• search

ಪಾಕಿಸ್ತಾನದ ಬಹುತೇಕ ಬ್ಯಾಂಕ್ ಖಾತೆಗಳ ಮಾಹಿತಿಗೆ ಕನ್ನ, ಗ್ರಾಹಕರ ಹಣಕ್ಕೆ ಗುನ್ನ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಪಾಕಿಸ್ತಾನದ ಬಹುತೇಕ ಎಲ್ಲ ಬ್ಯಾಂಕ್ ಗಳ ಖಾತೆಗಳ ಮಾಹಿತಿ ಸೋರಿಕೆಯಾಗಿದ್ದು, ಕಳೆದ ತಿಂಗಳು (ಅಕ್ಟೋಬರ್) ಹಣ ದೋಚಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಹಲವರು ಈ ಬಗ್ಗೆ ದೂರು ನೀಡಿದ್ದು, ಇದೀಗ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದ 12ಕ್ಕೂ ಹೆಚ್ಚು ಬ್ಯಾಂಕ್ ಗಳ 8 ಸಾವಿರ ಗ್ರಾಹಕರ ಮಾಹಿತಿಗೆ ಅಕ್ಟೋಬರ್ 27 ಹಾಗೂ 28ರಂದು ಕನ್ನ ಹಾಕಲಾಗಿದೆ ಎಂದು ವರದಿ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 27ರಂದು 26 ಲಕ್ಷ ಪಾಕಿಸ್ತಾನಿ ರುಪಾಯಿಯನ್ನು ಬ್ಯಾಂಕ್ ಇಸ್ಲಾಮಿಯಿಂದ ಅಂತರರಾಷ್ಟ್ರೀಯ ಪಾವತಿ ಕಾರ್ಡ್ ಬಳಸಿ ಕಳವು ಮಾಡಲಾಗಿದೆ ಎಂದು ವರದಿ ಮಾಡಿದ್ದು, ಆ ನಂತರ ಅಂಥ ಯಾವುದೇ ಪಾವತಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

    300 ರುಪಾಯಿ ಹೊಂದಿಸಲಾಗದ ವ್ಯಕ್ತಿ ಖಾತೆಯಲ್ಲಿ 300 ಕೋಟಿ: ಇದು ಪಾಕಿಸ್ತಾನ!

    ಅಂತರರಾಷ್ಟ್ರೀಯ ಹಾಗೂ ಆನ್ ಲೈನ್ ಪಾವತಿ ಎಲ್ಲವನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಕೇಂದ್ರ ಬ್ಯಾಂಕ್ ಗಮನಕ್ಕೆ ತರಲಾಗಿದೆ. ಆರಂಭದಲ್ಲಿ ಅನಧಿಕೃತವಾಗಿ ವಿಥ್ ಡ್ರಾ ಮಾಡಿದ 26 ಲಕ್ಷ ರುಪಾಯಿಯನ್ನು ಗ್ರಾಹಕರಿಗೆ ಹಿಂತಿರುಗಿಸಲಾಗಿದೆ ಎಂದು ಬ್ಯಾಂಕ್ ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಮುಖ್ಯ ವಿಜ್ಞಾನಿ ಖಾತೆಯಿಂದಲೇ 30 ಲಕ್ಷ ರುಪಾಯಿ ಕಳವು

    ಮುಖ್ಯ ವಿಜ್ಞಾನಿ ಖಾತೆಯಿಂದಲೇ 30 ಲಕ್ಷ ರುಪಾಯಿ ಕಳವು

    ತಮ್ಮ ಬ್ಯಾಂಕ್ ಖಾತೆಯಿಂದ 30 ಲಕ್ಷ ರುಪಾಯಿ ಕಳವಾಗಿದೆ ಎಂದು ಖಾನ್ ಸಂಶೋಧನಾ ಪ್ರಯೋಗಾಲಯದ ಮಾಜಿ ಮುಖ್ಯ ವಿಜ್ಞಾನಿ ಸೋಮವಾರದಂದು ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದಾರೆ. ಎಫ್ ಐಎ ಸೈಬರ್ ಕ್ರೈಮ್ಸ್ ನಿರ್ದೇಶಕ ಮೊಹಮ್ಮದ್ ಶೋಯಬ್ ಮಾತನಾಡಿ, ಪಾಕಿಸ್ತಾನದ ಬಹುತೇಕ ಬ್ಯಾಂಕ್ ಗಳ ಮಾಹಿತಿ ಕಳವಾಗಿದೆ ಎಂದಿದ್ದಾರೆ.

