Donald Trump: ಇಂಗ್ಲಿಷ್ ಅಮೆರಿಕದ ರಾಷ್ಟ್ರಭಾಷೆ, ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ದೊಡ್ಡ ದೊಡ್ಡ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಸ್ವತಂತ್ರ್ಯಗೊಂಡು ಸುಮಾರು 250 ವರ್ಷಗಳಾದರೂ ಈವರೆಗೆ ರಾಷ್ಟ್ರ ಭಾಷೆ ಎಂಬುದೇ ಇರಲಿಲ್ಲ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆಗೆ ಸಹಿ ಹಾಕಿದ್ದು, ಇಂಗ್ಲಿಷ್ ಅಮೆರಿಕದ ರಾಷ್ಟ್ರಭಾಷೆಯಾಗಿ ಆಯ್ಕೆಯಾಗಿದೆ. ಟ್ರಂಪ್ ಅವರ ಈ ನಿರ್ಧಾರ ಇದೀಗ ಭಾರಿ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿದೆ.
ಅಮೆರಿಕದಲ್ಲಿ ಒಟ್ಟು 340 ಮಿಲಿಯನ್ ಪ್ರಜೆಗಳು ಅಂದರೆ, 34 ಕೋಟಿ ಜನರು ವಾಸ ಮಾಡ್ತಾ ಇದ್ದಾರೆ. ಈ 34 ಕೋಟಿ ಜನರ ಪೈಕಿ 68 ಅಂದ್ರೆ 6.8 ಕೋಟಿ ಜನರು ಬೇರೆ ಬೇರೆ ಭಾಷೆಯನ್ನ ಮಾತನಾಡುತ್ತಾರೆ. ಇನ್ನುಳಿದವರು ಇಂಗ್ಲಿಷ್ ಮಾತನಾಡುತ್ತಾರೆ ಎನ್ನುತ್ತದೆ ಅಂಕಿ ಅಂಶ. ಅದರಲ್ಲೂ ಮೂಲ ಅಮೆರಿಕನ್ ಭಾಷೆಗಳು ಸೇರಿದಂತೆ ಸ್ಪ್ಯಾನಿಷ್ & ಫ್ರೆಂಚ್ ಮಾತನಾಡುವ ಜನರು ಕೂಡ ಅಮೆರಿಕದಲ್ಲಿ ಹೆಚ್ಚಾಗಿ ಇದ್ದಾರೆ. ಹೀಗಿದ್ದಾಗ ದಿಢೀರ್ ಇಂಗ್ಲಿಷ್ ಭಾಷೆಯನ್ನ ರಾಷ್ಟ್ರಭಾಷೆ ಎಂದು ಘೋಷಣೆ ಮಾಡಿರುವುದು ಚರ್ಚೆಗೆ ನಾಂದಿ ಹಾಡಿದೆ.

160 ಸ್ಥಳೀಯ ಭಾಷೆಗಳಿಗೆ ಅನ್ಯಾಯ?
ದಿಢೀರ್ ಅಂತಾ ಡೊನಾಲ್ಡ್ ಟ್ರಂಪ್ ಇಂಗ್ಲಿಷ್ ಅನ್ನು ಅಮೆರಿಕ ರಾಷ್ಟ್ರ ಭಾಷೆಯಾಗಿ ಘೋಷಿಸಿ ಸಹಿ ಹಾಕಿರುವ ಬಗ್ಗೆ ಶ್ವೇತ ಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 160ಕ್ಕೂ ಹೆಚ್ಚು ಸ್ಥಳೀಯ ಅಮೆರಿಕನ್ ಭಾಷೆಗಳನ್ನು ಹೊರತು ಪಡಿಸಿ ಈ ರೀತಿಯಾಗಿ ಇಂಗ್ಲಿಷ್ ಸ್ಥಾನಮಾನ ನೀಡಿರುವುದು ಭಾರಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ ಟ್ರಂಪ್ ನಿರ್ಧಾರದಿಂದ ಅಮೆರಿಕದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.
ಬ್ರಿಟನ್ ಸಾಮ್ರಾಜ್ಯದ ಸಮಯದಲ್ಲಿ ಈ ದೇಶವನ್ನ ಅಂದ್ರೆ ಅಮೆರಿಕದ ನೆಲವನ್ನ ಬ್ರಿಟೀಷರು ವಶಕ್ಕೆ ಪಡೆದು ಆಳುತ್ತಿದ್ದರು. ಆ ನಂತರ ಸ್ವಾತಂತ್ರ್ಯ ಹೋರಾಟ ನಡೆದು ಅಮೆರಿಕದ ಪ್ರತ್ಯೇಕ ದೇಶವಾಗಿತ್ತು. ಆದರೆ, ಅದಕ್ಕೂ ಮೊದಲೇ ಅಮೆರಿಕದಲ್ಲಿ ಹಲವು ಭಾಷೆಗಳು ಅಸ್ತಿತ್ವದಲ್ಲಿ ಇದ್ದವು. ಹೀಗಿದ್ದಾಗ ದಿಢೀರ್ ಅಂತಾ ಒಂದು ಭಾಷೆಗೆ ರಾಷ್ಟ್ರಭಾಷೆ ಸ್ಥಾನಮಾನ ಸಿಕ್ಕಿದ್ದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.












Click it and Unblock the Notifications