ಇರಾಕ್‌ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಮತ್ತೆ ರಾಕೆಟ್ ದಾಳಿ

Recommended Video

      ರಾಕೆಟ್ ಲ್ಯಾಂಡ್ ಆಗ್ತಿದ್ದಂತೆ ಜನರಲ್ಲಿ ಆತಂಕ | Iran | USA | Embassy | War | Oneindia Kannada

      ಬಾಗ್ದಾದ್, ಜನವರಿ 21: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿನ ಸರ್ಕಾರಿ ಹಾಗೂ ರಾಜತಾಂತ್ರಿಕ ಕಚೇರಿಗಳಿರುವ ಸಂಕೀರ್ಣದ ಬಳಿ ಇರಾನ್ ಮತ್ತೆ ರಾಕೆಟ್ ದಾಳಿ ನಡೆಸಿದೆ.

      ಅಮೆರಿಕ ರಾಯಭಾರಿ ಕಚೇರಿ ಬಳಿ 3 ರಾಕೆಟ್‌ಗಳು ದಾಳಿ ನಡೆಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಅಥವಾ ಕಟ್ಟಡಗಳೂ ನಾಶವಾಗಿಲ್ಲ. ಆದರೆ ಈ ದಾಳಿ ಉದ್ದೇಶವೇನಾಗಿತ್ತು ಎಂದು ತಿಳಿದುಬಂದಿಲ್ಲ.

      ಎರಡು ರಾಕೆಟ್‌ಗಳು ದಾಳಿ ನಡೆಸುತ್ತಿದ್ದಂತೆ ಬಾಗ್ದಾದ್‌ನಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ರಾಕೆಟ್ ಲ್ಯಾಂಡ್ ಆಗುತ್ತಿದ್ದಂತೆ ಸೈರನ್‌ಗಳು ಕೂಗಿಕೊಂಡಿದ್ದರಿಂದ ಜನರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.

      Three Rockets Land Near US Embassy in Baghdad

      ಇರಾನ್ ಸೇನಾ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಅಮೆರಿಕ ಹತ್ಯೆ ನಡೆಸಿದ ಬಳಿಕ ಇರಾಕ್ ನಲ್ಲಿನ ಅಮೆರಿಕ ರಾಜತಾಂತ್ರಿಕ ಕಚೇರಿ ಬಳಿ ಸತತ ದಾಳಿ ನಡೆಯುತ್ತಲೇ ಇದೆ.

      ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಇರಾನ್ ಸೇನೆಯು ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದೆ.

      ಈ ಹಿಂದೆ ಬಾಗ್ದಾದ್‌ನ ಸೆಲೆಬ್ರೇಶನ್ ಸ್ಕ್ವೇರ್ ಮತ್ತು ಜದ್ರಿಯಾ ಪ್ರದೇಶ , ಸಲಾಹುದ್ದೀನ್ ಪ್ರಾಂತ್ಯದ ಬುಲಾದ್ ವಾಯುನೆಲೆಯ ಮೇಲೆ ಕೆಲವು ರಾಕೆಟ್‌ಗಳು ಅಪ್ಪಳಿಸಿವೆ.

      ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.ಅಮೆರಿಕ ರಾಯಭಾರಿ ಕಚೇರಿಯಿರುವ ಗ್ರೀನ್‌ ಜೋನ್‌ ಮತ್ತು ಅಮೆರಿಕ ಸೇನಾಪಡೆಯಿರುವ ವಾಯುನೆಲೆಯ ಮೇಲೆ ದಾಳಿ ನಡೆದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+