    ವಿಶ್ವಾಸಾರ್ಹತೆ ಮರಳಿ ಪಡೆಯಲು ಬ್ಯಾಂಕ್ ಗಳ ಯತ್ನ

    ವಿಶ್ವಾಸಾರ್ಹತೆ ಮರಳಿ ಪಡೆಯಲು ಬ್ಯಾಂಕ್ ಗಳ ಯತ್ನ

    ಮಾಹಿತಿ ಸೋರಿಕೆಯಿಂದ ಎಷ್ಟು ಖಾತೆದಾರರು ಹಣ ಕಳೆದುಕೊಂಡಿದ್ದಾರೆ ಎಂದು ಈಗ ಹೇಳುವುದು ಸಾಧ್ಯವಿಲ್ಲ. ಕಳೆದುಕೊಂಡಿರುವ ವಿಶ್ವಾಸಾರ್ಹತೆ ಮರಳಿ ಪಡೆಯಲು ಬ್ಯಾಂಕ್ ಗಳು ಪ್ರಯತ್ನಿಸುತ್ತಿವೆ. ಖಾತೆದಾರರ ಖಾತೆಗಳಿಗೆ ಹಣವನ್ನು ಬ್ಯಾಂಕ್ ಗಳೇ ಹಿಂತಿರುಗಿಸುತ್ತಿರುವುದರಿಂದ ಜನರು ದೂರು ನೀಡುವುದಕ್ಕೆ ಮುಂದೆ ಬರುತ್ತಿಲ್ಲ. ಆ ಕಾರಣಕ್ಕೆ ಎಷ್ಟು ಮಂದಿಗೆ ಸಮಸ್ಯೆ ಆಗಿದೆ ಎಂಬ ಬಗ್ಗೆ ನಿಖರ ಸಂಖ್ಯೆ ತಿಳಿಯಲು ಆಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ

    ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ

    ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮಂಗಳವಾರದಂದು ಈ ಬಗ್ಗೆ ಹೇಳಿಕೆ ನೀಡಿ, ಕಳೆದ ವಾರ ಹಲವಾರು ಮಂದಿ ಖಾತೆದಾರರು ದೂರು ನೀಡಿದ ನಂತರ ಬ್ಯಾಂಕ್ ಗಳಿಗೆ ಸೂಚನೆ ಕೊಡಲಾಗಿದೆ. ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ಕಡೆಗೆ ಗಮನ ನೀಡುವಂತೆಯೂ ತಿಳಿಸಲಾಗಿದೆ. ಮಾಹಿತಿ ಸೋರಿಕೆಗೆ ಸ್ವತಃ ಬ್ಯಾಂಕ್ ಗಳೇ ಕಾರಣವೇ ಎಂಬ ಬಗ್ಗೆ ಕೂಡ ಪರಿಶೀಲಿಸಿಕೊಳ್ಳುವಂತೆ ಹೇಳಿರುವುದಾಗಿ ತಿಳಿಸಲಾಗಿದೆ.

    ಅಕ್ರಮ ಹಣ ವರ್ಗಾವಣೆ ಭೂತ ಬೆನ್ನಟ್ಟಿದೆ

    ಅಕ್ರಮ ಹಣ ವರ್ಗಾವಣೆ ಭೂತ ಬೆನ್ನಟ್ಟಿದೆ

    ಪಾಕಿಸ್ತಾನದಲ್ಲಿ ಅಕ್ರಮ ಹಣ ವರ್ಗಾವಣೆ ಎಂಬುದು ಅಲ್ಲಿನ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಡವರ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು, ಅವುಗಳ ಮೂಲಕ ದಂಧೆ ನಡೆಸುತ್ತಿರುವುದು ಕೂಡ ಈಚೆಗೆ ತಿಳಿದುಬಂದಿತ್ತು. ಅಮಾಯಕರು ತನಿಖಾಧಿಕಾರಿಗಳ ವಿಚಾರಣೆ ಎದುರಿಸುವ ಪರಿಸ್ಥಿತಿ ಬಂದಿತ್ತು. ಇದೀಗ ಪಾಕಿಸ್ತಾನದ ಬಹುತೇಕ ಬ್ಯಾಂಕ್ ಗಳ ಗ್ರಾಹಕರ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ವರದಿ ಆಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Pakistani authorities have said that bank accounts of thousands of individuals have been compromised and money stolen as a result of a massive hack last month.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more