ಪಾಕ್ ಸೈನಿಕರಿಗೆ ಯುದ್ಧ ತರಬೇತಿ ನೀಡಿದ್ದ ಟರ್ಕಿ: ಭಾರತಕ್ಕೆ ಭಾರೀ ಮೋಸ!
Turkey: ಭಾರತದ ಮಿತ್ರರಾಷ್ಟ್ರ ಎಂದು ಹೇಳಿಕೊಳ್ಳುತ್ತಲ್ಲೇ ಟರ್ಕಿ ದ್ರೋಹ ಬಗೆದಿದೆ. ಅದರ ಒಂದೊಂದು ದ್ರೋಹವೂ ಈಗ ಬಟಾಬಯಲಾಗಿದೆ. ಅಗತ್ಯ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಭಾರತದಿಂದ ಸಹಾಯ ಪಡೆದುಕೊಂಡಿದ್ದ ಟರ್ಕಿ ದೇಶವು ಭಾರತದ ಬೆನ್ನಿಗೆ ಚೂರು ಹಾಕುವ ಕೆಲಸಗಳನ್ನು ಮಾಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಟರ್ಕಿ ದೇಶದ ಇಬ್ಬರು ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನುವ ಗಂಭೀರ ಅಂಶ ಇದೀಗ ಬೆಳಕಿಗೆ ಬಂದಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಸಂಘರ್ಷದಲ್ಲಿ ಟರ್ಕಿಯು ಪರೋಕ್ಷವಾಗಿ ಪಾಕ್‌ಗೆ ಸಹಾಯ ಮಾಡಿದೆ. ಮೊದ ಮೊದಲು ನಾವು ಯಾವುದೇ ಸಹಾಯವನ್ನು ಮಾಡಿಲ್ಲ ಎಂದು ನಾಟಕವಾಡಿದ್ದ ಟರ್ಕಿ, ನಂತರ ಎಷ್ಟೆಲ್ಲಾ ಪಾಕ್‌ಗೆ ಸಹಾಯ ಮಾಡಿದೆ ಎನ್ನುವ ಒಂದೊಂದೇ ವಿಷಯ ಇದೀಗ ಬಹಿರಂಗವಾಗುತ್ತಿದೆ. ಪಾಕ್ ಸಿಡಿಸಿರುವ ಬಹುಪಾಲು ಡ್ರೋನ್ ಟರ್ಕಿ ದೇಶದ್ದೇ ಬರೋಬ್ಬರಿ 350 ಡ್ರೋನ್ ಸಹಾಯ ಮಾಡಿರುವುದು ಬಹಿರಂಗವಾಗಿದೆ. ನಾವು ಪಾಕಿಸ್ತಾನ ಸಿಡಿಸಿದ ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಅಂತ ಭಾರತೀಯ ಸೇನೆ ಖಚಿತಪಡಿಸಿತ್ತು. ಈ ವಿಷಯ ಕೇಳಿದಾಗಲೇ ಭಾರತೀಯರು ಆಕ್ರೋಶಗೊಂಡಿದ್ದರು. ಇದೀಗ ಟರ್ಕಿಯ ಇನ್ನಷ್ಟು ಬಣ್ಣ ಬಟಾಬಯಲಾಗಿದೆ.

ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗು ತಾಣಗಳನ್ನು ಹೊಡೆದುರುಳಿಸಿತ್ತು. ಆಪರೇಷನ್ ಸಿಂಧೂರ ಬೃಹತ್ ಕಾರ್ಯಾಚರಣೆಯನ್ನೇ ಭಾರತ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಟರ್ಕಿಯ ಇಬ್ಬರು ಮಿಲಿಟರಿ (ಡ್ರೋನ್ ಆಪರೇಟರ್) ಮೃತಪಟ್ಟಿದ್ದಾರೆ ಎಂದು India Today tv ವರದಿ ಮಾಡಿದೆ. ಹೌದು ಟರ್ಕಿ ದೇಶವು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ನೀಡಿದ್ದು ಮಾತ್ರವಲ್ಲ ಸಿಬ್ಬಂದಿಯನ್ನೂ ನೀಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತವೂ ಟರ್ಕಿ ದೇಶಕ್ಕೆ ಕೋವಿಡ್ ಹಾಗೂ ಭೂಕಂಪನದ ಸಮಯದಲ್ಲಿ ಅಣ್ಣನಂತೆ ಕೈಹಿಡಿದು ನಡೆಸಿತ್ತು. ಆದರೆ, ಸಹೋದರ ರಾಷ್ಟ್ರದಂತಿದ್ದ ಭಾರತಕ್ಕೆ ಟರ್ಕಿ ದ್ರೋಹವೆಸಗಿದೆ.
