Ukraine War: ಟ್ರಂಪ್ & ಪುಟಿನ್ ಹವಾ, ಉಕ್ರೇನ್ ಪರಿಸ್ಥಿತಿ ಹರೋಹರ!

ಉಕ್ರೇನ್ ಏನೋ ಮಾಡಲು ಹೋಗಿ ಏನೇನೋ ಮಾಡಿಕೊಂಡಿದೆ. ರಷ್ಯಾ ಜೊತೆಗೆ ಮಾತುಕತೆ ಮಾಡಿ 3 ವರ್ಷದ ಹಿಂದೆ ಅಂದ್ರೆ 2022 ರಲ್ಲೇ ಯುದ್ಧ ಶುರುವಾಗುವುದನ್ನ ತಪ್ಪಿಸಬಹುದಿತ್ತು, ಆದರೆ ಉಕ್ರೇನ್ ಅಧ್ಯಕ್ಷ ಮಾಡಿಕೊಂಡ ಒಂದೇ ಒಂದು ಎಡವಟ್ಟು ಇದೀಗ ಪರಿಸ್ಥಿತಿಯನ್ನೇ ನಾಶ ಮಾಡಿ ಹಾಕಿದೆ. ಇಂತಹ ಸಮಯದಲ್ಲಿ ಟ್ರಂಪ್ & ಪುಟಿನ್ ಹವಾ ಜೋರಾಗುತ್ತಿದ್ದು, ಇಬ್ಬರೂ ತಮ್ಮ ಸ್ನೇಹ ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ!

2022ರ ಫ್ರೆಬ್ರವರಿ ತಿಂಗಳಲ್ಲಿ ರಷ್ಯಾ & ಉಕ್ರೇನ್ ಯುದ್ಧ ಶುರುವಾದಾಗ ಜೋ ಬೈಡನ್ & ನ್ಯಾಟೋ ನಾಯಕರ ಮಾತು ಕೇಳಿ ಉಕ್ರೇನ್ ತಪ್ಪು ಮಾಡಿತ್ತು. ಅದು ಈಗ ಉಕ್ರೇನ್ ದೇಶದ ಅರಿವಿಗೆ ಬಂದಂತೆ ಕಾಣುತ್ತಿದೆ. ಯುದ್ಧ ಶುರುವಾದ ಆರಂಭದಲ್ಲಿ ಅಮೆರಿಕ & ಯುರೋಪ್ ಸೇರಿದಂತೆ ನ್ಯಾಟೋ ಒಕ್ಕೂಟದ ದೇಶಗಳ ಲಕ್ಷ ಲಕ್ಷ ಕೋಟಿ ರೂಪಾಯಿ ದಾನ ನೀಡಿದ್ದವು.

Ukraine Faces Critical Choices for Ceasefire Amid Ongoing Conflict

ಆದರೆ ಹೀಗೆ ಎಷ್ಟು ದಿನ ಅಂತಾ ಸಹಾಯ ಮಾಡಿ ದಾನ ಕೊಡಲು ಆಗುತ್ತೆ ಹೇಳಿ? ಇದೀಗ ಅದೇ ಪರಿಸ್ಥಿತಿಯಲ್ಲಿ ಅಮೆರಿಕ & ಯುರೋಪ್ ದೇಶಗಳು ಒದ್ದಾಡುತ್ತಿವೆ. ಅಲ್ಲದೆ ಬೈಡನ್ ಸರ್ಕಾರ ಹೋಗಿ, ಟ್ರಂಪ್ ಸರ್ಕಾರ ಅಮೆರಿಕದಲ್ಲಿ ಆಡಳಿತಕ್ಕೆ ಬಂದಿದೆ. ಹೀಗಾಗಿ ಉಕ್ರೇನ್ ಸೇನೆ & ಉಕ್ರೇನ್ ಸರ್ಕಾರಕ್ಕೆ ಯಾವುದೇ ಸಹಾಯ ಸಿಗದೆ ಒದ್ದಾಟ ಶುರುವಾಗಿದೆ.

ಟ್ರಂಪ್ & ಪುಟಿನ್ ಹವಾ!

ಹೌದು, ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಗಟ್ಟಿಯಾದ ಸ್ನೇಹ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವೇ ಟ್ರಂಪ್ ನಿಂತಿದ್ದಾರೆ. ಇದು ಉಕ್ರೇನ್ ದೇಶಕ್ಕೆ ದೊಡ್ಡ ತಲೆನೋವು ತರಿಸಿದೆ. ಯಾಕಂದ್ರೆ ಈ ರೀತಿ ಟ್ರಂಪ್ ಅವರು ಉಕ್ರೇನ್ ವಿರುದ್ಧ ನಿಂತಿರುವುದು & ರಷ್ಯಾಗೆ ಬೆಂಬಲ ನೀಡುತ್ತಿರುವುದು ಯುದ್ಧದಲ್ಲಿ ಹಿನ್ನಡೆ ತರುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಉಕ್ರೇನ್ ಬಾಯಿ ಮುಚ್ಚಿಕೊಂಡು ಕದನ ವಿರಾಮ ಘೋಷಣೆ ಮಾಡಬೇಕಾದ ಒತ್ತಡಕ್ಕೆ ಕೂಡ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+