ಯುನೈಟೆಡ್ ಕಿಂಗ್‌ಡಮ್ ವಿಶ್ವಾಸಮತದಲ್ಲಿ ಬೋರಿಸ್ ಜಾನ್ಸನ್ ದಿಗ್ವಿಜಯ

ಲಂಡನ್, ಜೂನ್ 7: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ನಡೆದ ವಿಶ್ವಾಸಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 211 ಟೋರಿ ಸಂಸದರು ಜಾನ್ಸನ್ ಪರವಾಗಿ ಮತ ಚಲಾಯಿಸಿದರೆ, 148 ಸಂಸದರು ವಿರುದ್ಧ ಮತ ಹಾಕಿದ್ದಾರೆ. 1922ರ ಸಮಿತಿಯ ಅಧ್ಯಕ್ಷರಾದ ಸರ್ ಗ್ರಹಾಂ ಬ್ರಾಡಿ ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ವೇಳೆ ಚುನಾವಣಾ ಫಲಿತಾಂಶವನ್ನು ಅಂತಿಮವಾಗಿ ಪ್ರಕಟಿಸಿದ್ದಾರೆ.

ಪ್ರಸ್ತುತ ಕನ್ಸರ್ವೇಟಿವ್ ಪಕ್ಷದ ನಿಯಮಗಳ ಪ್ರಕಾರ, ಜಾನ್ಸನ್ ಈಗ ಕನಿಷ್ಠ ಒಂದು ವರ್ಷದವರೆಗೆ ಬ್ಯಾಕ್‌ಬೆಂಚ್ ಸವಾಲಿನಿಂದ ಸುರಕ್ಷಿತವಾಗಿದ್ದಾರೆ. ವಿಶ್ವಾಸ ಮತ ಗೆಲ್ಲಲು ಬ್ರಿಟನ್ ಪ್ರಧಾನಿಗೆ 180 ಸಂಸದರ ಬೆಂಬಲದ ಅಗತ್ಯವಿತ್ತು. ಈ ಹಿನ್ನೆಲೆ ಗೌಪ್ಯ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು.

ಬೋರಿಸ್ ಜಾನ್ಸನ್ ವಿರುದ್ಧ ಸರ್ ಬ್ರಾಡಿ ಅವರಿಗೆ 54 ಅವಿಶ್ವಾಸ ಪತ್ರಗಳನ್ನು ನೀಡಿಲಾಗಿತ್ತು. ಇದರಿಂದಾಗಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಮತದಾನದ ನಂತರದಲ್ಲಿ, "ಇದು ಅತ್ಯಂತ ಉತ್ತಮವಾದ, ಧನಾತ್ಮಕ, ನಿರ್ಣಾಯಕ ಫಲಿತಾಂಶವಾಗಿದೆ ಎಂದು ನಾನು ಭಾವಿಸುತ್ತೇನೆ, ಇದು ನಮ್ಮನ್ನು ಒಗ್ಗೂಡಿಸಲು ಅನುವು ಮಾಡಿಕೊಡುತ್ತದೆ," ಎಂದು ನಜಾನ್ಸನ್ ಹೇಳಿದರು.

