ಚೀನಾ ಲಸಿಕೆಗೆ ಬೇಡಿಕೆ; ಟರ್ಕಿಗೆ ಚೀನಾದಿಂದ ಲಸಿಕೆ ಪೂರೈಕೆ

ಟರ್ಕಿ, ಡಿಸೆಂಬರ್ 25: ಚೀನಾದಲ್ಲಿ ಕೊರೊನಾ ಸೋಂಕಿನ ಲಸಿಕಾ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ. ಚೀನಾದ ಸಿನೋವ್ಯಾಕ್ ಲಸಿಕೆಯ ಪರೀಕ್ಷೆಯನ್ನು ಟರ್ಕಿಯಲ್ಲೂ ಪ್ರಯೋಗಿಸಿದ್ದು, ಶೇ 91ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಹೀಗಾಗಿ ಟರ್ಕಿಯು ಸಿನೋವ್ಯಾಕ್ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಕೆಲವೇ ದಿನಗಳಲ್ಲಿ ಲಸಿಕೆ ಟರ್ಕಿ ಸೇರಲಿದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕ ತಿಳಿಸಿದ್ದಾರೆ.

ಟರ್ಕಿಯ ರಾಜಧಾನಿ ಅಂಕಾರ, ಚೀನಾದ ಲಸಿಕೆಯೊಂದಿಗೆ ಫೈಜರ್ ನ 4.5 ಮಿಲಿಯನ್ ಡೋಸ್ ಗಳ ಪೂರೈಕೆಗೆ ಇನ್ನು ಕೆಲವೇ ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದು, ಸದ್ಯಕ್ಕೆ ಅಮೆರಿಕದ ಬೃಹತ್ ಔಷಧ ತಯಾರಕ ಸಂಸ್ಥೆ ಹಾಗೂ ಜರ್ಮನಿಯ ಲಸಿಕೆಗಳ ಪೂರೈಕೆಗೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ.

ಟರ್ಕಿ ಆರಂಭದಲ್ಲಿ ಮೂರು ಮಿಲಿಯನ್ ಸಿನೋವ್ಯಾಕ್ ಡೋಸ್ ಗಳನ್ನು ಸ್ವೀಕರಿಸಲಿದ್ದು, ಮುಂದಿನ ತಿಂಗಳಿನಿಂದ ಲಸಿಕಾ ಕಾರ್ಯಕ್ರಮ ಆರಂಭಿಸಲಿದೆ. ಹೀಗಾಗಿ ಹೆಚ್ಚುವರಿಯಾಗಿ 50 ಮಿಲಿಯನ್ ಡೋಸ್ ಗಳನ್ನೂ ಶೇಖರಣೆ ಇಟ್ಟುಕೊಳ್ಳಲಿದೆ. ಇನ್ನೆರಡು ದಿನಗಳಲ್ಲೇ ಚೀನಾದಿಂದ ಮೊದಲ ಲಸಿಕೆಗಳು ಟರ್ಕಿಗೆ ಬರಲಿವೆ ಎಂದು ಕೋಕಾ ತಿಳಿಸಿದ್ದಾರೆ.

Turkey To Recieve Chinas Sinovac Vaccine After Good Result

ಟರ್ಕಿಯಲ್ಲಿ ಚೀನಾದ ಲಸಿಕೆಯನ್ನು 7,371 ಮಂದಿ ಮೇಲೆ ಪ್ರಯೋಗಿಸಿದ್ದು, ಪ್ರಾಥಮಿಕ ಪರೀಕ್ಷೆಯು ಶೇ. 91ರಷ್ಟು ಫಲಿತಾಂಶ ನೀಡಿದೆ. ಮೂರನೇ ಹಂತದ ಪ್ರಯೋಗ ಇನ್ನೂ ಮುಕ್ತಾಯಗೊಂಡಿಲ್ಲ. ದಿನದಲ್ಲಿ ಸುಮಾರು 1.5 ಮಿಲಿಯನ್ ಅಥವಾ 2 ಮಿಲಿಯನ್ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಟರ್ಕಿ ಹೊಂದಿದ್ದು, ಲಸಿಕಾ ಕಾರ್ಯಕ್ರಮದ ಮೊದಲ ಹಂತದಲ್ಲಿ ಒಂಬತ್ತು ಮಿಲಿಯನ್ ಮಂದಿಗೆ ಲಸಿಕೆ ನೀಡುವ ಉದ್ದೇಶವಿರುವುದಾಗಿ ತಿಳಿಸಿದೆ.

83 ಮಿಲಿಯನ್ ಜನಸಂಖ್ಯೆ ಹೊಂದಿರುವ ಟರ್ಕಿಯಲ್ಲಿ ಇದುವರೆಗೂ ಕೊರೊನಾದಿಂದ 19,115 ಮರಣಗಳು ಸಂಭವಿಸಿವೆ. 2.2 ಮಿಲಿಯನ್ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+