ಇನ್ನು ಟರ್ಕಿಯ ಸಲಹೆಗಾರರು ಆಪರೇಷನ್ ಸಿಂಧೂರ ನಂತರ ಭಾರತದ ಮೇಲೆ ಡ್ರೋನ್ ದಾಳಿ ನಡೆಸಲು ವ್ಯವಸ್ಥಿತವಾಗಿ ಪಾಕಿಸ್ತಾನ್‌ನ ಸೇನಾ ಅಧಿಕಾರಿಗಳೊಂದಿಗಿದ್ದರು ಅಥವಾ ಸಂವಹನ ನಡೆಸಿದ್ದರು ಎಂದು ಹೇಳಲಾಗಿದೆ. ಭಾರತದ ಯುದ್ಧ ಶಸ್ತ್ರಾಸ್ತ್ರ ಸರಬರಾಜು ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪಾಕ್ ಮುಂದಾಗಿತ್ತು. ಇದಕ್ಕೆ ಟರ್ಕಿ ಡ್ರೋನ್ ಬಳಸಲಾಗಿದೆ ಎಂದು ಹೇಳಲಾಗಿದೆ. ರಕ್ಷಾಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಹಾಗೂ ಟರ್ಕಿ ಬಾಂಧವ್ಯ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದೆ. ಟರ್ಕಿ ದೇಶವು ಪಾಕಿಸ್ತಾನಕ್ಕೆ ಮಿಲಿಟರಿ ಸಾಧನಗಳನ್ನು ನೀಡಿರುವುದು ಮಾತ್ರವಲ್ಲ ಪಾಕಿಸ್ತಾನಿ ಸೈನಿಕರಿಗೆ ಯುದ್ಧ ತರಬೇತಿಯನ್ನು ನೀಡಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದೊಂದಿಗಿನ ಟರ್ಕಿಯ ಕಾರ್ಯತಂತ್ರದ ರಕ್ಷಣಾ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಆತಂಕಕಾರಿ ಮಟ್ಟದಲ್ಲಿ ಅಭಿವೃದ್ಧಿ ಆಗಿದೆ.
ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಯನ್ನು ಗುರಿಯಾಗಿಸಿಕೊಂಡು ಪಾಕ್ 300ಕ್ಕೂ ಹೆಚ್ಚು ಡ್ರೋನ್‌ಗಳ ದಾಳಿಯನ್ನು ಮಾಡಿತ್ತು. ಪಾಕಿಸ್ತಾನ ಸೇನೆಯು ಭಾರತದ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಭಾರತೀಯ ಸೇನೆಯ ಮೂಲಸೌಕರ್ಯವನ್ನೇ ಗುರಿಯಾಗಿಸಿಕೊಂಡಿತ್ತು. ಇನ್ನು ಪಾಕಿಸ್ತಾನ ಸಿಡಿಸಿದ ಡ್ರೋನ್‌ಗಳ ಅವಶೇಷಗಳನ್ನು ವಿಧಿವಿಜ್ಞಾನಕ್ಕೆ ಕಳುಹಿಸಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ಅವು ಟರ್ಕಿಯ Asisguard Songar drones ಡ್ರೋನ್‌ಗಳಾಗಿವೆ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.












Click it and Unblock the Notifications