ನಾಲ್ಕು ದಿನದಲ್ಲಿ 11,500 ವಿಮಾನಗಳ ಸಂಚಾರ ರದ್ದುಗೊಳಿಸಲು ಓಮಿಕ್ರಾನ್ ಕಾರಣ!

ನ್ಯೂಯಾರ್ಕ್, ಡಿಸೆಂಬರ್ 28: ಕ್ರಿಸ್ ಮಸ್ ಆಚರಣೆಗೆ ತೆರಳಿದ ಪ್ರಯಾಣಿಕರು ತಮ್ಮೂರಿಗೆ ವಾಪಸ್ ಆಗುವುದಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ಹಿನ್ನೆಲೆ ಶುಕ್ರವಾರದಿಂದ ಜಗತ್ತಿನಾದ್ಯಂತ ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದೆ.

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಕಳೆದ ಶುಕ್ರವಾರದಿಂದ ಸೋಮವಾರದವರೆಗೆ ಒಟ್ಟು 11,500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ. 10,000ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಭೀತಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ ಎಂದು ಹಲವು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಫ್ಲೈಟ್ ಟ್ರ್ಯಾಕರ್ ಫ್ಲೈಟ್‌ಅವೇರ್ ಪ್ರಕಾರ, ವಿಶ್ವದಾದ್ಯಂತ ಸೋಮವಾರ ಸುಮಾರು 3,000 ವಿಮಾನಗಳು ರದ್ದುಗೊಳಿಸಲಾಗಿದ್ದು, ಮಂಗಳವಾರ 1,100ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ವಾರೆಂಟೇನ್ ಅವಧಿ ಕಡಿತ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ವಾರೆಂಟೇನ್ ಅವಧಿ ಕಡಿತ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಮಿಕರ ಸಾಮೂಹಿಕ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಾರ್ಮಿಕರು ಸಾಧ್ಯವಾದಷ್ಟು ಬೇಗ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡುವ ಉದ್ದೇಶದಿಂದ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸೋಮವಾರ ರೋಗದ ಲಕ್ಷಣಗಳಿಲ್ಲದ ಕೋವಿಡ್ -19 ಸೋಂಕಿತರ ಪ್ರತ್ಯೇಕತೆಯ ಅವಧಿಯನ್ನು 10 ರಿಂದ 5 ದಿನಗಳಿಗೆ ಕಡಿತಗೊಳಿಸಿದೆ. ಹೊಸ ಮಾರ್ಗಸೂಚಿಗಳು ಐದು ದಿನಗಳ ಪ್ರತ್ಯೇಕತೆಯ ಅವಧಿಯನ್ನು "ಇತರರು ಸುತ್ತಲೂ ಇರುವಾಗ ಐದು ದಿನಗಳ ಕಾಲ ಮಾಸ್ಕ್ ಧರಿಸುವುದರ ಮೂಲಕ ಅನುಸರಿಸಬೇಕು" ಎಂದು ಸೂಚಿಸುತ್ತದೆ.

ಅಮೆರಿಕಾದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮ ಜಾರಿ

ಅಮೆರಿಕಾದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮ ಜಾರಿ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಕರಣಗಳು ಜನವರಿ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪುತ್ತವೆ ಎಂದು ಹೇಳಲಾಗುತ್ತಿದೆ. ಲಸಿಕೆ ಪಡೆದುಕೊಳ್ಳದ ಜನರಿಗೆ ಹೆಚ್ಚಾಗಿ ಸೋಂಕು ಬಾಧಿಸುವ ಸಾಧ್ಯತೆಗಳಿವೆ. "ಅಮೆರಿಕಾದಲ್ಲಿ ಆಸ್ಪತ್ರೆಗಳಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಆದರೆ ಹೊಸ ರೂಪಾಂತರಿಯನ್ನು ಎದುರಿಸುವ ನಿಟ್ಟಿನಲ್ಲಿ ದೇಶವು ಸಮರ್ಥವಾಗಿ ಅಣಿಯಾಗಿದೆ. ಅಮೆರಿಕನ್ನರು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ," ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಮೆರಿಕಾದ ರಾಜ್ಯಪಾಲರು ಹಾಗೂ ಆರೋಗ್ಯ ಇಲಾಖೆ ಉನ್ನತ ಸಲಹೆಗಾರರೊಂದಿಗೆ ಅಧ್ಯಕ್ಷ ಜೋ ಬೈಡನ್ ಸಭೆ ನಡೆಸಿದರು. ಈ ವೇಳೆ ಓಮಿಕ್ರಾನ್ ಸೋಂಕು 2021ರ ಆರಂಭದಲ್ಲಿ ಪತ್ತೆಯಾದ ಡೆಲ್ಟಾ ತಳಿಗಿಂತ ಹೆಚ್ಚು ಅಪಾಯಕಾರಿಯಾಗಿಲ್ಲ. ಡೆಲ್ಟಾ ರೀತಿ ಪರಿಣಾಮವನ್ನು ಬೀರುವುದಿಲ್ಲ. ಓಮಿಕ್ರಾನ್ ಸೋಂಕು ಕಾಳಜಿ ರೂಪಾಂತರವಾಗಿದ್ದು, ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಕಳೆದ ವರ್ಷ ಜನವರಿ ಹೊತ್ತಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ದಿನ 2,50,000 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ವಿಶ್ವದಲ್ಲೇ ಹೊಸ ದಾಖಲಾಗಿತ್ತು. ಇದೇ ಅಮೆರಿಕಾದಲ್ಲಿ ಕೊವಿಡ್-19 ಮಹಾಮಾರಿಗೆ ಈವರೆಗೂ 8,16,000ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.

