ಲಂಡನ್ ಕೋರ್ಟ್ ನಲ್ಲಿ ವಿಜಯ್ ಮಲ್ಯಗೆ ಮುಖಭಂಗ!

ಲಂಡನ್, ಜೂನ್ 16: ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ರೂ.ಗೂ ಅಧಿಕ ಸಾಲ ಮಾಡಿ ಲಂಡನ್ನಿಗೆ ಪರಾರಿಯಾಗಿರುವ ಮಧ್ಯ ದೊರೆ ವಿಜಯ್ ಮಲ್ಯರನ್ನು ಲಂಡನ್ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬರೋಬ್ಬರಿ 200000 ಪೌಂಡ್ ಹಣವನ್ನು ಭಾರತೀಯ ಬ್ಯಾಂಕುಗಳಿಗೆ ನೀಡುವಂತೆ ಅದು ಮಲ್ಯಗೆ ಆದೇಶಿಸಿದೆ.

ಆಸ್ತಿ ಮುಟ್ಟುಗೋಲು ಆದೇಶ ರದ್ದು ಮಾಡುವಂತೆ ಮಲ್ಯ ಪರ ವಕೀಲರು ಮಾಡಿಕೊಂಡ ಮನವಿಯನ್ನೂ ನ್ಯಾಯಾಧೀಶ ಆಂಡ್ರೂ ಹೆನ್ಶಾ ಈ ಮೊದಲೇ ವಜಾಗೊಳಿಸಿದ್ದರು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದರು.

ಬ್ಯಾಂಕುಗಳ ಒಕ್ಕೂಟದ ವಾದವನ್ನು ಎತ್ತಿ ಹಿಡಿದಿದ್ದ ಲಂಡನ್‌ ನ್ಯಾಯಾಲಯವು ,ಭಾರತದ ಕೋರ್ಟುಗಳು ನೀಡಿರುವ ತೀರ್ಪು ಜಾರಿಗೊಳಿಸಿ, ಮಲ್ಯ ಅವರಿಂದ ಸಾಲದ ಮೊತ್ತ ಪಡೆಯಬಹುದು ಎಂದು ನ್ಯಾಯಾಧೀಶರು ಬ್ಯಾಂಕ್‌ಗಳಿಗೆ ಸೂಚಿಸಿದ್ದರು.

UK High Court orders Vijay Mallya to pay 200,000 pounds to Indian banks

ಭಾರತದಲ್ಲಿ ಬ್ಯಾಂಕುಗಳಿಂದ 9 ಸಾವಿರ ಕೋಟಿಗೂ ಅಧಿಕ ಸಾಲ ಪಡೆದು, ಅದನ್ನು ಮರುಪಾವತಿಸದೆ, ಲಂಡನ್ನಿಗೆ ಪರಾರಿಯಾಗಿ ಹಾಯಾಗಿದ್ದ ವಿಜಯ ಮಲ್ಯರನ್ನು ಲಂಡನ್ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದನ್ನು ಭಾರತ ಸ್ವಾಗತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+