Russia & Ukraine: ಉಕ್ರೇನ್‌ಗೆ ವಡೆ & ಪಾಯಸ ತಿನ್ನಿಸಲು ರಷ್ಯಾ ಸೇನೆಯಿಂದ ಸಕಲ ಸಿದ್ಧತೆ?

ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ & ಉಕ್ರೇನ್, ಮತ್ತೊಂದು ಪರಮಾಣು ಯುದ್ಧಕ್ಕೆ ಸಜ್ಜಾಗಿವೆಯಾ?

ಯುದ್ಧ.. ಯುದ್ಧ.. ಯುದ್ಧ... ಹೀಗೆ ಜಗತ್ತಿನಾದ್ಯಂತ ಬರೀ ಯುದ್ಧದ ಭಯ ಕಾಡ್ತಿದೆ. ಹೌದು, ರಷ್ಯಾದ ನಗರ ಖಜಾನ್ ನಲುಗಿ ಹೋಗಿದೆ. ರಷ್ಯಾ ದೇಶದ ಪ್ರಮುಖ ನಗರಗಳ ಪೈಕಿ ಒಂದಾದ 'ಖಜಾನ್' ಮೇಲೆ ಭೀಕರ ಅಟ್ಯಾಕ್ ನಡೆಸಿತ್ತು ಉಕ್ರೇನ್. ನೋಡ ನೋಡುತ್ತಲೇ ಬಹುಮಹಡಿ ಕಟ್ಟಡಕ್ಕೆ ನುಗ್ಗಿದ ಸುಮಾರು 8 ಡ್ರೋನ್‌ಗಳು ಕಟ್ಟಡ ಹೊತ್ತಿ ಉರಿಯುವಂತೆ ಮಾಡಿದ್ದವು. ಈ ಘಟನೆ ನಂತರ ರಷ್ಯಾದ ಹಲವು ಸಿಟಿಗಳ ಮೇಲೆ ಕೂಡ ದಾಳಿ ಮಾಡಿದ್ದ ಉಕ್ರೇನ್ ಸೇನೆ ಇನ್ನಷ್ಟು ಭಯ ಮೂಡುವಂತೆ ಮಾಡಿತ್ತು. ಇಷ್ಟೆಲ್ಲಾ ಘಟನೆಗಳ ನಡುವೆ, ಈಗ ಉಕ್ರೇನ್‌ಗೆ ವಡೆ & ಪಾಯಸ ತಿನ್ನಿಸಲು ರಷ್ಯಾ ಸೇನೆಯಿಂದ ಸಕಲ ಸಿದ್ಧತೆ ನಡೆದಿದೆಯಾ?

Ukraine Is In Fear To Face Big Attack From Russia After Kazan Drone Incident

ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರ?

ರಷ್ಯಾ ವಿರುದ್ಧ ಉಕ್ರೇನ್ ಸೇನೆ ಡ್ರೋನ್‌ಗಳ ಮೂಲಕ ಭೀಕರ ಅಟ್ಯಾಕ್ ನಡೆಸಿದ್ದು, 9/11ರ ಅಮೆರಿಕ ಮೇಲಿನ ಭೀಕರ ದಾಳಿ ನೆನಪು ಮಾಡುವಂತೆ ಅಟ್ಯಾಕ್ ಆಗಿತ್ತು. 8 ಡ್ರೋನ್‌ಗಳ ಬಳಸಿ ಈ ರೀತಿ ಡೆಡ್ಲಿ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಹಾಗೇ ಈ ದಾಳಿಯ ತೀವ್ರತೆಗೆ 'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ನಗರ ಖಜಾನ್ ನಲುಗಿ ಹೋಗಿತ್ತು. ಆದರೆ ಇದೇ ಘಟನೆಯ ನಂತರ ರೊಚ್ಚಿಗೆದ್ದಿರುವ ರಷ್ಯಾ, ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರ ಬಳಕೆ ಮಾಡುತ್ತಾ? ಎಂಬ ಅನುಮಾನ ಮೂಡಿದೆ.

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ಇಲ್ಲವಾದರೆ ಈ ಎರಡೂ ದೇಶಗಳು ಬಡಿದಾಡುತ್ತಿರುವ ರೀತಿ ನೋಡಿದರೆ ಭಾರಿ ದೊಡ್ಡ ಸಂಕಷ್ಟ ಎದುರಾಗುವ ಭಯ ಕಾಡುತ್ತಿದೆ. ರಷ್ಯಾ & ಉಕ್ರೇನ್ ಇಷ್ಟುದಿನ ಬಳಕೆ ಮಾಡದ ಭಯಾನಕ ಅಸ್ತ್ರಗಳನ್ನ ಕೂಡ ಇದೀಗ ಬಳಸಿ ದಾಳಿ ಮಾಡುತ್ತಿವೆ. ಕಳೆದ 2 ವರ್ಷ 10 ತಿಂಗಳು ಅಂದ್ರೆ 1000ಕ್ಕೂ ಹೆಚ್ಚು ದಿನಗಳಿಂದ ಇಬ್ಬರ ನಡುವಿನ ಬಡಿದಾಟವನ್ನು ಇಡೀ ಜಗತ್ತೇ ಕಣ್ತುಂಬಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+