UK PM Boris Johnson Victory in Vote of Confidence by 211 to 148

ಬಂಡಾಯದ ಬಾವುಟ ಹಾರಿಸಿದ್ದು ಯಾರು?: ಮತದಾನದ ಮೊದಲು ಡೌನಿಂಗ್ ಸ್ಟ್ರೀಟ್ ನೀಡಿರುವ ಹೇಳಿಕೆಯಲ್ಲಿ, "ಇಂದು ರಾತ್ರಿ ತಿಂಗಳುಗಳಿಂದ ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳನ್ನು ಕೊನೆಗೊಳಿಸಲು ಒಂದು ಅವಕಾಶ ಸಿಕ್ಕಿದೆ. ಜನರ ಆದ್ಯತೆಗಳನ್ನು ತಲುಪಿಸುವ ಮೂಲಕ ಸರ್ಕಾರವು ಒಂದು ಗೆರೆಯನ್ನು ದಾಟಿಕೊಂಡು ಮುಂದೆ ಸಾಗುವುದಕ್ಕೆ ಅನುವು ಮಾಡಿಕೊಡುತ್ತದೆ," ಎಂದು ಉಲ್ಲೇಖಿಸಲಾಗಿತ್ತು. ಗಮನಾರ್ಹವಾಗಿ, ಯುಕೆ ವಿದೇಶಾಂಗ ಮತ್ತು ಆರೋಗ್ಯ ಕಾರ್ಯದರ್ಶಿ ಜೆರೆಮಿ ಹಂಟ್, ಹಿಂಬಾಗಿಲಿನ ಬಂಡಾಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ರಹಸ್ಯ ಮತದಾನದಲ್ಲಿ ಬದಲಾವಣೆಗೆ ಮತ ಹಾಕುವಂತೆ ಪಕ್ಷಕ್ಕೆ ಕರೆ ನೀಡಿದ್ದರು ಎಂದು ತಿಳಿದು ಬಂದಿದೆ.

2020 ಮತ್ತು 2021ರ ಅವಧಿಯಲ್ಲಿ ಕೋವಿಡ್-19 ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಡೌನಿಂಗ್ ಸ್ಟ್ರೀಟ್‌ನಲ್ಲಿ ಪಕ್ಷಗಳನ್ನು ಒಳಗೊಂಡ 'ಪಾರ್ಟಿಗೇಟ್' ಹಗರಣದ ನಂತರ ಜಾನ್ಸನ್‌ರ ಜನಪ್ರಿಯತೆ ಕುಸಿದಿತ್ತು. ಈ ವಿವಾದದ ಕಾರಣದಿಂದ ಯುಕೆ ಪ್ರಧಾನಮಂತ್ರಿ ಕೂಡ ತಮ್ಮದೇ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಗರಣ ಬೆಳಕಿಗೆ ಬಂದ ನಂತರ ಮತ್ತು ಅದಕ್ಕೆ ದಂಡವನ್ನು ಪಾವತಿಸಲು ಜಾನ್ಸನ್ ಅವರನ್ನು ಕೇಳಲಾಯಿತು. ಪ್ರತಿಪಕ್ಷಗಳು ಮತ್ತು ಅವರ ಪಕ್ಷದ ಸಂಸದರು ರಾಜೀನಾಮೆಗೂ ಒತ್ತಾಯಿಸಿದ್ದರು.

UK PM Boris Johnson Victory in Vote of Confidence by 211 to 148

ಕಾನೂನು ಉಲ್ಲಂಘಿಸಿದ ಮೊದಲ ಪ್ರಧಾನಿ: ಇದೇ 2022 ವರ್ಷದ ಏಪ್ರಿಲ್‌ನಲ್ಲಿ, ಬೋರಿಸ್ ಜಾನ್ಸನ್ ಸಂಪೂರ್ಣ ಕ್ಷಮೆಯಾಚಿಸುವುದೂ ಅಲ್ಲದೇ ದಂಡವನ್ನು ಸಹ ಪಾವತಿಸಿದ್ದರು. ಇದರೊಂದಿಗೆ, ಅವರು ಕಾನೂನನ್ನು ಉಲ್ಲಂಘಿಸಿದ ಮೊದಲ ಯುನೈಟೆಡ್ ಕಿಂಗ್ ಡಮ್ ಪ್ರಧಾನಮಂತ್ರಿ ಎನಿಸಿಕೊಂಡರು. ಇತ್ತೀಚೆಗೆ, ಶುಕ್ರವಾರದಂದು ರಾಣಿ ಎಲಿಜಬೆತ್ ಪ್ಲಾಟಿನಂ ಜುಬಿಲಿ ಅಂಗವಾಗಿ ಕೃತಜ್ಞತಾ ಸೇವೆಗಾಗಿ ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ಗೆ ಆಗಮಿಸಿದ ಬೋರಿಸ್ ಜಾನ್ಸನ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+