗಳು ಮುಂದೆ 3ನೇ ಮಹಾಯುದ್ಧಕ್ಕೆ, ನಾಂದಿ ಹಾಡಿದರೆ ಹೇಗಪ್ಪಾ? ಅಂತಾ ಜನರು ಕೂಡ ಭಯಪಡುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+