ಟ್ರಂಪ್ ಟ್ಯಾಕ್ಸ್ ಆದೇಶವೇ ವರದಾನ: ಕೆನಡಾದಲ್ಲಿ ಲಿಬರಲ್ ಪಕ್ಷಕ್ಕೆ ಮುನ್ನಡೆ, ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ ಫಿಕ್ಸ್!
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಗೂ ತೀವ್ರ ಆರ್ಥಿಕ ಸಂಕಷ್ಟದ ನಡುವೆ ಕೆನಡಾದ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಲ್ಲಿ ಮಾರ್ಕ್ ಕಾರ್ನಿ ಅವರು ಯಶಸ್ವಿಯಾಗಿದ್ದಾರೆ. ಕೆನಡಾದ ಲಿಬರಲ್ ಪಕ್ಷದಿಂದ ಅವರನ್ನು ತಾತ್ಕಾಲಿಕವಾಗಿ ಅಥವಾ ಮಧ್ಯಂತರ ಅವಧಿಗೆ ಕೆನಡಾದ ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಹಾಗೂ ಆರ್ಥಿಕ ಸಂಕಷ್ಟದಂತಹ ಸಂದರ್ಭದಲ್ಲಿ ಕೆನಡಾದಲ್ಲಿ ಲಿಬರಲ್ ಪಕ್ಷವೇ ಅಧಿಕಾರಕ್ಕೆ ಬರಲಿದೆಯೇ ಎನ್ನುವ ಅನುಮಾನ ಶುರುವಾಗಿತ್ತು. ಆದರೆ, ಮಾರ್ಕ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಟರ್ನ್ ಟ್ಯಾಕ್ಸ್ ಹಾಗೂ ತೆರಿಗೆ ನೀತಿಗಳನ್ನು ವಿರೋಧಿಸುತ್ತಲ್ಲೇ ಜನರಿಂದ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೇ ಇವರ ಆರ್ಥಿಕ ನೀತಿಗಳಿಂದಲೂ ಪೂರ್ಣ ಪ್ರಮಾಣದಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುವುದಕ್ಕೆ ಕಾರಣವಾಗಿದೆ. ಇದೀಗ ಲಿಬರಲ್ ಪಕ್ಷಕ್ಕೆ ಭಾರೀ ಮುನ್ನಡೆ ಸಿಕ್ಕಿದೆ.
ಕೆನಡಾದ ಪ್ರಧಾನಿಯಾಗಿ ಪ್ರಧಾನಿ ಮಾರ್ಕ್ ಕಾರ್ನಿ ಅವರು ಆಯ್ಕೆಯಾಗಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಾರ್ಕ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಮೇಲೆ ಹೇರಿದ್ದ ಭಾರೀ ದೊಡ್ಡ ಮಟ್ಟದ ರಿಟರ್ನ್ ಟ್ಯಾಕ್ಸ್ ಬಗ್ಗೆ ವಾಗ್ದಾಳಿ ನಡೆಸಿದ್ದರು. ಮಧ್ಯಂತರ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಿಂದಲೂ ಅವರು ಅಮೆರಿಕದ ನೀತಿಗಳನ್ನು ಗಂಭೀರವಾಗಿ ಟೀಕಿಸಿದ್ದರು. ಅಲ್ಲದೇ ಕೆನಡಾದಲ್ಲಿ ಆರ್ಥಿಕ ಸುಧಾರಣೆ ತರುವುದಕ್ಕೆ ಪ್ರಯತ್ನಿಸಿದ್ದರು. ಈ ಚುನಾವಣೆಯಲ್ಲಿ ಅದೆಲ್ಲವೂ ಕೈಹಿಡಿದಿದೆ.

ಅಲ್ಲದೇ ಈ ಹಿಂದೆ ಕೆನಡಾ ಹಾಗೂ ಭಾರತ ಸೇರಿದಂತೆ ಕೆಲವು ದೇಶಗಳೊಂದಿಗೆ ಸಂಬಂಧ ಉತ್ತಮವಾಗಿರಲಿಲ್ಲ. ಆದರೆ ಕಾರ್ನ್ ಅವರು ಭಾರತವೂ ಸೇರಿದಂತೆ ವಿವಿಧ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದರು. ಇದೀಗ ಚುನಾವಣೆ ಫಲಿತಾಂಶಗಳು ಬರುತ್ತಿವೆ. ಪೂರ್ಣ ಪ್ರಮಾಣದ ಫಲಿತಾಂಶವು ಮಂಗಳವಾರದ ಅಂತ್ಯಕ್ಕೆ ಅಥವಾ ಬುಧವಾರ ಪ್ರಕಟವಾಗುವ ಸಾಧ್ಯತೆ ಇದೆ. ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡಿದ್ದು, ಮಾರ್ಚ್‌ನಿಂದ ಕಾರ್ನಿ ಅವರು ಮಧ್ಯಂತರ ಪ್ರಧಾನಿಯಾಗಿದ್ದರು.
ಟ್ರಂಪ್ ತಂದ ಸಂಕಷ್ಟವೇ ಲಾಭ: ಇನ್ನು ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳೇ ವರದಾನವಾಯಿತು ಎಂದು ಹೇಳಬಹುದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ, ಮೆಕ್ಸಿಕೋ ಹಾಗೂ ಚೀನಾದ ಮೇಲೆ ಮಿತಿ ಮೀರಿ ರಿಟರ್ನ್ ಟ್ಯಾಕ್ಸ್ ವಿಧಿಸಿದ್ದರು. ಇದಕ್ಕೆ ಕೆನಡಾ ಸಹ ಪ್ರತಿ ಟ್ಯಾಕ್ಸ್ ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು. ಅಮೆರಿಕದ ನಿರ್ಧಾರಗಳನ್ನು ಕೆನಡಾದ ಪ್ರಧಾನಿ ಟೀಕಿಸಿದ್ದರು.
ಕೆನಡಾ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇದೆ. ಇಲ್ಲಿನ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಅಮೆರಿಕದ ಟ್ಯಾಕ್ಸ್ ನೀತಿ ಸಹ ಆರ್ಥಿಕತೆಗೆ ಪೆಟ್ಟು ಕೊಟ್ಟಿತ್ತು. ಮಾರ್ಕ್ ಈ ಸಮಸ್ಯೆಗಳನ್ನು ಹೆಚ್ಚು ಎಚ್ಚರಿಕೆಯಿಂದ ನಿಭಾಯಿಸಿದರು. ಕೆನಡಾದ ಚುನಾವಣೆಯನ್ನು ಹಾಗೂ ಅಲ್ಲಿನ ಜನಾಭಿಪ್ರಾಯ ಹೇಗಿದೆ ಎನ್ನುವುದನ್ನು ನೆರೆಯ ದೇಶಗಳು ಸಹ ಸೂಕ್ಷ್ಮವಾಗಿ ಗಮನಿಸಿದ್ದವು.












Click it and Unblock the Notifications