ನೈಸರ್ಗಿಕ ಅನಿಲ ಪೂರೈಕೆ 'ಟಾಪಿ' ಯೋಜನೆ, ಏನಿದರ ಮಹತ್ವ?
ಬೆಂಗಳೂರು, ಡಿ.15: ತುರ್ಕ್‌ಮೆನಿಸ್ತಾನ ಪುರಾತನ ನಗರದಲ್ಲಿ ಇತ್ತೀಚೆಗೆ ಹೊಚ್ಚ ಹೊಸ ಒಪ್ಪಂದಕ್ಕೆ ನಾಲ್ಕು ರಾಷ್ಟ್ರಗಳು ಸಹಿ ಹಾಕಿವೆ. ಇಂಧನ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಲ್ಲ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ಮಹತ್ವಾಕಾಂಕ್ಷೆಯ 'ಟಾಪಿ' ಯೋಜನೆಗೆ ಏಕೆ ಇಷ್ಟು ಮಹತ್ವ? ಮುಂದೆ ಓದಿ..
ಭಾರತವು ಎದುರಿಸುತ್ತಿರುವ ತೀವ್ರ ಇಂಧನ ಕೊರತೆಯನ್ನು ನಿವಾರಿಸುವಲ್ಲಿ ಟಾಪಿ ಯೋಜನೆಯು ಮಹತ್ವದ ಮೈಲುಗಲ್ಲಾಗುವ ನಿರೀಕ್ಷೆ ಇದೆ. ತುರ್ಕ್‌ಮೆನಿಸ್ತಾನ-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ ನಡುವಿನ ಈ ನೈಸರ್ಗಿಕ ಅನಿಲ ಹಂಚಿಕೆ ಒಪ್ಪಂದಕ್ಕೆ ಟಾಪಿ ಎಂದು ಹೆಸರಿಡಲಾಗಿದೆ.[ಕೊಳವೆ ಮೂಲಕ ಬರಲಿದೆ ಅಡುಗೆ ಅನಿಲ !]
ನಾಲ್ಕು ರಾಷ್ಟ್ರಗಳ ಹೆಸರಿನ ಮೊದಲ ಅಕ್ಷರವನ್ನು ಬಳಸಿ TAPI ಎಂದು ನಾಮಕರಣ ಮಾಡಲಾಗಿದೆ. ತುರ್ಕ್‌ಮೆನಿಸ್ತಾನದಿಂದ ಅಫ್ಘಾನಿಸ್ತಾನ- ಪಾಕಿಸ್ತಾನ ಮಾರ್ಗವಾಗಿ ಭಾರತಕ್ಕೆ ನೈಸರ್ಗಿಕ ಅನಿಲವನ್ನು ಪೈಪ್‌ಲೈನ್ ಮೂಲಕ ಪೂರೈಕೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ.
ಈ ಯೋಜನೆ ಒಮ್ಮೆ ಸಂಪೂರ್ಣವಾಗಿ ಕಾರ್ಯಗತವಾದರೆ ಭಾರತ ಹಾಗೂ ಪಾಕಿಸ್ತಾನಕ್ಕೆ ಪ್ರತಿದಿನ ತಲಾ 38 ದಶಲಕ್ಷ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ನೈಸರ್ಗಿಕ ಅನಿಲ ದೊರೆಯಲಿದೆ. ಇಂಧನ ದರ ಏರುಪೇರು ನಿಯಂತ್ರಿಸಬಹುದು. 14 ದಶಲಕ್ಷ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ನೈಸರ್ಗಿಕ ಅನಿಲ ಅಫ್ಘಾನಿಸ್ತಾನಕ್ಕೆ ಪೂರೈಕೆಯಾಗಲಿದೆ.

ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಪ್ರಮುಖರು
ತುರ್ಕ್‌ಮೆನಿಸ್ತಾನ ಪುರಾತನ ನಗರ ಮೇರಿ(Mary)ಯಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಭಾರತದ ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಹಾಗೂ ತುರ್ಕ್ ಮೆನಿಸ್ತಾನ ಅಧ್ಯಕ್ಷ ಗುರ್ಬಾಂಗುಲಿ ಬೆರ್ಡಿಮುಹಮದೆವ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಅನಿಲ ಕೊಳವೆಗಳ ವೆಲ್ಡಿಂಗ್ ಪ್ರಕ್ರಿಯೆಗೆ ಚಾಲನೆ
ಸುಮಾರು 1800 ಕಿ.ಮೀ. ಉದ್ದದ 'ಟಾಪಿ' ಅನಿಲ ಪೈಪ್‌ಲೈನ್ ಯೋಜನೆಗೆ ಸಹಿ ಹಾಕಿದ ನಾಲ್ಕು ರಾಷ್ಟ್ರದ ಮುಖ್ಯಸ್ಥರು ನಂತರ ಎಲೆ ಕ್ಟ್ರಾನಿಕ್ ಬಟನ್ ಗಳನ್ನು ಒತ್ತುವ ಮೂಲಕ ಅನಿಲ ಕೊಳವೆಗಳ ವೆಲ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು.

