ಉಕ್ರೇನ್ ಆಹಾರ ಸರಬರಾಜು ಮಾರ್ಗಕ್ಕೆ ಪೆಟ್ಟು, ಅದಿರು ರಫ್ತಿಗೂ ಅಡ್ಡಿ ಮಾಡಿದ ರಷ್ಯಾ ದಾಳಿ | Ukraine And Russia
ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮಾಡುತ್ತಾ ಉಕ್ರೇನ್ ದೇಶದ ಆಹಾರ ಸರಪಳಿಗೆ ದೊಡ್ಡ ಪೆಟ್ಟು ಕೊಡುತ್ತಿದೆ. ಇದರ ಜೊತೆಗೆ ಅದಿರು ರಫ್ತು ಕೂಡ ಬಂದ್ ಆಗುವಂತೆ ಮಾಡಿದ್ದು, ಬಂದರು ಪ್ರದೇಶಗಳ ಮೇಲೆ ನಡೆದಿರುವ ರಷ್ಯಾ ದಾಳಿಯಿಂದ ಇದೀಗ ಉಕ್ರೇನ್ ಪರದಾಡುತ್ತಿದೆ. ಹೀಗೆ ಕಳೆದ 4 ವರ್ಷಗಳಿಂದ ನಿರಂತರವಾಗಿ ನಡೆದ ಯುದ್ಧ ಘೋರ ವಾತಾವರಣ ಸೃಷ್ಟಿಸಿದೆ.
ಮತ್ತೊಂದು ಕಡೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುವ ಭರದಲ್ಲಿ ತನ್ನ ದೇಶದ ಸಂಪತ್ತು ಮಾರುತ್ತಿದೆ ಉಕ್ರೇನ್. ಅಪಾರ ಪ್ರಮಾಣದ ಖನಿಜ ಸಂಪತ್ತು ಉಕ್ರೇನ್ ದೇಶದಲ್ಲಿ ಇದ್ದು, ಅದನ್ನೆಲ್ಲಾ ಕಳೆದ 4 ವರ್ಷಗಳಿಂದಲೂ ತುಸು ಹೆಚ್ಚಾಗಿ ಮಾರಾಟ ಮಾಡುತ್ತಾ ಬರುತ್ತಿದೆ. ಇಂತಹ ಸಮಯದಲ್ಲಿ ಉಕ್ರೇನ್ ಬಂದರು ಪ್ರದೇಶಗಳನ್ನು ಪುಡಿ ಪುಡಿ ಮಾಡುತ್ತಿದೆ ರಷ್ಯಾ.

ರಷ್ಯಾ & ಉಕ್ರೇನ್ ಮಧ್ಯೆ ಯುದ್ಧದ ಬೆಂಕಿ ಆರುವ ಬದಲಾಗಿ, ಇನ್ನಷ್ಟು ಜಾಗಕ್ಕೆ ಹಬ್ಬುತ್ತಾ ಭಯ ಸೃಷ್ಟಿ ಮಾಡಿದೆ. ರಷ್ಯಾ & ಉಕ್ರೇನ್ ಯುದ್ಧಕ್ಕೆ ಇನ್ನೇನು 4 ವರ್ಷ ತುಂಬಿ ಹೋಗಲಿದೆ. ಹೀಗಿದ್ದರೂ ಈ ಯುದ್ಧ ನಿಲ್ಲದೆ ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡುತ್ತಾ ಇದ್ದಾರೆ. ಮತ್ತೊಂದೆಡೆ ದಿಢೀರ್ ರಷ್ಯಾ ನಡೆಸಿರುವ ಡ್ರೋನ್ ದಾಳಿಯಲ್ಲಿ ಜನರು ಮೃತಪಟ್ಟಿರುವ ಆರೋಪವು ಕೇಳಿ ಬಂದಿದೆ. ಅಷ್ಟೇ ಅಲ್ಲ, ಉಕ್ರೇನ್‌ನ ಬಂದರು ಪ್ರದೇಶಗಳು ನಾಶವಾಗಿ ಹೋಗಿವೆಯಂತೆ.
