Ukraine War: ರಷ್ಯಾಗೆ ಆಘಾತ ನೀಡಿದ ಉಕ್ರೇನ್, ಫೈಟರ್ ಜೆಟ್ ಉಡೀಸ್!

ರಷ್ಯಾ ಸೇನೆ ಎಷ್ಟೇ ಪವರ್ ಫುಲ್ ಆಗಿದ್ದರೂ ಪದೇ ಪದೇ ರಷ್ಯಾಗೆ ಆಘಾತ ನೀಡುತ್ತಿರುವ ಉಕ್ರೇನ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ಹಿಂಸೆ ಮುಂದುವರಿದಿದ್ದು, ಇದರ ಭಾಗವಾಗಿ ಇದೀಗ ರಷ್ಯಾ ಕೂಡ ಫೈಟರ್ ಜೆಟ್ ಸಹಿತ ಹಲವು ರೀತಿಯಲ್ಲಿ ದಾಳಿ ಮುಂದುವರಿಸಿದೆ. ಇಂತಹ ಸಮಯದಲ್ಲೇ ರಷ್ಯಾಗೆ ಆಘಾತ ನೀಡಿದ ಉಕ್ರೇನ್, ಫೈಟರ್ ಜೆಟ್ ಉಡೀಸ್ ಮಾಡಿದೆ!

3ನೇ ಮಹಾಯುದ್ಧ ನಡೆಯಬಾರದು, ಜಗತ್ತಿನಲ್ಲಿ ಇನ್ನೆಂದೂ ಮಹಾಯುದ್ಧದ ಮಾತು ಕೇಳಿ ಬರಬಾರದು ಎಂಬುದೇ ಇಡೀ ಜಗತ್ತಿನ ಆಸೆಯಾಗಿತ್ತು. ಇದೇ ಕಾರಣಕ್ಕೆ ವಿಶ್ವಸಂಸ್ಥೆ ರಚನೆ ಮಾಡಿ ಶಾಂತಿ ಸ್ಥಾಪನೆ ಮಾಡಲಾಗಿದೆ. ಹೀಗಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಸದ್ಯ ಘೋರ ಯುದ್ಧಗಳು ಆರಂಭ ಆಗಿವೆ. ಅದ್ರಲ್ಲೂ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ತಿಕ್ಕಾಟವು 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತೆ ಕಾಣುತ್ತಿದೆ. ಇಂತಹ ಸಮಯದಲ್ಲೇ ಉಕ್ರೇನ್ ಇದೀಗ ರಷ್ಯಾಗೆ ಆಘಾತ ನೀಡಿದೆ!

Ukraine Destroys Russian Fighter Jet Using Sea Drone Technology

ಉಕ್ರೇನ್ ತಿಕ್ಕಾಟ ಮತ್ತಷ್ಟು ಜೋರಾಯ್ತಾ?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಶುರುಮಾಡಿ ಈಗಾಗಲೇ 3 ವರ್ಷ ಮುಗಿದು, 4ನೇ ವರ್ಷದಲ್ಲಿ ಕಾಲು ಭಾಗ ಇನ್ನೇನು ಕಂಪ್ಲೀಟ್ ಆಗಲಿದೆ. ರಷ್ಯಾ ಸೇನೆಯು ಸಾಕಷ್ಟು ಬಲಿಷ್ಠವಾಗಿದ್ದು, ಉಕ್ರೇನ್‌ಗೆ ಪ್ರತಿದಿನವೂ ಒಂದೊಂದು ಆಘಾತದ ಸರಮಾಲೆ ನೀಡುತ್ತಿದೆ. ಹೀಗೆ ರಷ್ಯಾ ಸೇನೆ ಕೊಡುತ್ತಿರುವ ಏಟಿಗೆ ಉಕ್ರೇನ್ ಕೂಡ ಕಂಗಾಲಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದರೂ ದಿಢೀರ್ ರಷ್ಯಾ ಸೇನೆಯ ಡ್ರೋನ್‌ಗೆ ಆಘಾತ ನೀಡಿದೆ ಉಕ್ರೇನ್. ಈ ವಿಚಾರ ರಷ್ಯಾಗೆ ಇನ್ನಷ್ಟು ಕೋಪ ತರಿಸಿದ್ದು, ತಿಕ್ಕಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?

ಅಮೆರಿಕದ ಹೊಸ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಈ ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಅದು ಹುಸಿಯಾಗುತ್ತಿದ್ದು, ರಷ್ಯಾ & ಉಕ್ರೇನ್ ನಡುವಿನ ಬಡಿದಾಟ ಇನ್ನಷ್ಟು ಹೆಚ್ಚಾಗುತ್ತಿದೆ. ರಷ್ಯಾ ಕೂಡ ಈ ಬಗ್ಗೆ ಸ್ಪಷ್ಟ ನಿಲುವು ತಿಳಿಸುತ್ತಿಲ್ಲ, ಇನ್ನೊಂದು ಕಡೆ ಉಕ್ರೇನ್ ಕೂಡ ಯುದ್ಧ ನಿಲ್ಲಿಸುವ ಬಗ್ಗೆ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿಯೇ ಈ ಯುದ್ಧ ಈಗ ಕಗ್ಗಂಟಾಗಿ ಉಳಿದಿದೆ. ಆದರೆ ಟ್ರಂಪ್ ಸರ್ಕಾರದ ಅಧಿಕಾರಿಗಳು ಮಾತ್ರ ಇದೀಗ ತಮ್ಮ ಪ್ರಯತ್ನ ಮುಂದುವರಿಸಿದ್ದು, ಯುದ್ಧ ನಿಲ್ಲಿಸಲು ಬೇಕಾದ ಸಭೆಗಳನ್ನ ನಡೆಸುತ್ತಿದ್ದಾರೆ. ಆದರೆ ಇದೆಲ್ಲಾ ಫಲ ನೀಡುತ್ತಿಲ್ಲ ಎಂಬುದೇ ದೊಡ್ಡ ದುರಂತ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+