Ukraine War: ಉಕ್ರೇನ್ ಗಡಿಯಲ್ಲಿ ನ್ಯಾಟೋ ಪಡೆಗಳಿಂದ ಸಮರ ಸಿದ್ಧತೆ?
ರಷ್ಯಾ ಸೇನೆಯಿಂದ ಉಕ್ರೇನ್ ವಿರುದ್ಧ ಪದೇ ಪದೇ ದಾಳಿ ನಡೆಯುತ್ತಿರುವ ಕಾರಣಕ್ಕೆ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ. ಉಕ್ರೇನ್ ಗಡಿ ಭಾಗದಲ್ಲಿ ಅಕ್ಷರಶಃ ರಕ್ತಪಾತ ನಡೆದು ಹೋಗಿದ್ದು, ಕಂಡ ಕಂಡ ಜಾಗಕ್ಕೆ ನುಗ್ಗಿ ಘೋರ ದಾಳಿ ನಡೆಸುತ್ತಾ ಇದೆ ರಷ್ಯಾ ಸೇನೆ. ಹೀಗಾಗಿ ಎಲ್ಲವನ್ನೂ ಗಮನಿಸಿ ಇದೀಗ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ನ್ಯಾಟೋ ಒಕ್ಕೂಟದ ನಾಯಕರು. ಅದರಲ್ಲೂ ಉಕ್ರೇನ್ ಗಡಿ ಭಾಗದಲ್ಲಿ ಹದ್ದಿನ ಕಣ್ಣಿಡಲು ಏನು ಮಾಡ್ತಿದ್ದಾರೆ ಗೊತ್ತಾ?
ಒಂದು.. ಎರಡು.. ಮೂರು.. ಹೀಗೆ ರಷ್ಯಾ & ಉಕ್ರೇನ್ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1,500 ದಿನಗಳನ್ನ ಯಶಸ್ವಿಯಾಗಿ ಪೂರೈಸಲು ಮುಂದೆ ನುಗ್ಗುತ್ತಿರುವಂತೆ ಕಾಣುತ್ತಿದೆ. ರಷ್ಯಾ & ಉಕ್ರೇನ್ ನಡುವೆ ಕಿರಿಕ್ ಶುರುವಾದ ನಂತರ ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲಲಿದೆ, ರಷ್ಯಾ ಸಿಟ್ಟು ಬಿಟ್ಟು ಸೇನೆ ವಾಪಸ್ ಕರೆಸಿಕೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಯುದ್ಧ ಶುರುವಾಗಿ ಇನ್ನೇನು ನಾಲ್ಕು ವರ್ಷ ಮುಗಿಯಲಿದೆ. ಇಷ್ಟೆಲ್ಲಾ ಒತ್ತಡದ ಸಮಯದಲ್ಲೇ ದಿಢೀರ್ ಮತ್ತೊಂದು ಸ್ಫೋಟಕ ವಿಚಾರ ಇದೀಗ ಹಲ್‌ಚಲ್ ಎಬ್ಬಿಸಿದೆ.

ಉಕ್ರೇನ್ ಗಡಿಯಲ್ಲಿ ನ್ಯಾಟೋ ಸೇನೆ
ಉಕ್ರೇನ್ ಮಿಲಿಟರಿ ತಾನು ರಷ್ಯಾ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಇತ್ತು. ರಷ್ಯಾದ ಸೇನೆ 2022ರಲ್ಲಿ ಯುದ್ಧ ಶುರು ಮಾಡಿದಾಗ ರೊಚ್ಚಿಗೆದ್ದು ಮರುದಾಳಿಯ ಆರಂಭಿಸಿ, ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಗುಟುರು ಹಾಕಿತ್ತು. ಆದರೆ ಈಗ ರಷ್ಯಾ ಸೇನೆ ವಿರುದ್ಧ ಗೆಲ್ಲುವ ಮಾತು ಬಿಡಿ, ಉಕ್ರೇನ್ ಸೇನೆಗೆ ಜೀವ ಉಳಿಸಿಕೊಳ್ಳುವುದು ಕೂಡ ಕಷ್ಟವೇ ಆಗುತ್ತಿದೆ. ಹೀಗಾಗಿ ನ್ಯಾಟೋ ದೇಶಗಳು ಉಕ್ರೇನ್ ಗಡಿಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಯುದ್ಧ ವಿಮಾನಗಳನ್ನು ನೇಮಕ ಮಾಡಲು ಚಿಂತನೆ ನಡೆಸಿವೆ. ಈ ಮೂಲಕ ರಷ್ಯಾಗೆ ಲಗಾಮು ಹಾಕಲು ಪ್ಲಾನ್ ಮಾಡುತ್ತಿವೆ.












Click it and Unblock the Notifications