Ukraine War: ರಷ್ಯಾ ವಿರುದ್ಧ ಅಮೆರಿಕ ತಂತ್ರ, ಭಯಾನಕ ಅಸ್ತ್ರಗಳು ಉಕ್ರೇನ್ ನೆಲದಲ್ಲಿ ಇಳಿದಿದ್ದು ಏಕೆ?

ರಷ್ಯಾ ಸೇನೆಯನ್ನು ಹೇಗಾದರೂ ಮಾಡಿ ಸೋಲಿಸಬೇಕು, ಆ ಮೂಲಕ ಉಕ್ರೇನ್‌ಗೆ ಗೆಲುವು ಸಿಗುವಂತೆ ಮಾಡಬೇಕು ಎಂಬುದು ಅಮೆರಿಕದ ಶಪಥ. ಇದೇ ಕಾರಣಕ್ಕೆ ರಷ್ಯಾ ಸೋಲಿಸಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಅಮೆರಿಕ ಆರಂಭ ಮಾಡಿದೆ. ಅದರಲ್ಲೂ ಈಗ ರಷ್ಯಾ & ಉಕ್ರೇನ್ ಯುದ್ಧದ ಹಣೆಬರಹವನ್ನೇ ಬದಲಾಯಿಸುವ ಘೋರ ಅಸ್ತ್ರವನ್ನ ಗಿಫ್ಟ್ ರೂಪದಲ್ಲಿ ಉಕ್ರೇನ್ ನೆಲಕ್ಕೆ ಕಳುಹಿಸಿದೆ ಅಮೆರಿಕ & ನ್ಯಾಟೋ ಒಕ್ಕೂಟ!

ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಉಕ್ರೇನ್‌ಗೆ ಲಕ್ಷಾಂತರ ಕೋಟಿ ಸಹಾಯವನ್ನ ಮಾಡಿದೆ ಅಮೆರಿಕ. ಕಳೆದ ವರ್ಷ ಅಂದ್ರೆ 2023 ರಲ್ಲಿ ಈ ಎಫ್‌-16 ಯುದ್ಧ ವಿಮಾನಗಳನ್ನು ಉಕ್ರೇನ್‌ ಸೇನೆಗೆ ಕೊಡೋದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಹೀಗಾಗಿಯೇ ಎಫ್‌-16 ಯುದ್ಧ ವಿಮಾನ ಪೂರೈಕೆ ಮಾಡಲು ಎಲ್ಲಾ ರೀತಿಯ ತಯಾರಿ ಆರಂಭ ಮಾಡಿತ್ತು ಅಮೆರಿಕ. ಈಗ ಮೊದಲ ಬ್ಯಾಚ್‌ನಲ್ಲಿ ಉಕ್ರೇನ್ ನೆಲಕ್ಕೆ ಭಯಾನಕ ಅಸ್ತ್ರಗಳಾದ ಎಫ್‌-16 ಯುದ್ಧ ವಿಮಾನ ಕಳುಹಿಸಿದೆ ಅಮೆರಿಕ. ಯುರೋಪ್ ದೇಶದಲ್ಲಿ ಇರುವ ನ್ಯಾಟೋ ಒಕ್ಕೂಟದ ಸದಸ್ಯ ದೇಶಗಳ ಜೊತೆ ಮಾತುಕತೆಯನ್ನ ನಡೆಸಿ ಅಮೆರಿಕ ತನ್ನ ಬಲಶಾಲಿ ಯುದ್ಧ ವಿಮಾನಗಳನ್ನು ಈಗ ಉಕ್ರೇನ್‌ಗೆ ನೀಡಿದೆ.

Ukraine Has Been Received First Batch Of F-16 Jets From NATO Friends To Fight Against Russia

ಯುದ್ಧದ ಗತಿಯೇ ಬದಲಾಗಿ ಹೋಗುತ್ತಾ?

ಉಕ್ರೇನ್ ವಾಯು ರಕ್ಷಣೆಗೆ ಎಫ್‌-16 ಯುದ್ಧ ವಿಮಾನಗಳನ್ನು ಕೊಡಿ ಅಂತಾ ಝೆಲೆನ್‌ಸ್ಕಿ ಪದೇ ಪದೆ ಬೇಡಿಕೆ ಸಲ್ಲಿಸುತ್ತಿದ್ದರು. ಯುದ್ಧ ಆರಂಭವಾದ ದಿನದಿಂದಲೂ ಇದೇ ಡಿಮ್ಯಾಂಡ್ ಇತ್ತು. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಬೇಡಿಕೆಗೆ ಅಸ್ತು ಎನ್ನಲು ತಡ ಮಾಡಿದ್ದವು. ಈ ರೀತಿ ತಡ ಆಗಲು ಕಾರಣ ರಷ್ಯಾ. ಯಾಕಂದ್ರೆ, ಅಕಸ್ಮಾತ್ ರಷ್ಯಾ ಕೋಪ ತಮ್ಮ ವಿರುದ್ಧ ತಿರುಗಿದರೆ ಏನು ಮಾಡುವುದು ಎಂಬ ಭಯ ನ್ಯಾಟೋ ಒಕ್ಕೂಟದ ಯುರೋಪ್ ದೇಶಗಳ ನಾಯಕರಲ್ಲಿ ಕಾಡುತ್ತಿತ್ತು. ಹೆಂಗೋ ಒಪ್ಪಿಗೆ ಸಿಕ್ಕಿದ್ದರೂ ಉಕ್ರೇನ್ ಕೈಗೆ ಎಫ್‌-16 ಯುದ್ಧ ವಿಮಾನಗಳು ತಲುಪಲು ಹಲವು ತಿಂಗಳೇ ಬೇಕಾಯಿತು.

ಅಮೆರಿಕ ಎಂಟ್ರಿ ಹಾಕಿದ್ದು ಯಾಕೆ?

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 4 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ ಎಂಬ ಆರೋಪವನ್ನ ರಷ್ಯಾ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+