ಚಳಿಯಲ್ಲಿ ಆಹಾರಕ್ಕಾಗಿ ಪ್ರಜೆಗಳ ಪರದಾಟ
ರಷ್ಯಾ ದಾಳಿಯ ಪರಿಣಾಮ ಈಗಾಗಲೇ ಉಕ್ರೇನ್ ದೇಶದ ವಿದ್ಯುತ್ ಘಟಕಗಳು ಹಾಳಾಗಿ ಹೋಗಿವೆ. ಇದರಿಂದ ಚಳಿಗಾಲದ ಸಮಯದಲ್ಲಿ ಏನು ಮಾಡಬೇಕು ಎಂಬುದೇ ಪ್ರಜೆಗಳಿಗೆ ತಿಳಿಯುತ್ತಿಲ್ಲ. ಅತ್ತ ಬೇರೆ ಜಾಗಕ್ಕೆ ಹೋಗಲು ಅವಕಾಶ ಇಲ್ಲ, ಮತ್ತೊಂದು ಕಡೆ ತಾವು ಇರುವ ಜಾಗದಲ್ಲಿ ಕೂಡ ಅವರಿಗೆ ನೆಮ್ಮದಿ ಇಲ್ಲ. ಹೀಗಿದ್ದಾಗ ಅನ್ನ & ಆಹಾರಕ್ಕೆ ಕೂಡ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ. ಹೀಗಿದ್ದರೂ ಅದನ್ನು ರಷ್ಯಾ ಸೇನೆಯು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಅಮೆರಿಕ ಸರ್ಕಾರ ಕ್ರಮ ಕೈಗೊಳ್ಳುತ್ತಾ?
4 ವರ್ಷಗಳಿಂದ ಮುಂದುವರಿದಿರುವ ಯುದ್ಧವು ಬಹುತೇಕ ಉಕ್ರೇನ್‌ನಲ್ಲಿ ಭಯಾನಕ ವಾತಾವರಣವನ್ನ ಸೃಷ್ಟಿ ಮಾಡಿದೆ. ಹಾನಿಗೆ ಒಳಗಾದ ಬಂದರು ಹಾಗೂ ರಸ್ತೆ ಮೂಲಸೌಕರ್ಯ ಸರಿ ಮಾಡುವುದಕ್ಕೂ ಉಕ್ರೇನ್ ಸರ್ಕಾರದ ಬಳಿ ಹಣವೇ ಇಲ್ಲ. ಹೀಗಾಗಿ, ರಫ್ತು ಆದಾಯ ಕುಸಿತ & ಪ್ರಮುಖ ಮೂಲಸೌಕರ್ಯ ನಾಶದಿಂದ ನರಳುತ್ತಿದೆ ಉಕ್ರೇನ್. ಇನ್ನೊಂದು ಕಡೆಯಲ್ಲಿ ಉಕ್ರೇನ್ ಪ್ರಜೆಗಳಿಗೆ ಕೂಡ ನೆಮ್ಮದಿಯಾಗಿ ನಿದ್ದೆ ಕೊಡುತ್ತಿಲ್ಲ ಯುದ್ಧ, ಜನರ ನೆಮ್ಮದಿ ಕಿತ್ತುಕೊಂಡು ನರಳುವಂತೆ ಮಾಡಿದೆ ಈ ತಿಕ್ಕಾಟ. ಇದೇ ಕಾರಣಕ್ಕೆ ಈಗ ಸೂಕ್ತ ಕ್ರಮ ಕೈಗೊಳ್ಳುವಂತೆ ಯುರೋಪ್ ದೇಶಗಳು ಅಮೆರಿಕ ಮೇಲೆ ಒತ್ತಡವನ್ನು ಕೂಡ ಹೇರುತ್ತಿವೆ.












Click it and Unblock the Notifications