ಭಾರತ & ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ- ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೆ ಕಿರಿಕ್! Operation Sindoor
ಕೋಗಿಲೆ ಬಣ್ಣ ಬದಲಾಗೋದಿಲ್ಲ, ಡೊನಾಲ್ಡ್ ಟ್ರಂಪ್ ಬುದ್ಧಿ ಸರಿಯಾಗೋದಿಲ್ಲ ಅನ್ನೋ ಮಾತು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ಭಾರತದ ಬಗ್ಗೆ ಬಾಯಿಗೆ ಬಂದ ರೀತಿ ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಸ್ವಲ್ಪ ದಿನ ಸೈಲೆಂಟ್ ಆಗಿದ್ದರು. ಇದೀಗ ಮತ್ತೊಮ್ಮೆ ಭಾರತ & ಪಾಕಿಸ್ತಾನ ಯುದ್ಧದ ವಿಚಾರದಲ್ಲಿ ವಿವಾದದ ಬೆಂಕಿ ಹೊತ್ತಿಸುವ ರೀತಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಹೇಳಿದ್ದು ಏನು? ಮುಂದೆ ಓದಿ.
ಡೊನಾಲ್ಡ್ ಟ್ರಂಪ್ ಕಿರಿಕ್ ಇವತ್ತು ನಿನ್ನೆಯದ್ದಲ್ಲ, ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಮೊದಲ ದಿನದಿಂದಲೇ ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾ ದೊಡ್ಡ ವಿವಾದ ಎಬ್ಬಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಡುತ್ತಿರುವ ರೀತಿ ನೋಡಿದರೆ ಜಾಗತಿಕವಾಗಿ, ಅಮೆರಿಕ & ಇತರ ದೇಶಗಳ ನಡುವಿನ ಸಂಬಂಧ ಹಾಳಾಗಿ ಹೋಗುವುದು ಗ್ಯಾರಂಟಿ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ ತಜ್ಞರು. ಹೀಗಿದ್ದಾಗಲೇ ಮತ್ತೊಮ್ಮೆ ಭಾರತ & ಪಾಕಿಸ್ತಾನ ಯುದ್ಧ ವಿಚಾರದಲ್ಲಿ ಟ್ರಂಪ್ ನೀಡಿರುವ ಹೊಸ ಹೇಳಿಕೆ ಕಿಚ್ಚು ಹೊತ್ತಿಸಿದೆ!

ಏನಪ್ಪಾ ಇದು ಟ್ರಂಪ್ ಕಿರಿಕ್?
ಅಂದಹಾಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಪೋಸಾ ಅಮೆರಿಕ ಭೇಟಿಯಲ್ಲಿ ಇದ್ದಾರೆ, ಈ ಹಿನ್ನೆಲೆ ರಾಮಪೋಸಾ ಅವರ ಜೊತೆಗೆ ಡೊನಾಲ್ಡ್ ಟ್ರಂಪ್ ಮೀಟಿಂಗ್ ಮಾಡುತ್ತಿದ್ದರು. ಇದೇ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತ & ಪಾಕಿಸ್ತಾನ ಯುದ್ಧ ವಿಚಾರ ಪ್ರಸ್ತಾಪ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಪೋಸಾ ಎದುರು ಭಾರಿ ಬಿಲ್ಡಪ್ ಕೊಡುತ್ತಾ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತುಂಬಿದ್ದ ವಾತಾವರಣ ನಾವು ತಿಳಿಗೊಳಿಸಿದ್ದೇವೆ ಎಂದಿದ್ದಾರೆ. ಈ ವಿಚಾರವಾಗಿ ಭಾರಿ ದೊಡ್ಡ ವಿವಾದ ಇದೀಗ ಭುಗಿಲೆದ್ದಿದೆ. ಅಲ್ಲದೆ ಡೊನಾಲ್ಡ್ ಟ್ರಂಪ್‌ಗೆ ಮತ ಹಾಕಿ & ಗೆಲುವಿಗೆ ಶ್ರಮ ವಹಿಸಿದ್ದ ಭಾರತೀಯರು ಬೇಸರ ಹೊರ ಹಾಕುತ್ತಿದ್ದಾರೆ.
ಭಾರತದ ಕಡೆಯಿಂದ ಟ್ರಂಪ್‌ಗೆ ತಿರುಗೇಟು!
ಡೊನಾಲ್ಡ್ ಟ್ರಂಪ್ ಹಿಂಗೆಲ್ಲಾ ಓಳು ಅಂದ್ರೆ ಸುಳ್ಳು ಹೇಳಿಕೊಂಡು ಹೋಗುತ್ತಿರುವ ಹಿನ್ನೆಲೆ ಭಾರತ ಕೂಡ ಸರಿಯಾಗಿ ತಿರುಗೇಟು ನೀಡುತ್ತಾ ಬಂದಿದೆ. ಅದರಲ್ಲೂ ಭಾರತದ ಆಂತರಿಕ ವಿಚಾರದಲ್ಲಿ ಕೈಹಾಕುವ ಬುದ್ಧಿ ಡೊನಾಲ್ಡ್ ಟ್ರಂಪ್‌ಗೆ ಇದೆ ಎಂಬುದೇ ದೊಡ್ಡ ವಿನಾಶ & ಸಮಸ್ಯೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಭಾರತ ಕೂಡ ಈ ವಿಚಾರದಲ್ಲಿ ಅಲರ್ಟ್ ಆಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುವ ಹೇಳಿಕೆಗಳಿಗೆ ಸೂಕ್ತವಾಗಿ ತಿರುಗೇಟು ನೀಡುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ ಕೂಡ ಅಮೆರಿಕ & ಭಾರತದ ಸಂಬಂಧ ಹಾಳಾಗುತ್ತಿದ್ದು, ಈ ರೀತಿ ಅಮೆರಿಕದ ಅಧ್ಯಕ್ಷರು ಹೇಳಿಕೆ ನೀಡುವುದು ಸರಿಯಲ್ಲ ಅಂತಾ ಇದೀಗ ಭಾರತ ಮೂಲದ ಅಮೆರಿಕನ್ನರು ಎಚ್ಚರಿಕೆ ನೀಡುತ್ತಿದ್ದಾರೆ.












Click it and Unblock the Notifications