ಪುಟಿನ್ ಮನೆ ಮೇಲೆ ಬಾಂಬ್: ‘ತಪ್ಪು ಮಾಡಿಲ್ಲ’ ಅಂತು ಉಕ್ರೇನ್!
ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಅವರ ಮನೆ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಯುತ್ತಿದ್ಧಂತೆ ಉಕ್ರೇನ್ ಅಲರ್ಟ್ ಆಗಿದೆ. ಉಕ್ರೇನ್ 2 ಡ್ರೋನ್ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್‌ರ ಕೊಲೆಗೆ ದಾಳಿ ಮಾಡಿದೆ ಎಂದು ರಷ್ಯಾ ಸೇನೆ ಆರೋಪಿಸಿತ್ತು. ತಕ್ಷಣ ಎಚ್ಚೆತ್ತ ಉಕ್ರೇನ್ ಈ ದಾಳಿಯಲ್ಲಿ ನನ್ನ ಪಾತ್ರ ಇಲ್ಲ ಎಂದು ಬೇಡಿಕೊಂಡಿದೆ. ಹಾಗಿದ್ರೆ ರಷ್ಯಾ ಈಗ ಸೈಲೆಂಟ್ ಆಗುತ್ತಾ? ಇಲ್ಲ ಅಟ್ಯಾಕ್ ಮಾಡುತ್ತಾ? ತಿಳಿಯೋಣ ಬನ್ನಿ.
ಉಕ್ರೇನ್ ಮತ್ತು ರಷ್ಯಾ ಸೇನೆಯ ಶಕ್ತಿಗೆ ಹೋಲಿಕೆ ಮಾಡಿದರೆ ಇಲ್ಲಿ ರಷ್ಯಾ ತುಂಬಾ ಬಲಶಾಲಿ. ಅದರಲ್ಲೂ ವಿಶ್ವದ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಕೂಡ ರಷ್ಯಾ ಕಂಡರೆ ಭಯಪಡುತ್ತದೆ. ಇಂತಹ ಪರಿಸ್ಥಿಯಲ್ಲಿ ಈ ಉಕ್ರೇನ್ ರಷ್ಯಾ ವಿರುದ್ಧ ಗೆಲ್ಲುವುದು ಅಸಾಧ್ಯ. ಆದ್ರೂ ಅಮೆರಿಕ ಮತ್ತು ನ್ಯಾಟೋ ಸಹಾಯದಿಂದ ದಾಳಿ ಮಾಡುತ್ತಾ ತಿರುಗೇಟು ನೀಡುತ್ತಿತ್ತು. ಆದರೆ ದಿಢೀರ್ ರಷ್ಯಾ ಅಧ್ಯಕ್ಷರ ಮನೆ ಮೇಲೆಯೇ ಡ್ರೋನ್ ಮೂಲಕ ದಾಳಿ ನಡೆದಿರುವುದು ಉಕ್ರೇನ್‌ಗೆ ಭಯ ತಂದಿದೆ. ಅದರಲ್ಲೂ ಈ ದಾಳಿ ನಡೆಸಿರುವುದು ಸ್ವತಃ ಉಕ್ರೇನ್ ಅಂತಾ ರಷ್ಯಾ ಘೋಷಿಸಿಬಿಟ್ಟಿದೆ.

ಪುಟಿನ್ ಶತ್ರುಗಳಿಗೆ ಮಾರಿಹಬ್ಬ ಗ್ಯಾರಂಟಿ?
ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಉಕ್ರೇನ್ ವಿರುದ್ಧ ಯಾವುದಾದರು ಬಲವಾದ ಕಾರಣ ಸಿಗಲಿ ಎಂದು ಕಾಯುತ್ತಿತ್ತು. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕರೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಸನ್ನದ್ಧವಾಗಿತ್ತು ರಷ್ಯಾ ಸೇನೆ. ಈಗ ಸ್ವತಃ ಉಕ್ರೇನ್ ಮಹಾ ಅಪರಾಧ ಮಾಡಿದಂತೆ ತೋರುತ್ತಿದೆ. ಇದೇ ಕಾರಣವನ್ನು ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ.
ಉಕ್ರೇನ್ ಸರ್ಕಾರದಿಂದ ಅಧಿಕೃತ ಹೇಳಿಕೆ
ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿದ್ಧಂತೆ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಉಕ್ರೇನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ. ದಾಳಿಯಲ್ಲಿ ನಮ್ಮ ಪಾತ್ರವಿಲ್ಲ ಅಂತಾ ಸ್ವತಃ ಉಕ್ರೇನ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ದಾಳಿಯಿಂದ ಸಮಸ್ಯೆಗೆ ನಾವು ಪರಿಹಾರ ಹುಡುಕಲು ಆಗುವುದಿಲ್ಲ. ಇದು ನಮಗೆ ತಿಳಿದಿರುವ ಕಾರಣ ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡುವ ಕೃತ್ಯಕ್ಕೆ ಕೈಹಾಕಲ್ಲ. ಇದು ನಮ್ಮ ಕೆಲಸವಲ್ಲ ಎಂದಿದೆ ಉಕ್ರೇನ್.