ಯುರೋಪ್ ರಾಷ್ಟ್ರದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಹೊಸ ನಿಯಮ

ಯುರೋಪ್ ರಾಷ್ಟ್ರದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಹೊಸ ನಿಯಮ

* ಜಗತ್ತಿನಾದ್ಯಂತ ಕೊರೊನಾವೈರಸ್ ಲಸಿಕೆಗಳನ್ನು ನೀಡುವುದಕ್ಕೆ ಪರದಾಡುವಂತಾಗಿದೆ. ಏಕೆಂದರೆ ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವುವರು ಹಾಗೂ ಮೃತಪಟ್ಟವರಲ್ಲಿ ಅತಿಹೆಚ್ಚು ಜನರು ಲಸಿಕೆ ಪಡೆದುಕೊಳ್ಳದವರೇ ಆಗಿದ್ದಾರೆ. ಹಲವಾರು ದೇಶಗಳು ಲಾಕ್‌ಡೌನ್‌ ಅನ್ನು ಮರು ಜಾರಿಗೊಳಿಸುತ್ತಿದ್ದಂತೆ, ಫ್ರಾನ್ಸ್ ಮನೆಯಲ್ಲಿಯೇ ಇರುವ ಆದೇಶವನ್ನು ತಡೆಯಿತು.

* ಡೆನ್ಮಾರ್ಕ್ ಮತ್ತು ಐಸ್ ಲ್ಯಾಂಡ್ ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದಂತೆ ವಾರದಲ್ಲಿ ಮೂರು ದಿನ ವರ್ಕ್ ಫ್ರಾಂ ಹೋಮ್ ಮಾಡುವಂತೆ ಸರ್ಕಾರವು ಆದೇಶ ಹೊರಡಿಸಿತು.

* ಕಳೆದ ಒಂದೇ ವಾರದಲ್ಲಿ ಇಂಗ್ಲೆಂಡ್ ಪ್ರೀಮಿಯರ್ ಲೀಗ್, 103 ಆಟಗಾರರು ಹಾಗೂ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

* ಜನವರಿ 3ರಿಂದ ಮಧ್ಯರಾತ್ರಿವರೆಗೆ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ತೆರೆಯುವುದಕ್ಕೆ ಗ್ರೀಸ್ ಸರ್ಕಾರ ನಿರ್ಬಂಧ ವಿಧಿಸಿದೆ.

Recommended Video

    Ashes : Australia ಮೂರನೇ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada
    ಚೀನಾದಲ್ಲಿ ಕೊರೊನಾವೈರಸ್ ಕಥೆ

    ಚೀನಾದಲ್ಲಿ ಕೊರೊನಾವೈರಸ್ ಕಥೆ

    ಚೀನಾದ ನಗರ ಕ್ಸಿಯಾನ್‌ನಲ್ಲಿ, 21 ತಿಂಗಳುಗಳಲ್ಲಿ ಎದುರಾದ ಅತ್ಯಂತ ಕೆಟ್ಟ ಕೊವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಪರದಾಡುವಂತಾಗಿದೆ. ಸುಮಾರು 13 ದಶಲಕ್ಷ ನಿವಾಸಿಗಳು ಈಗಾಗಲೇ ಕ್ಸಿಯಾನ್‌ನಲ್ಲಿ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ. ಅಲ್ಲಿ ಕೊವಿಡ್ ನಿಯಂತ್ರಣ ಕ್ರಮಗಳನ್ನು ಸೋಮವಾರ "ಕಟ್ಟುನಿಟ್ಟಾಿಗಿ" ಜಾರಿಗೊಳಿಸಲಾಗಿದ್ದು, ಮಟ್ಟಕ್ಕೆ ಬಿಗಿಗೊಳಿಸಲಾಯಿತು, ನಿವಾಸಿಗಳನ್ನು ಪ್ರಯಾಣಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+