ಕೊಳವೆಯೊಂದರ ಮೇಲೆ ತಮ್ಮ ಹಸ್ತಾಕ್ಷರ
ಕೊಳವೆಯೊಂದರ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಬರೆದರು. ಬಳಿಕ ನಾಲ್ವರು ತಮ್ಮ ರಾಷ್ಟ್ರದ ಬಾವುಟದ ಕೆಳಗೆ ಸಹಿಮಾಡಿದ ದಾಖಲೆಪತ್ರವೊಂದನ್ನು ಕ್ಯಾಪ್ಸೂಲ್‌ನಲ್ಲಿಟ್ಟು ಅದನ್ನು ನೆಲದಡಿಯಲ್ಲಿ ಇರಿಸಲಾಯಿತು.

2019ರ ಅಂತ್ಯಕ್ಕೆ ಯೋಜನೆ ಕಾರ್ಯಗತ
ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಮಾತನಾಡಿದ ತುರ್ಕ್‌ಮೆನಿಸ್ತಾನ ಅಧ್ಯಕ್ಷ ಗುರ್ಬಾಂಗುಲಿ ಬೆರ್ದಿಮುಹಮೆದೊವ್, 2019ರ ಡಿಸೆಂಬರ್‌ನೊಳಗೆ ಯೋಜನೆಯು ಕಾರ್ಯಗತಗೊಳ್ಳುವ ಭರವಸೆ ಇದೆ ಎಂದರು.

ಅಗಾಧ ಪ್ರಮಾಣದಲ್ಲಿ ನೈಸರ್ಗಿಕ ಅನಿಲ
ಅವಶ್ಯಕತೆಯಿರುವ ಸ್ಥಳಗಳಿಗೆ ಅಗಾಧ ಪ್ರಮಾಣದಲ್ಲಿ ನೈಸರ್ಗಿಕ ಅನಿಲವನ್ನು ಪೂರೈಸಲು ತುರ್ಕ್‌ಮೆನಿಸ್ತಾನವು ಸಮರ್ಥವಾಗಿದೆ ಎಂಬುದನ್ನು ಈ ಪೈಪ್‌ಲೈನ್ ಯೋಜನೆ ಸಾಬೀತುಪಡಿಸಲಿದೆ ಎಂದು ಗುರ್ಬಾಂಗುಲಿ ಬೆರ್ದಿಮುಹಮೆದೊವ್ ಹೇಳಿದರು.

ವರ್ಷಗಳ ಅವಧಿಗೆ ಸಾಗಿಸುವ ಸಾಮರ್ಥ್ಯ
ಟಾಪಿ ಪೈಪ್‌ಲೈನ್ ದಿನಕ್ಕೆ 90 (ಎಂಎಂಎಸ್‌ಸಿಎಂಡಿ)ಗಳಷ್ಟು ನೈಸರ್ಗಿಕ ಅನಿಲವನ್ನು 30 ವರ್ಷಗಳ ಅವಧಿಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಯಾವ ರಾಷ್ಟ್ರಕ್ಕೆ ಎಷ್ಟು ಪೂರೈಕೆಯಾಗಲಿದೆ
ಭಾರತ ಹಾಗೂ ಪಾಕಿಸ್ತಾನಕ್ಕೆ ಪ್ರತಿದಿನ ತಲಾ 38 ಮತ್ತು ಉಳಿದ 14 ದಶಲಕ್ಷ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲ ಅಫ್ಘಾನಿಸ್ತಾನಕ್ಕೆ ಪೂರೈಕೆಯಾಗಲಿದೆ.

ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ ಮಾತನಾಡಿ
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕಾರ್ಯದಕ್ಷತೆಯನ್ನು ಹೊಗಳಿದರು.
ಈ ಯೋಜನೆಯು ತಾಂತ್ರಿಕವಾಗಿ ಹಾಗೂ ವಾಣಿಜ್ಯಾತ್ಮಕವಾಗಿ ಯಶಸ್ವಿಯಾಗುವಂತೆ ಮಾಡಲು ನಾಲ್ಕೂ ದೇಶಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಂಧನವು ಸಾಧ್ಯವಿರುವಷ್ಟು ಕಡಿಮೆ ಬೆಲೆಯಲ್ಲಿ ವಿಶಾಲವಾದ ಜನಸಮೂಹಕ್ಕೆ ದೊರೆಯುವಂತೆ ಮಾಡುವ ಅಗತ್ಯವಿದೆ ಎಂದರು.












Click it and Unblock the Notifications