ನ್ಯಾಟೋ ಪಡೆಗಳಿಗೂ ತಲುಪಿದ ಸಂದೇಶ?
ರಷ್ಯಾ ಅಧ್ಯಕ್ಷರ ಮನೆ ಮೇಲೆ ಬಾಂಬ್ ಬಿದ್ದ ತಕ್ಷಣ ಅಮೆರಿಕ ಅಲರ್ಟ್ ಆಗಿದೆ. ಇತ್ತ ನ್ಯಾಟೋ ಪಡೆಗೂ ಉಕ್ರೇನ್ ಸಂದೇಶ ರವಾನಿಸಿದಂತೆ ಕಾಣುತ್ತಿದೆ. ಪುಟಿನ್ ಮನೆ ಮೇಲೆ ಬಾಂಬ್ ಬಿದ್ದಿರುವ ಕಾರಣಕ್ಕೆ ರಷ್ಯಾ ತನ್ನ ಪರಮಾಣು ಅಸ್ತ್ರ ಬಳಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉಕ್ರೇನ್ ಬೆಚ್ಚಿಬಿದ್ದಿದ್ದು, ಆಪ್ತ ಮಿತ್ರ ನ್ಯಾಟೋ ಒಕ್ಕೂಟ ಮತ್ತು ಅಮೆರಿಕದ ಸಹಾಯ ಬೇಡಬೇಕು ಅಷ್ಟೇ. ಹೀಗಾಗಿ ರಷ್ಯಾ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದ್ದು, ಯಾವ ಏನು ಬೇಕಾದರೂ ಆಗಬಹುದು.
3ನೇ ಮಹಾಯುದ್ಧಕ್ಕೆ ರಣಕಹಳೆ?
ಜಗತ್ತು 3ನೇ ಮಹಾಯುದ್ಧದ ಭಯದಲ್ಲಿ ನಲುಗುವ ಸಂದರ್ಭದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿ ಲಕ್ಷಾಂತರ ಜನರ ಪ್ರಾಣ ತೆಗೆದಿದೆ. ಈ ಸಂದರ್ಭದಲ್ಲಿ ರಷ್ಯಾ ಕೆಲ ದಿನದಿಂದ ಉಕ್ರೇನ್ ವಿರುದ್ಧ ದಾಳಿ ತೀವ್ರಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವಾಗಲೇ, ರಷ್ಯಾ ಅಧ್ಯಕ್ಷ ಪುಟಿನ್‌ರ ಸರ್ಕಾರಿ ನಿವಾಸದ ಮೇಲೆ ನೇರವಾಗಿ ಬಾಂಬ್ ಹಾಕಲಾಗಿದೆ. ಮಾನವ ರಹಿತ ಡ್ರೋನ್ ಸಹಾಯದಿಂದ ಈ ದಾಳಿ ನಡೆದಿದೆ. ಅನುಮಾನಾಸ್ಪದ ರೀತಿಯಲ್ಲಿ 2 ಡ್ರೋನ್ ಪುಟಿನ್ ಮನೆ ಬಳಿ ಎಂಟ್ರಿ ಕೊಟ್ಟಿದ್ದೇ ತಡ ಎರಡೂ ಡ್ರೋನ್‌ಗಳನ್ನ ಉಡಾಯಿಸಿದೆ ರಷ್ಯಾ ಸೇನೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ಅಧ್ಯಕ್ಷರನ್ನ ಬಂಕರ್‌ಗೆ ಶಿಫ್ಟ್ ಮಾಡಿರುವುದು ಜಗತ್ತಿನ ನಿದ್ದೆಗೆಡಿಸಿದೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ಸೇನೆ ಯಾವಾಗ ಬೇಕಾದರೂ ಪ್ರಬಲವಾದ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಉಕ್ರೇನ್ ಕೂಡ ತನ್ನ ಸೇನೆಯನ್ನ ಸನ್ನದ್ಧಗೊಳಿಸಿದೆ. ಪುಟಿನ್ ತಮ್ಮ ಬಂಕರ್ ಮೂಲಕವೇ ಈಗ ಕೆಲಸ ಮಾಡುತ್ತಿದ್ದು, ಶತ್ರು ರಾಷ್ಟ್ರದ ವಿರುದ್ಧ ಯಾವ ಆದೇಶ ಕೊಡುತ್ತಾರೆ ಕಾದು ನೋಡಬೇಕು. ಅಕಸ್ಮಾತ್ ಪರಮಾಣು ದಾಳಿ ನಡೆದರೆ ಅದೇ 3ನೇ ಮಹಾಯುದ್ಧಕ್ಕೆ ರಣಕಹಳೆ ಎಂದು ತಿಳಿಯಬೇಕು.












Click it and Unblock the Notifications