US Elections 2024: ಟ್ರಂಪ್ ಗೆದ್ದ ಬೆನ್ನಲ್ಲೇ ಎಲಾನ್ ಮಸ್ಕ್ ಮೇಲೆ ಎಲ್ಲರ ಕಣ್ಣು!
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಡೊನಾಲ್ಡ್ ಟ್ರಂಪ್ ಗೆಲುವು ಇದೀಗ ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಒಂದು ಕಡೆ ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ಗೆಲುವು ಖುಷಿ ಕೊಟ್ಟಿದ್ದರೆ, ಇನ್ನೊಂದು ಕಡೆ ಅಮೆರಿಕದ ಶತ್ರು ದೇಶಗಳಿಗೆ ಹೊಸ ಟೆನ್ಷನ್ ಶುರುವಾಗಿದೆ. ಇಷ್ಟೆಲ್ಲದರ ನಡುವೆ ಈಗ ಡೊನಾಲ್ಡ್ ಟ್ರಂಪ್ ಅವರು ಗೆದ್ದ ತಕ್ಷಣ ಎಲಾನ್ ಮಸ್ಕ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ! ಹಾಗಿದ್ರೆ ಟ್ರಂಪ್ ಗೆಲ್ಲುವುದಕ್ಕೂ, ಎಲಾನ್ ಮಸ್ಕ್ ಮೇಲೆ ಕಣ್ಣು ಬೀಳುವುದಕ್ಕೂ ಸಂಬಂಧ ಏನು?
ಅಂದಹಾಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರನ್ನು 2 ಮತಗಳ ಮೂಲಕ ಅಳೆಯಲಾಗುತ್ತೆ. ಒಂದು ಪಾಪ್ಯುಲರ್ ವೋಟ್, ಇದನ್ನು ಒಟ್ಟು ಮತದಾನ ಅಂತಾ ಕೂಡ ಕರೆಯಬಹುದು. ಅದು ಹೇಗೆ ಅಂದ್ರೆ ಇಡೀ ಅಮೆರಿಕದಲ್ಲಿ ಸುಮಾರು 16 ಕೋಟಿ ಮತದಾರರು ಇದ್ದಾರೆ ಅಂತಾ ಅಂದುಕೊಳ್ಳಿ, ಆಗ ಈ 16 ಕೋಟಿ ಮತದಾರರ ಪೈಕಿ ಅಭ್ಯರ್ಥಿ ಪಡೆಯುವ ಒಟ್ಟು ಮತಗಳ ಸಂಖ್ಯೆಯನ್ನ, ಶೇಕಡವಾರು ಅಂದ್ರೆ ಪರ್ಸಂಟೇಜ್ ಲೆಕ್ಕದಲ್ಲಿ ಅಳತೆ ಮಾಡಿ ಪಾಪ್ಯುಲರ್ ವೋಟ್ ಎನ್ನಲಾಗುತ್ತದೆ. ಮತ್ತೊಂದು 'ಎಲೆಕ್ಟೊರಾಲ್ ಕಾಲೇಜು' ಮತಗಳು. ಹೀಗೆ ಎರಡೂ ವಿಭಾಗದಲ್ಲೂ ಡೊನಾಲ್ಡ್ ಟ್ರಂಪ್ ತಮ್ಮ ತಾಕತ್ ತೋರಿಸಿದ್ದಾರೆ. ಹೀಗಾಗಿ ಎಲಾನ್ ಮಸ್ಕ್‌ಗೆ ಭರ್ಜರಿ ಬೆಂಬಲ ಇದೀಗ ಸಿಗುತ್ತಿದೆ!

ಎಲಾನ್ ಮಸ್ಕ್‌ಗೆ ಭರ್ಜರಿ ಲಾಭ!
ಭವಿಷ್ಯದಲ್ಲಿ ಮನುಷ್ಯರಿಗೆ ಏನು ಬೇಕು? ಮನುಷ್ಯನ ಅಭಿವೃದ್ಧಿ ಹೇಗೆ ಸಾಗಲಿದೆ? ಎನ್ನುವ ಬಗ್ಗೆ ಎಲಾನ್ ಮಸ್ಕ್ ಅವರ ಕಂಪನಿ ಕೆಲಸ ಮಾಡುತ್ತಿದೆ. ಎಲಾನ್ ಮಸ್ಕ್ ಒಡೆತನದಲ್ಲಿರುವ 'ಟೆಸ್ಲಾ' ಕಂಪನಿ ದೊಡ್ಡ ಹೆಸರು ಮಾಡಿದ್ದು, ಅದರಲ್ಲೂ ಯಾವಾಗ ಡೊನಾಲ್ಡ್ ಟ್ರಂಪ್ ಪರವಾಗಿ ಎಲಾನ್ ಮಸ್ಕ್ ಹಣ ನೀಡಿದ್ದೂ ಅಲ್ಲದೆ ಪ್ರಚಾರ ಕೂಡ ನಡೆಸಿದರೂ ಅಲ್ಲಿಂದ ಮುಂದೆ ಮತ್ತಷ್ಟು ಸಂಚಲನ ಸೃಷ್ಟಿ ಆಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವಲ್ಲಿ ಎಲಾನ್ ಮಸ್ಕ್ ಪಾತ್ರ ಕೂಡ ದೊಡ್ಡದಾಗಿದೆ.
'ಟೆಸ್ಲಾ' ಕಂಪನಿ ಷೇರು ಅಬ್ಬರ
ಇಂತಹ ಸಮಯದಲ್ಲಿ ಎಲಾನ್ ಮಸ್ಕ್ ಒಡೆತನದಲ್ಲಿರುವ 'ಟೆಸ್ಲಾ' ಕಂಪನಿ ಷೇರು ಇದೀಗ ಆಕಾಶ ಮುಟ್ಟುತ್ತಿವೆ. ಷೇರು ಮಾರುಕಟ್ಟೆಯಲ್ಲಿ ಇದೀಗ ಎಲಾನ್ ಮಸ್ಕ್ ಒಡೆತನದ 'ಟೆಸ್ಲಾ' ಕಂಪನಿ ಷೇರು ಭಾರಿ ಏರಿಕೆ ಕಾಣುತ್ತಿದ್ದು, ಈ ಮೂಲಕ ಡೊನಾಲ್ಡ್ ಟ್ರಂಪ್ ಗೆಲುವು ಈ ಸಮಯದಲ್ಲಿ ಪರೋಕ್ಷವಾಗಿ ಎಲಾನ್ ಮಸ್ಕ್ ಅವರಿಗೆ ಲಾಭ ನೀಡುತ್ತಿದೆ. ಲಾಭ ಮಾತ್ರವಲ್ಲ ಅಮೆರಿಕದ ತಂತ್ರಜ್ಞಾನ ಕ್ಷೇತ್ರ ಕೂಡ ಹೊಸ ಹಾದಿಯ ಕಡೆಗೆ ದಾಪುಗಾಲು ಇಡುತ್ತಿದೆ.












Click it and Unblock the Notifications