ಗಾಜಾ ದಾಳಿಗೆ ಬಿದ್ದಿಲ್ಲ ಬ್ರೇಕ್.. ಮತ್ತೊಂದು ಆಘಾತಕಾರಿ ವರದಿ ಬಯಲು..

ಬೆಂಕಿ ಹೊತ್ತಿಕೊಂಡಿದೆ, ಜಗತ್ತಿನಾದ್ಯಂತ ಶಾಂತಿ ನಾಶವಾಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಭೂಮಿಯ ಮೇಲೆ ಯುದ್ಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಮನುಷ್ಯರೇ ಈ ಭೂಮಿ ಮೇಲಿನಿಂದ ಸಂಪೂರ್ಣ ನಾಶವಾಗಿ ಹೋಗುವ ಭಯ ಈಗ ಕಾಡುತ್ತಿದೆ. ಯಾಕಪ್ಪಾ ಅಂದ್ರೆ ಈ ಬಾರಿ ಮತ್ತೊಂದು ಮಹಾಯುದ್ಧ ನಡೆದರೆ ಜಗತ್ತು ಸಂಪೂರ್ಣ ನಾಶವಾಗುವುದು ಗ್ಯಾರಂಟಿ. ಯಾಕಂದ್ರೆ, ಮನುಷ್ಯರ ಬಳಿ ಭೂಮಿಯನ್ನೇ ನಾಶ ಮಾಡಬಲ್ಲ ಬಾಂಬ್‌ಗಳು ಇವೆ. ಹೀಗಿದ್ದಾಗ ಗಾಜಾ ಭಾಗದಿಂದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಹಮಾಸ್ ಮತ್ತು ಇಸ್ರೇಲ್‌ ಸೇನೆ ನಡುವೆ ಭೀಕರ ಯುದ್ಧವೇ ಆರಂಭವಾಗಿ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಇವತ್ತು ಯುದ್ಧ ನಿಲ್ಲುತ್ತದೆ, ನಾಳೆ ಯುದ್ಧ ನಿಲ್ಲುತ್ತದೆ ಅಂತಾನೇ ಅಲ್ಲಿ ಜನ ಕಾಯ್ತಿದ್ದಾರೆ. ಇಷ್ಟೆಲ್ಲಾ ಆದರೂ ಯುದ್ಧ ನಿಲ್ಲುತ್ತಿಲ್ಲ ರಕ್ತಪಾತಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಪ್ರಯತ್ನ ಮಾಡಿವೆ. ಆದ್ರೂ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ. ಇಂತಹ ಸಮಯದಲ್ಲೇ ಲೆಬನಾನ್ ಸೇರಿದಂತೆ ಇರಾನ್ & ಸಿರಿಯಾ ಕೂಡ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಮುಂದಾಗುತ್ತಿವೆ. ಇದು ಜಾಗತಿಕ ಮಟ್ಟದಲ್ಲಿ ಮತ್ತೊಂದು ತಿಕ್ಕಾಟಕ್ಕೆ ಕಾರಣವಾಗಿದ್ದು, ಇದೀಗ ಗಾಜಾ ಪಟ್ಟಿ ಯುದ್ಧದ ಬಗ್ಗೆ ಮತ್ತೊಂದು ಆಘಾತಕಾರಿ ವರದಿ ಬಯಲಾಗಿದೆ.

This Is How Gaza Strip Is Suffering After Israel Attack

ಗಾಜಾದಲ್ಲಿ 41,788 ಜನರ ಸಾವು?

2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್ & ಗಾಜಾ ಪಟ್ಟಿ ನಡುವಿನ ಯುದ್ಧ ಬರೋಬ್ಬರಿ 1 ವರ್ಷ ಪೂರೈಸುತ್ತಿದ್ದರೂ ನಿಲ್ಲುತ್ತಿಲ್ಲ. ಅದು ಬಿಡಿ ದಿನದಿಂದ ದಿನಕ್ಕೆ ಇಲ್ಲಿ ಯುದ್ಧದ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗೆ ಯುದ್ಧದ ತೀವ್ರತೆ ಹೆಚ್ಚಾದ ಕಾರಣಕ್ಕೆ, ಸಾವಿನ ಸಂಖ್ಯೆ ಕೂಡ ಮುಗಿಲು ಮುಟ್ಟುತ್ತಿದೆ. ಇದೀಗ 2023ರ ಅಕ್ಟೋಬರ್ 7ಕ್ಕೆ ಶುರುವಾದ ಈ ಯುದ್ಧ ಹತ್ತಿರ ಹತ್ತಿರ 1 ವರ್ಷದಲ್ಲಿ ಬರೋಬ್ಬರಿ 41,788 ಜನರ ಸಾವಿಗೆ ಕಾರಣವಾಗಿ ಲಕ್ಷಾಂತರ ಜನರು ಬೀದಿಗೆ ಬೀಳಲು ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜಗತ್ತಿನಾದ್ಯಂತ ಯುದ್ಧಗಳ ಸರಮಾಲೆ...

ಒಟ್ನಲ್ಲಿ ಏನೋ ಮಾಡಲು ಹೋಗಿ ಏನೇನೋ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಆರೋಪಗಳು ಕೂಡ ಕೇಳಿಬರುತ್ತಿವೆ. ಒಂದು ಕಡೆ ಈಗ ರಷ್ಯಾ & ಉಕ್ರೇನ್ ನಡುವಿನ ಯುದ್ಧದಲ್ಲಿ ನಿಷೇಧಿತ ಬಾಂಬ್ ಬಳಕೆ ಮಾಡಲಾಗಿದೆ. ಹಾಗೇ ಇನ್ನೊಂದು ಕಡೆ ಇಸ್ರೇಲ್ ಸೇನೆಯ ವಿರುದ್ಧ, ಲೆಬನಾನ್, ಇರಾನ್ & ಸಿರಿಯಾ ಸೇರಿದಂತೆ ಗಾಜಾ ಪಟ್ಟಿ ಯುದ್ಧ ಮಾಡುತ್ತಿದೆ. ಇದು ಸಾಲದು ಎನ್ನುವಂತೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಕೂಡ ಯುದ್ಧಕ್ಕೆ ಸಿದ್ಧವಾಗಿವೆ. ಹೀಗೆ ನಡೆಯುತ್ತಿದ್ದರೆ ಅತಿ ಶೀಘ್ರದಲ್ಲೇ 3ನೇ ಮಹಾಯುದ್ಧ ಗ್ಯಾರಂಟಿ ಎಂಬ ಭಯ ಹುಟ್ಟಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+