ಡೊನಾಲ್ಡ್ ಟ್ರಂಪ್ ಟ್ಯಾಕ್ಸ್ ಎಫೆಕ್ಟ್, ಭವಿಷ್ಯದಲ್ಲಿ ಅಮೆರಿಕಗೆ ಅಪಾಯ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೋ ಮನಸ್ಸಿಗೆ ಬಂದ ರೀತಿ ಎದುರಾಳಿ ದೇಶಗಳ ವಿರುದ್ಧ ತೆರಿಗೆ ಯುದ್ಧ ಸಾರಿದ್ದಾರೆ. ಭಾರತ, ಕೆನಡಾ, ಮೆಕ್ಸಿಕೋ, ಯುರೋಪ್ ದೇಶಗಳ ಜೊತೆಗೆ ಚೀನಾ ಕೂಡ ಡೊನಾಲ್ಡ್ ಟ್ರಂಪ್ ಅವರ ಟ್ಯಾಕ್ಸ್ ಯುದ್ಧಕ್ಕೆ ಸಿಲುಕಿ ಚಿಂತಿಸುವ ವಾತಾವರಣ ನಿರ್ಮಾಣವಾಗಿದೆ. ಆದರೆ ಈ ರೀತಿ ಡೊನಾಲ್ಡ್ ಟ್ರಂಪ್ ಟ್ಯಾಕ್ಸ್ ಎಫೆಕ್ಟ್ ಸ್ವತಃ ಅಮೆರಿಕವನ್ನೇ ಭವಿಷ್ಯದಲ್ಲಿ ಕಾಡುವ ಮುನ್ಸೂಚನೆ ಸಿಗುತ್ತಿದೆ.

ಅಮೆರಿಕದ ನಂಬರ್ 1 ಸ್ಥಾನ ಅಲ್ಲಾಡಿ ಹೋಗುತ್ತಿದ್ದು, ಪರಿಸ್ಥಿತಿ ಸ್ವಲ್ಪ ಕೈಮೀರಿದರೂ ಈ ಸ್ಥಾನ ಕಳಚಿ ಬೀಳಲಿದೆ. ಇದೇ ಕಾರಣಕ್ಕೆ ಅಮೆರಿಕ ತನ್ನ ಸ್ಥಾನಮಾನ ಉಳಿಸಿಕೊಳ್ಳಲು ಸದ್ಯ ದೊಡ್ಡ ಮಟ್ಟಿಗೆ ಹೋರಾಟ ನಡೆಸುತ್ತಿದೆ. ಇದರ ಪರಿಣಾಮವಾಗಿ ಆದಾಯ ಹೆಚ್ಚಿಸಿಕೊಂಡು, ಸಾಲ ಕಡಿಮೆ ಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್‌ರ ಸರ್ಕಾರ ಎಲ್ಲಾ ಪ್ರಯತ್ನ ಮಾಡ್ತಿದೆ. ಅದೇ ರೀತಿ ಎದುರಾಳಿ ದೇಶಗಳ ವಿರುದ್ಧ, ಅತಿಹೆಚ್ಚು ತೆರಿಗೆ ವಿಧಿಸಿ & ಆ ಮೂಲಕ ತಮ್ಮ ಮೇಲಿನ ಭಾರವನ್ನ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಅಮೆರಿಕ. ಆದರೆ ಅದೇ ನಿರ್ಧಾರಗಳು ಇದೀಗ ಅಮೆರಿಕಗೆ ಮುಳುವಾಗುವ ಮುನ್ಸೂಚನೆ ಸಿಗುತ್ತಿದೆ.

Trump s New Tariffs and Their Impact on the Future of the USA

ಭವಿಷ್ಯದಲ್ಲಿ ಅಮೆರಿಕಗೆ ಅಪಾಯ?

ಅಮೆರಿಕದ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಅತ್ತ ಮುಳ್ಳು, ಇತ್ತ ಹಳ್ಳ ಎನ್ನುವಂತೆ ಆಗಿದೆ. ಯಾವ ಕಡೆ ಬಿದ್ದರೂ ಅಮೆರಿಕಗೆ ದೊಡ್ಡ ಅಪಾಯ ಗ್ಯಾರಂಟಿ ಎನ್ನುವ ವಾತಾವರಣ ಈ ಸಮಯದಲ್ಲಿ ನಿರ್ಮಾಣ ಆಗಿದೆ. ಅದರಲ್ಲೂ ಅಮೆರಿಕ ಇದೀಗ ಅತಿಹೆಚ್ಚು ತೆರಿಗೆ ವಿಧಿಸಿದ ಕಾರಣ ಯುರೋಪ್ ದೇಶಗಳು ಗರಂ ಆಗಿವೆ, ಅದೇ ರೀತಿ ಪಕ್ಕದ ದೇಶ ಕೆನಡಾ ಕೂಡ ಈ ವಿಚಾರದಲ್ಲಿ ರೊಚ್ಚಿಗೆದ್ದಿದೆ.

ಇನ್ನು ಭಾರತ & ಚೀನಾ ಕೂಡ ಮುಂದಿನ ದಿನಗಳಲ್ಲಿ ಇದೇ ವಿಚಾರವಾಗಿ ಅಮೆರಿಕ ವಿರುದ್ಧ ಖಡಕ್ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ರ ನಿರ್ಧಾರ ಮುಂದೆ ಅಮೆರಿಕದ ಭವಿಷ್ಯಕ್ಕೇ ಸಮಸ್ಯೆ ತಂದೊಡ್ಡುವ ಮುನ್ಸೂಚನೆ ನೀಡುತ್ತಿದೆ. ಹಾಗೇ ಅಮೆರಿಕದಲ್ಲಿನ ಹೂಡಿಕೆ ಮೇಲೆ ಕೂಡ ಇದು ಎಫೆಕ್ಟ್ ಮಾಡುವ ಸಾಧ್ಯತೆ ಇದೆ.

ಅಮೆರಿಕದಲ್ಲೇ ಪರ & ವಿರೋಧದ ಚರ್ಚೆ!

ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ತೆರಿಗೆ ನೀತಿಯಿಂದ ಹಿಂದೆ ಸರಿಯಬೇಕಾಗಿರುವ ಒತ್ತಡ ನಿರ್ಮಾಣ ಆಗಿದೆ. ಅಕಸ್ಮಾತ್ ಈ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದರೆ ಅದು ಮತ್ತೆ ಅಮೆರಿಕಗೆ ಅಡ್ಡಿ ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ಅಮೆರಿಕದ ಮಿತ್ರ ದೇಶಗಳು ಮುಂದೆ ತೆರಿಗೆ ಕಾರಣಕ್ಕೆ ಶತ್ರುಗಳಾಗಿ ಬದಲಾದರೂ ಅಚ್ಚರಿ ಇಲ್ಲ. ಹೀಗಾಗಿಯೇ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರದ ಬಗ್ಗೆ ಸ್ವತಃ ಅಮೆರಿಕದಲ್ಲೇ ಪರ & ವಿರೋಧದ ಚರ್ಚೆ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+