Donald Trump: ಭಾರತ ಶೇ. 50 ತೆರಿಗೆ ಕಟ್ಟುವುದು ಕಡ್ಡಾಯ, ಭಾರತೀಯರಿಗೆ ಮೋಸ ಮಾಡಿದ ಟ್ರಂಪ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ & ಭಾರತೀಯರು ಮಾಡಿದ ಸಹಾಯ ಮರೆತವರ ರೀತಿ ಕಾಣ್ತಾ ಇದ್ದಾರೆ. ಆರ್ಥಿಕವಾಗಿ ಅಮೆರಿಕದ ಜೊತೆಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ಭಾರತ ಇದೀಗ ನಿಲುವು ಬದಲಾವಣೆ ಮಾಡಿಕೊಳ್ಳುವ ಸಮಯ ಬಂದಿದೆಯಾ? ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಪದೇ ಪದೇ ಕೆಣಕುವ ರೀತಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಪೈಕಿ ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಮೊದಲಿಗೆ ಶೇಕಡಾ 25 ರಷ್ಟು ತೆರಿಗೆ ಹಾಕುವ ಬಗ್ಗೆ ನಿರ್ಧಾರ ಪ್ರಕಟಿಸಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಆಘಾತ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಭಾರತ & ಭಾರತೀಯರ ಕೊಡುಗು ಕೂಡ ಭಾರಿ ದೊಡ್ಡ ಮಟ್ಟದಲ್ಲೇ ಇದೆ. ಯಾಕಂದ್ರೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಇದೇ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಬೆಂಬಲ ನೀಡಿ, ಸ್ವತಃ ಚುನಾವಣೆ ಪ್ರಚಾರ ಕಾರ್ಯ ಕೂಡ ಕೈಗೊಂಡಿದ್ದರು. ಅಲ್ಲದೆ ಡೊನಾಲ್ಡ್ ಟ್ರಂಪ್ ಗೆಲುವಿಗೆ ಅಂತಾ ವಿಶೇಷ ಪೂಜೆ ಕೂಡ ನಡೆಸಿ, ಭಾರತದ ಜನರು ಹೋಮ & ಹವನ ಕೈಗೊಂಡು ಹಾರೈಸಿದ್ದರು. ಹೀಗೆಲ್ಲಾ ಭಾರತೀಯರ ಬೆಂಬಲವನ್ನೂ ಪಡೆದು ಅಮೆರಿಕ ಅಧ್ಯಕ್ಷ ಹುದ್ದೆಗೆ ಆಯ್ಕೆ ಆಗಿದ್ದ ಡೊನಾಲ್ಡ್ ಟ್ರಂಪ್ ಇದೀಗ ಭಾರತಕ್ಕೆ ಮೋಸ ಮಾಡುತ್ತಿರುವ ಆರೋಪ ಕೇಳಿಬಂದಿದೆ.

Trump Imposes Additional 25 Tariff on Indian Imports of Russian Oil

ಶೇ. 25 + ಶೇ. 25 = ಶೇ. 50 ತೆರಿಗೆ!

ರಷ್ಯಾ ಜೊತೆಗೆ ಭಾರತ ಅತ್ಯುತ್ತಮ ಸ್ನೇಹ ಹೊಂದಿರುವುದು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ರಷ್ಯಾ ಮೂಲಕ ಭಾರತವು ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿ ಮಾಡಿತ್ತು ಅನ್ನೋ ಕಾರಣವನ್ನೇ ಮುಂದೆ ಇಟ್ಟುಕೊಂಡು, ಇದೀಗ ಡೊನಾಲ್ಡ್ ಟ್ರಂಪ್ ಭಾರಿ ಆಟ ಆಡುತ್ತಿದ್ದಾರೆ. ಹೀಗಿದ್ದಾಗ ಭಾರತದ ಉತ್ಪನ್ನಗಳ ಮೇಲೆ ಮೊದಲಿಗೆ ಶೇ. 25 ರಷ್ಟು ಸುಂಕ ಅಂದ್ರೆ ಟ್ಯಾಕ್ಸ್ ಹಾಕಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೆ ಪಿತ್ತ ನೆತ್ತಿಗೆ ಏರಿದಂತೆ ಕಾಣುತ್ತಿದೆ!

ಡೊನಾಲ್ಡ್ ಟ್ರಂಪ್ ಕ್ರಮಕ್ಕೆ ಆಕ್ರೋಶ!

ಹೀಗೆ ಭಾರತದ ಮೂಲಕ ಅಮೆರಿಕಗೆ ರಫ್ತು ಆಗುವ ವಸ್ತುಗಳ ಮೇಲೆ ಮೊದಲಿಗೆ ಶೇ. 25 ರಷ್ಟು ಟ್ಯಾಕ್ಸ್ ಹಾಕಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಸುಂಕ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಶೇಕಡಾ 25 ರಷ್ಟು ಟ್ಯಾಕ್ಸ್ ಹಾಕುವ ಮೂಲಕ ಒಟ್ಟು ಶೇ. 50 ತೆರಿಗೆ ಕಟ್ಟುವಂತೆ ಮಾಡಿದ್ದಾರೆ. ಭಾರತದ ವಸ್ತುಗಳ ಮೇಲೆ ಹೆಚ್ಚುವರಿ ಶೇ. 25 ರಷ್ಟು ತೆರಿಗೆ ಹಾಕುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿರುವುದು ಕಿಚ್ಚು ಹೊತ್ತಿಸಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಈ ವಿಚಾರ ದೊಡ್ಡ ಸದ್ದು ಮಾಡಿದ್ದು, ಭಾರತದ ಬೆನ್ನಿಗೆ ಇಡೀ ಜಗತ್ತೇ ನಿಲ್ಲುತ್ತಿದೆ. ಹಾಗೇ ಡೊನಾಲ್ಡ್ ಟ್ರಂಪ್ ಅವರ ಈ ವರ್ತನೆಗೆ ಖಂಡನೆ ಕೂಡ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+