Donald Trump: ಜಪೋರಿಝಿಯಾ ಅಣು ವಿದ್ಯುತ್ ಸ್ಥಾವರ ಅಮೆರಿಕದ ವಶಕ್ಕೆ?

ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ನೆಪದಲ್ಲಿ ಇದೀಗ ಅಮೆರಿಕ ಮಾಡುತ್ತಿರುವ ಕಿರಿಕಿರಿ ಒಂದೆರಡಲ್ಲ. ರಷ್ಯಾ & ಉಕ್ರೇನ್ ಯುದ್ಧ ನಿಂತರೆ ಇಡೀ ಜಗತ್ತೇ ನೆಮ್ಮದಿಯಾಗಿ ಇರಬಹುದು ಅಂತಾ ಹೇಳುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಲ್ಲಗೆ ತಮ್ಮ ಬೇಳೆಯನ್ನೂ ಬೇಯಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಹಲವು ಬೇಡಿಕೆ ಇಟ್ಟಿರುವ ಇದೇ ಟ್ರಂಪ್ ಅವರು ಇದೀಗ ಉಕ್ರೇನ್‌ನ ಬಹುದೊಡ್ಡ ಜಾಗವನ್ನೇ ಕಬ್ಜಾ ಮಾಡಲು ಸ್ಕೇಚ್ ಹಾಕಿ ಕೂತಿರುವುದು ಬಟಾಬಯಲಾಗಿದೆ.

ಹೌದು, ಡೊನಾಲ್ಡ್ ಟ್ರಂಪ್ ಇದೀಗ ಮಹತ್ವದ ಬೇಡಿಕೆ ಒಂದನ್ನ ಉಕ್ರೇನ್ ಮುಂದಿಟ್ಟಿದ್ದಾರೆ. ಈ ಡಿಮ್ಯಾಂಡ್ ಕಂಡು ಉಕ್ರೇನ್ ಮಾತ್ರವಲ್ಲ ಸ್ವತಃ ರಷ್ಯಾ ಕೂಡ ಶಾಕ್ ಆಗಿದೆ. ಯಾಕೆ ಅಂದ್ರೆ ಇದೀಗ ರಷ್ಯಾ & ಉಕ್ರೇನ್ ಯುದ್ಧ ನಿಂತ ತಕ್ಷಣವೇ ಜಪೋರಿಝಿಯಾ ಅಣು ವಿದ್ಯುತ್ ಸ್ಥಾವರ ಅಂದ್ರೆ ಉಕ್ರೇನ್‌ನ ನ್ಯೂಕ್ಲಿಯರ್ ಪ್ಲಾಂಟ್ ನಮ್ಮ ವಶಕ್ಕೆ ನೀಡಬೇಕು ಎಂದಿದ್ದಾರೆ ಟ್ರಂಪ್. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಬೇಡಿಕೆ ಕಂಡು ಇದೀಗ ಉಕ್ರೇನ್ ಜೊತೆಗೆ ರಷ್ಯಾ ಕೂಡ ಶಾಕ್ ಆಗಿದ್ದು, ಅಕಸ್ಮಾತ್ ಈ ಡಿಮ್ಯಾಂಡ್‌ಗೆ ಜೈ ಎಂದರೆ ಮುಂದೆ ದೊಡ್ಡ ಸಮಸ್ಯೆ ಆಗುವುದು ರಷ್ಯಾಗೆ ಎನ್ನಲಾಗುತ್ತಿದೆ.

Trump Requests Zaporizhzhia Power Plant for US During Ukraine War Briefing

ಟ್ರಂಪ್ ಡಿಮ್ಯಾಂಡ್‌ಗೆ ಗ್ರೀನ್ ಸಿಗ್ನಲ್?

ಉಕ್ರೇನ್ ಅಧ್ಯಕ್ಷ ಮಾಡಿಕೊಂಡ ಎಡವಟ್ಟು ಇಂದು ಆ ದೇಶವನ್ನು ಅಕ್ಷರಶಃ ಬೀದಿಯಲ್ಲೇ ನಿಲ್ಲಿಸಿದೆ. ಸುಮ್ಮನೆ ಇರದೆ ದೊಡ್ಡ ಯುದ್ಧವನ್ನು ಮೈಮೇಲೆ ಎಳೆದುಕೊಂಡು ನರಳುತ್ತಿದೆ ಉಕ್ರೇನ್ ದೇಶ. ಈಗ ರಷ್ಯಾ ಕೊಟ್ಟಿರುವ ಏಟು ಸುಧಾರಿಸಿಕೊಳ್ಳಲು ಉಕ್ರೇನ್‌ಗೆ ಇನ್ನು ಹತ್ತಾರು ವರ್ಷಗಳೇ ಬೇಕಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧ ನಿಲ್ಲಬೇಕು ಎಂಬ ಡಿಮ್ಯಾಂಡ್‌ನ ಉಕ್ರೇನ್ ಅಧ್ಯಕ್ಷ ಅಮೆರಿಕದ ಎದುರು ಇಟ್ಟಿದ್ದಾರೆ. ಹೀಗಿದ್ದಾಗ ಅಮೆರಿಕ ಕೂಡ ಹಲವಾರು ಡಿಮ್ಯಾಂಡ್ ಮುಂದಿಡುತ್ತಿದೆ.

ರಷ್ಯಾಗೆ ಮೊದಲ ಅಪಾಯ ಗ್ಯಾರಂಟಿ?

ಅಮೆರಿಕ ಇದೀಗ ಇಟ್ಟಿರುವ ಬೇಡಿಕೆಗೆ ಉಕ್ರೇನ್ ಓಕೆ ಎಂದುಬಿಟ್ಟರೆ, ಅಕಸ್ಮಾತ್ ಅಮೆರಿಕ ಜಪೋರಿಝಿಯಾ ಅಣು ವಿದ್ಯುತ್ ಸ್ಥಾವರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ ಇದು ಬಹುದೊಡ್ಡ ವಿನಾಶಕ್ಕೆ ನಾಂದಿ ಹಾಡಲಿದೆ. ಅದರಲ್ಲೂ ರಷ್ಯಾ ಶತ್ರು ಅಮೆರಿಕ ಪಕ್ಕದಲ್ಲೇ ಬಂದು ಕೂತರೆ ಪುಟಿನ್ ಪಡೆಗೆ ಭಯ ಗ್ಯಾರಂಟಿ ಎನ್ನಲಾಗುತ್ತಿದೆ. ಈ ದೃಷ್ಟಿಯಿಂದ ಕೂಡ ಇದೀಗ ಯೋಚನೆ ಮಾಡುತ್ತಿರುವ ರಷ್ಯಾ, ಅಮೆರಿಕ ಇಟ್ಟಿರುವ ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಾಗೇ ಕದನ ವಿರಾಮ ಘೋಷಣೆ ನಂತರ ಕೂಡ ಹದ್ದಿನ ಕಣ್ಣಿಡಲು ಇದೀಗ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+